September 9, 2025
sathvikanudi - ch tech giant

ತಮಟೆ ಚಳುವಳಿಯಲ್ಲಿ ಸರ್ಕಾರದ ನೇಮಕಾತಿಗಳಿಗೆ ತಡೆಯೊಡ್ಡುವಂತೆ ಆಗ್ರಹ…!

Spread the love

ತುಮಕೂರು :

ಸುಪ್ರೀಂಕೋರ್ಟಿನ 2024ರ ಆ. 1ರ ತೀರ್ಪಿನಂತೆ ಒಳಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸುತ್ತಿರುವ ದಲಿತ ಸಮೂಹಗಳ ಒಕ್ಕೂಟ, ಇಂದು ದೊಡ್ಡ ತಮಟೆ ಚಳುವಳಿಯನ್ನು ಹಮ್ಮಿಕೊಂಡಿತ್ತು.

ಸರ್ಕಾರವು ನೇಮಕಾತಿಗಳ ಸಂಬಂಧವಾಗಿ ನಿಯಮಗಳನ್ನು ಪರಿಷ್ಕರಿಸಬೇಕು ಮತ್ತು ತುರ್ತು ಕ್ರಮ ಕೈಗೊಳ್ಳಬೇಕೆಂದು ಚಳುವಳಿದಾರರು ಒತ್ತಾಹಿಸಿದ್ದಾರೆ.

ಜಿಲ್ಲಾ ಮತ್ತು ಅಲವು ತಾಲ್ಲೂಕು ಗಳಿಂದ ಆಗಮಿಸಿದ ದಲಿತ ಸಮುದಾಯದ ಸದಸ್ಯರು, ತುಮಕೂರು ಟೌನ್‌ಹಾಲ್ ಬಳಿ ಸಭೆ ನಡೆಸಿದ ಬಳಿಕ, ಡಿಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.



ಮೆರವಣಿಗೆಯಲ್ಲಿ ನೂರಾರು ಜನರು ತಮಟೆ ಸದ್ದಿನೊಂದಿಗೆ ಪಾಲ್ಗೊಂಡಿದ್ದು, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು..

ಸರ್ಕಾರವು ನೇಮಕಾತಿಗಳ ಸಂಬಂಧವಾಗಿ ನಿಯಮವಳಿಗಳನ್ನು ಪರಿಷ್ಕರಿಸಬೇಕು ಮತ್ತು ತುರ್ತು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಹಿಸಿದ್ದಾರೆ.

ಈ ಚಳುವಳಿಯು ಶ್ರೇಣಿಬದ್ದ ಸಮುದಾಯಗಳ ಹಕ್ಕುಗಳನ್ನು ಸುಧಾರಿಸುವ ಸಲುವಾಗಿ ಚಳುವಳಿಯನ್ನು ನೆರವೇರಿಸಲಾಗಿದೆ. ನ್ಯಾಯ ಪಡೆಯುವ ವರೆಗೆ ಚಳುವಳಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

WhatsApp Image 2025-06-21 at 19.57.59
Trending Now