September 9, 2025
sathvikanudi - ch tech giant

ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ!?

Spread the love




ಭದ್ರಾವತಿ:
ವೈವಾಹಿಕ ಜೀವನದ ನಂಬಿಕೆ, ಪ್ರೀತಿ ಹಾಗೂ ಪವಿತ್ರತೆಯ ಮೇಲೆ ಘೋರ ಆಘಾತ ಹೇರಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ತೀರ್ಪು ನೀಡಿದೆ. ಪತಿಯನ್ನೇ ಸಂಚು ರೂಪಿಸಿ ಪ್ರಿಯಕರನ ಸಹಾಯದಿಂದ ಕೊಂದ ಪತ್ನಿ ಸೇರಿದಂತೆ ಇಬ್ಬರು ಅಪರಾಧಿಗಳಿಗೆ ಮರಣದಂಡನೆ ಹಾಗೂ ಮತ್ತೋರ್ವ ಆರೋಪಿಗೆ ಏಳು ವರ್ಷದ ಸಕಾರಾತ್ಮಕ ಕಾರಾಗೃಹವಾಸವನ್ನು ವಿಧಿಸಿದೆ.

ನ್ಯಾಯಮೂರ್ತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರ ಅಧ್ಯಕ್ಷತೆಯ ಪೀಠವು ಈ ಗಂಭೀರ ಪ್ರಕರಣವನ್ನು ಪರಿಶೀಲಿಸಿ, ಕಾನೂನು ಸಿದ್ಧಾಂತ ಹಾಗೂ ಸಾಕ್ಷ್ಯಾಧಾರಗಳ ಆಳವಾದ ವಿಮರ್ಶೆಯ ನಂತರ ತೀರ್ಪು ಪ್ರಕಟಿಸಿತು.

ಅಂತರಗಂಗೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಿ ಎಂಬ ಮಹಿಳೆ, ವೈವಾಹಿಕ ನಿಷ್ಠೆಯನ್ನು ಪಕ್ಕಕ್ಕೆ ಸರಿಸಿ ತನ್ನ ಪ್ರಿಯಕರ ಕೃಷ್ಣಮೂರ್ತಿ ಜೊತೆಗೂಡಿ ಪತಿಯನ್ನೇ ಕೊಲ್ಲುವ ಘೋರ ಸಂಚು ರೂಪಿಸಿದ್ದಳು. ದಾಂಪತ್ಯ ಬಾಂಧವ್ಯದ ಪ್ರತೀಕವಾಗಬೇಕಿದ್ದ ಕುಟುಂಬವನ್ನು ಅಕ್ರಮ ಸಂಬಂಧದ ವಿಷದಿಂದ ದುರಂತದ ದಾರಿಗೆ ಒಯ್ದಳು. ಈ ಸಂಚು ಕಾರ್ಯದಲ್ಲಿ ಸಹಭಾಗಿಯಾಗಿ, ಶಿವರಾಜ್ ಕೂಡಾ ಕೊಲೆಕೃತ್ಯಕ್ಕೆ ಕೈಜೋಡಿಸಿದ ಆರೋಪ ಸಾಬೀತಾಯಿತು.



ಘಟನೆಯ ಸುದೀರ್ಘ ವಿಚಾರಣೆಯ ಅವಧಿಯಲ್ಲಿ ಸಾಕ್ಷಿದಾರರ ಹೇಳಿಕೆಗಳು, ಫಾರೆನ್ಸಿಕ್ ವರದಿಗಳು ಹಾಗೂ ಪೊಲೀಸ್ ತನಿಖಾ ದಾಖಲೆಗಳೆಲ್ಲವೂ ಪತ್ನಿ ಲಕ್ಷ್ಮಿ ಮತ್ತು ಆಕೆಯ ಪ್ರಿಯಕರ ಕೃಷ್ಣಮೂರ್ತಿ ಪತಿಯ ಹತ್ಯೆಗೆ ನೇರ ಕಾರಣಕರ್ತರೆಂದು ಸ್ಪಷ್ಟಪಡಿಸಿತು. ನ್ಯಾಯಮೂರ್ತಿಯವರು ಇದನ್ನು “ಅತಿದಾರುಣ, ಮಾನವೀಯ ಮೌಲ್ಯಗಳನ್ನು ಕಾಲೆಳೆಯುವ, ಸಾಮಾಜಿಕ ಬದ್ಧತೆಯನ್ನು ಕುಸಿತಗೊಳಿಸುವ ಕೃತ್ಯ” ಎಂದು ವರ್ಣಿಸಿ, ಸಮಾಜದಲ್ಲಿ ಇಂತಹ ಹೀನಕೃತ್ಯಗಳು ಮರುಕಳಿಸದಂತೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತಿಮ ತೀರ್ಪಿನಲ್ಲಿ ಪತ್ನಿ ಲಕ್ಷ್ಮಿ ಹಾಗೂ ಆಕೆಯ ಪ್ರಿಯಕರ ಕೃಷ್ಣಮೂರ್ತಿ ಅವರಿಗೆ ಮರಣದಂಡನೆ ವಿಧಿಸಲಾಗಿದ್ದು, ಸಹ ಅಪರಾಧಿ ಶಿವರಾಜ್‌ಗೆ ಏಳು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡವನ್ನೂ ಸೇರಿಸಲಾಗಿದೆ.

ಈ ತೀರ್ಪು ನ್ಯಾಯಾಂಗದ ಕಠಿಣತೆಯನ್ನು ಪ್ರತಿಬಿಂಬಿಸುತ್ತಿದ್ದು, ಕುಟುಂಬದ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. “ಅಕ್ರಮ ಪ್ರೇಮ, ಸ್ವಾರ್ಥ ಹಾಗೂ ವೈವಾಹಿಕ ದ್ರೋಹಗಳು ಅಂತಿಮವಾಗಿ ಪಾತಕದ ಗಹ್ವರಕ್ಕೆ ಒಯ್ಯುತ್ತವೆ” ಎಂಬ ಸಂದೇಶವನ್ನು ಈ ತೀರ್ಪು ದೃಢವಾಗಿ ಸಾರಿದೆ.✍🏻

WhatsApp Image 2025-06-21 at 19.57.59
Trending Now