
ತುಮಕೂರು: ಕುಣಿಗಲ್ ಡಿವೈಎಸ್ಪಿ ಓಂ ಪ್ರಕಾಶ್, ಸರ್ಕಲ್ ಇನ್ಸ್‌ಪೆಕ್ಟರ್ ಮಾಧವ ನಾಯಕ್, ಅಮೃತೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಶಮಂತ್ ಗೌಡ, ಮತ್ತು ಎಸ್‌ಎಚ್‌ಒ ದಯಾನಂದ್ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಕೋರ್ಟ್ ಆದೇಶಿಸಿದೆ.
ಮಾರ್ಚ್ 23 ರಂದು ವಾಟರ್ ಮ್ಯಾನ್ ಗಂಗಾಧರ್ ಅವರನ್ನು ವಿಚಾರಣೆ ನೆಪದಲ್ಲಿ ಕುಣಿಗಲ್ ಠಾಣೆಗೆ ಬಂದು ಬಾಸುಂಡೆ ಬರುವಂತೆ ಬಾರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ನಡೆದ ಅನ್ಯಾಯವನ್ನು ಪ್ರಶ್ನಿಸಿ ಗಂಗಾಧರ್ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ನ್ಯಾಯಾಲಯವು ಎಲ್ಲಾ ಮಾಹಿತಿಗಳ ಪರಿಶೀಲನೆ ನಡೆಸಿದ ನಂತರ, ಡಿವೈಎಸ್ಪಿ ಓಂ ಪ್ರಕಾಶ್, ಸಿಪಿಐ ಮಾಧವ ನಾಯಕ್, ಪಿಎಸ್‌ಐ ಶಮಂತ್ ಗೌಡ ಮತ್ತು ಎಸ್‌ಎಚ್‌ಒ ದಯಾನಂದ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದೆ.
ಈ ಪ್ರಕರಣದಿಂದ ಪೊಲೀಸರ ನಿಯಮಾವಳಿ ಮತ್ತು ನ್ಯಾಯಾಂಗ ಪ್ರಕ್ರಿಯೆಯ ಮಹತ್ವವನ್ನು ಒತ್ತಿಹೇಳುತ್ತದೆ. ಕೋರ್ಟ್ ಆದೇಶವು ಗಂಗಾಧರ್ ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.