September 9, 2025
sathvikanudi - ch tech giant

ಜಿಲ್ಲೆಯಲ್ಲಿ ಗುಡುಗು, ಮಿಂಚಿನ ಸಮೇತ ಭಾರೀ ಮಳೆ…

Spread the love

ಚಿಕ್ಕನಾಯಕನಹಳ್ಳಿ :

ನಿನ್ನೆ ರಾತ್ರಿ ತುಮಕೂರು ಜಿಲ್ಲೆಯಲ್ಲಿ ಗುಡುಗು, ಮಿಂಚಿನ ಸಮೇತ ಭಾರೀ ಮಳೆಯಾದದ್ದು ಜನತೆಗೆ ಸಂತೋಷ ತಂದಿದೆ. ಬತ್ತಿ ಹೋಗಿದ್ದ ಕೆರೆ, ಕಟ್ಟೆ, ಕೊಳವೆ ಬಾವಿ, ಬೋರ್ವೆಲ್‌ಗಳಲ್ಲಿ ಮತ್ತೆ ನೀರು ಸಂಗ್ರಹವಾಗಿದ್ದು, ಜನತೆಗೆ ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ.



ಆದರೆ, ಕೆಲವು ಪ್ರದೇಶಗಳಲ್ಲಿ ಬೀಕರ ಗಾಳಿಯಿಂದ ಹಾನಿ ಆಗಿರುವುದು ಕಂಡು ಬಂದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ಸಿಂಗದಹಳ್ಳಿ ಗ್ರಾಮದ ತೋಟದ ಮನೆಯ ಕಾರ್ ಶೆಡ್ನಲ್ಲಿನ

ಶೀಟ್‌ಗಳು ಗಾಳಿಗೆ ಹಾರಿ ಹೋಗಿರುವದು ಕಂಡು ಬಂದಿದೆ



ಈ ಗಾಳಿಯಿಂದ ಸಾಕಷ್ಟು ಆಸ್ತಿ ಹಾನಿಯಾಗಿದೆ, ಆದರೆ ಇದರ ನಡುವೆ ಮಳೆಯಿಂದಾಗಿ ನೀರಿನ ಸಮಸ್ಯೆ ಪರಿಹಾರವಾಗಿರುವುದು ಜನತೆಗೆ ಶಾಂತಿಯನ್ನು ತಂದಿದೆ.
ಮಳೆ ಬೇಸಿಗೆಯ ಬಿಸಿಗೊಳದಿಂದ ಒಣಗಿದ್ದ ಬೆಳೆಗಳಿಗೆ ಜೀವ ಬಟ್ಟಲಾಗಿ ಬಂದಿದ್ದು, ರೈತರಿಗೆ ಹೊಸ ಆಶಾಕಿರಣವಾಗಿದೆ.

ನೀರು ಭೂಗತ ನೀರಿನ ಮಟ್ಟವನ್ನು ಏರಿಸಲು ಸಹಾಯಮಾಡಿದ್ದು, ಮುಂದಿನ ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಕೊರತೆ ಇದ್ದ ಕಾರಣ, ಈ ಮಳೆ ಎಲ್ಲರಿಗೂ ಸಂತೋಷವನ್ನು ನೀಡಿದೆ.

ಇಂತಹ ಸಮಯದಲ್ಲಿ, ಹಾನಿಯಾದ ಮನೆಗಳನ್ನು ಸುಧಾರಿಸಲು ಮತ್ತು ನೀರಿನ ನೈಸರ್ಗಿಕ ಸಂಪತ್ತನ್ನು ಕಾಪಾಡಲು ಸಕಾಲಿಕ ಕ್ರಮಗಳು ಅಗತ್ಯವಾಗಿವೆ.

WhatsApp Image 2025-06-21 at 19.57.59
Trending Now