September 10, 2025
sathvikanudi - ch tech giant

Murder Case: ಪ್ರಿಯತಮೆ ಎದುರೇ ಮಹಿಳೆಯ ಅತ್ಯಾಚಾರ ಮಾಡಿ ಕೊಂದ ಪಾಪಿ!

Spread the love

Murder Case: ಕೃತ್ಯ ಎಸಗುವ ಮುನ್ನ ಮಹಿಳೆಗೆ ಚೆನ್ನಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿ ಕೊಲೆ  ಮಾಡಲಾಗಿದೆ. ಸಂಜೀವಪ್ಪ ಹಾಗೂ ಆತನ ಪ್ರಿಯತಮೆ ರಾಮಾಂಜಿನಮ್ಮ ಜೊತೆಗೂಡಿ ಈ ಕೊಲೆ ಕೃತ್ಯ ಎಸಗಿದ್ದಾರೆ.

ಚಿಕ್ಕಬಳ್ಳಾಪುರ: ತನ್ನ ಪ್ರಿಯತಮೆಯ (lover) ಎದುರೇ ಇನ್ನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ  ಬರ್ಬರವಾಗಿ ಕೊಲೆ ಮಾಡಿದ  ಪಾಪಿ ಪ್ರಿಯತಮನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕಾರ ನೀಡಿದ ಪ್ರಿಯತಮೆಯನ್ನೂ ಹೆಡೆಮುರಿ ಕಟ್ಟಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಕೊನಗಾನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಲುಮೇಲಮ್ಮ (40) ವರ್ಷ ಕೊಲೆಯಾದ‌ ಮಹಿಳೆ‌. ಸಂಜೀವಪ್ಪ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿ. ಕೃತ್ಯ ಎಸಗುವ ಮುನ್ನ ಮಹಿಳೆಗೆ ಚೆನ್ನಾಗಿ ಮದ್ಯ ಕುಡಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಸಂಜೀವಪ್ಪ ಹಾಗೂ ಆತನ ಪ್ರಿಯತಮೆ ರಾಮಾಂಜಿನಮ್ಮ ಜೊತೆಗೂಡಿ ಈ ಕೊಲೆ ಕೃತ್ಯ ಎಸಗಿದ್ದಾರೆ.

ಸಂಜೀವಪ್ಪ ಹಾಗೂ ರಾಮಾಂಜಿನಮ್ಮ ನಡುವೆ ಅನೈತಿಕ‌ ಸಂಬಂಧವಿತ್ತು. ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಲುಮೇಲಮ್ಮ ಅಡ್ಡಿಯಾಗಿದ್ದಳು. ಇದರಿಂದ ಆಕ್ರೋಶಗೊಂಡ ಇಬ್ಬರೂ ಸೇರಿ ಕೊಲೆ ಮಾಡಿರುವ ಅನುಮಾನವಿದೆ. ನಾಲ್ಕು ದಿನಗಳಿಂದ ಅಲುಮೇಲಮ್ಮ ಗ್ರಾಮದಲ್ಲಿ ಕಾಣಿಸಿರಲಿಲ್ಲ. ರಾಮಾಂಜಿನಮ್ಮ ವರ್ತನೆ‌ಯಿಂದ ಅನುಮಾನಗೊಂಡ ಗ್ರಾಮಸ್ಥರು ಆಕೆಯನ್ನು ವಿಚಾರಿಸಿಕೊಂಡಾಗ ಸತ್ಯ ಬಾಯಿಬಿಟ್ಟಿದ್ದಾಳೆ.ಊರಿನ ಹೊರಗಿನ ಕಾಡುಪ್ರದೇಶದಲ್ಲಿ ಅಲುಮೇಲಮ್ಮ ಶವ ಪತ್ತೆಯಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೂರು ದಾಖಲಿಸಿಕೊಂಡ‌ ಕೂಡಲೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

WhatsApp Image 2025-06-21 at 19.57.59
Trending Now