September 10, 2025
sathvikanudi - ch tech giant

ಕೋರ್ಟ್‌ಗೆ ಹೋಗಲು ತಯಾರಿ ನಡುವೆ ಹೃದಯಾಘಾತ: ಜಡ್ಜ್ ವಿಶ್ವನಾಥ್ ಮೂಗತಿ ಅವರ ಆಕಸ್ಮಿಕ ನಿಧನ…!?

Spread the love





ಕಲಬುರಗಿ: ನ್ಯಾಯಾಂಗ ವ್ಯವಸ್ಥೆಗೆ ಭಾರಿ ನಷ್ಟ ಉಂಟುಮಾಡುವಂತ ದುಃಖದ ಘಟನೆ ಕಲಬುರಗಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ್ದು, ನ್ಯಾಯಾಧೀಶ ವಿಶ್ವನಾಥ್ ವಿ. ಮೂಗತಿ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ ತಮ್ಮ ವಸತಿಗೃಹದಲ್ಲಿ ಕೋರ್ಟ್‌ಗೆ ತೆರಳಲು ಸಿದ್ಧತೆ ಮಾಡುತ್ತಿದ್ದಾಗ, ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರ ಕುಟುಂಬದವರು ಹಾಗೂ ಸಹೋದ್ಯೋಗಿಗಳು ಅವರನ್ನು ಕಲಬುರಗಿಯ ಪ್ರಸಿದ್ಧ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಅವರು ಕಲಬುರಗಿ ಕೋರ್ಟ್‌ಗೆ ವರ್ಗಾಯಗೊಂಡಿದ್ದು, ಜಡ್ಜ್ ವಿಶ್ವನಾಥ್ ಮೂಗತಿ ಅವರು ಸೇವಾ ಮನೋಭಾವದಿಂದ ಪ್ರಸಿದ್ಧರಾಗಿದ್ದರು. ಮೂಲತಃ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಯ ನಿವಾಸಿಯಾಗಿರುವ ಅವರು, ತಮ್ಮ ಕರ್ತವ್ಯದ ಪ್ರತಿ ಅಪಾರ ಶ್ರದ್ಧೆ ಹೊಂದಿದ ವ್ಯಕ್ತಿಯಾಗಿದ್ದರು.

ಅವರ ನಿಧನದಿಂದ ನ್ಯಾಯಾಂಗ ಕ್ಷೇತ್ರ ಮಾತ್ರವಲ್ಲದೆ, ನಿಕಟ ಬಂಧುಮಿತ್ರರು, ಸಹೋದ್ಯೋಗಿಗಳು ಹಾಗೂ ನ್ಯಾಯಾನುಭವಿಗಳು ಭಾರೀ ಆಘಾತಕ್ಕೆ ಒಳಗಾಗಿದ್ದಾರೆ. ಹಲವು ವರ್ಷಗಳಿಂದ ನ್ಯಾಯಾಂಗ ಸೇವೆಯಲ್ಲಿ ಎತ್ತರಕ್ಕೇರಿದ್ದ ಮೂಗತಿ ಅವರು ಅನೇಕ ಪ್ರಸ್ತುತ ಪ್ರಕರಣಗಳಲ್ಲಿ ನ್ಯಾಯ ನೀಡುತ್ತಿರುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಅವರ ಅಗಾಲು ತುಂಬಲಾರದಷ್ಟು ದೊಡ್ಡದು.

ಅಧಿಕೃತವಾಗಿ ಜಡ್ಜ್ ವಿಶ್ವನಾಥ್ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ರಬಕವಿಯಲ್ಲಿ ನೆರವೇರಿಸಲ್ಪಡಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ವಿವಿಧ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ ಹಾಗೂ ಹಿರಿಯ ವಕೀಲರು ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶೋಕ ಸಂದೇಶ ಹಂಚಿಕೊಂಡಿದ್ದು, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂಬ ಹಾರೈಕೆ ವ್ಯಕ್ತಪಡಿಸಿದ್ದಾರೆ

WhatsApp Image 2025-06-21 at 19.57.59
Trending Now