
ಬೆಂಗಳೂರು: ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ರಾಜ್ಯ ಸಮಿತಿಯ ನಿರ್ಧಾರದಂತೆ ಸಂಘದಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಮೂಲಕ ಸಂಘಟನೆಯ ಶಕ್ತಿವರ್ಧನೆ ಮತ್ತು ಪತ್ರಕರ್ತರ ಹಿತಾಸಕ್ತಿಗೆ ಹೆಚ್ಚು ಬಲ ನೀಡಲಾಗುತ್ತಿದೆ.

ಬೆಂಗಳೂರು ನಗರ ಅಧ್ಯಕ್ಷರಾಗಿ ರವಿ ನಂದನ್ ಅವರು, ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ಶಶಿಕಾಂತ್ ಶೆಟ್ಟಿ ಅವರು ಹಾಗೂ ಮೈಸೂರು ವಿಭಾಗೀಯ ಅಧ್ಯಕ್ಷರಾಗಿ ಕೀರ್ತಿಕೇಶ್ವರ್ ಅವರು ನೇಮಕಗೊಂಡಿದ್ದಾರೆ. ಭೀದರ್ ಜಿಲ್ಲೆ ಪ್ರ. ಸ. ಜಿಲ್ಲಾಧ್ಯಕ್ಷರಾಗಿ, ಸಾಗರದ ರಮೇಶ್ ಸದಸ್ಯರಾಗಿ, ಬೆಂಗಳೂರು ಜಿಲ್ಲೆಯ ನಾಗಭೂಷಣ್ ಸದಸ್ಯರಾಗಿ ಹಾಗೂ ನಾಗಮಂಗಲ ತಾಲ್ಲೂಕಿನ ಅಧ್ಯಕ್ಷರಾಗಿ ಕೆಂಪೇಗೌಡ, ಕಡಸಿದ್ಧ ಕಟ್ಟಿಮನಿ ಆಪ್ಜಲಪುರ ತಾ. ಅದ್ಯಾಕರಾಗಿ ಅವರು ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶಶಿಕಾಂತ್ ಆ ಕಾಂಬಳೆ ಮಾತನಾಡುತ್ತಾ, “ಪತ್ರಿಕೋದ್ಯಮವು ಇಂದು ಸಮಾಜದಲ್ಲಿ ನಿರಂತರ ಹೋರಾಟ ನಡೆಸುತ್ತಿರುವ ಪ್ರಾಮಾಣಿಕ ವೃತ್ತಿಯಾಗಿದ್ದು, ಈ ವೃತ್ತಿಯಲ್ಲಿ ನಿಷ್ಠೆಯಿಂದ ದುಡಿಯುವ ಪತ್ರಕರ್ತರು ಅನೇಕ ದಬ್ಬಾಳಿಕೆಗಳಿಗೆ ಒಳಗಾಗುತ್ತಿದ್ದಾರೆ. ಅವರ ಈ ಶೋಷಣೆಯನ್ನೆದುರಿಸಲು ಸಂಘಟನೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತದೆ. ಪತ್ರಕರ್ತರಿಗೆ ನ್ಯಾಯ ಒದಗಿಸಲು ಸರ್ಕಾರದ ಮಟ್ಟದಲ್ಲಿ ಮನವಿ ಸಲ್ಲಿಸಲಾಗುವುದು,” ಎಂದು ಹೇಳಿದರು.
ಪತ್ರಕರ್ತರನ್ನು ಆರ್ಥಿಕವಾಗಿ ಬಲಪಡಿಸಲು ನಾನಾ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಕುರಿತು ಶ್ರೀಮತಿ ಯಶಸ್ವಿನಿ B ಅವರು ವಿಶ್ಲೇಷಣೆ ನೀಡಿ, ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಪತ್ರಕರ್ತರಿಗೆ ಆರೋಗ್ಯ ವಿಮೆ, ಪಿಂಚಣಿ ಯೋಜನೆ, ಕಾನೂನು ಸಹಾಯವಾಣಿ ಮೊದಲಾದ ವಿಚಾರಗಳಲ್ಲಿ ಅರಿವು ಮೂಡಿಸಲು ಸಂಘಟನೆ ಮುಂದಾಗಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮನು, ಸಲಹಾ ಸಮಿತಿ ರಾಜ್ಯಾಧ್ಯಕ್ಷ ಸಂಜಯ್ ಸಾವಂತ್, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿಜಯ್ ಮುನಿಯಪ್ಪ, ಅಭಿಲಾಷ್ ರಾಮನಗರ. ತುಮಕೂರಿನ ಇಲ್ಲಿಯಜ್ ಅಹಮದ್, ನೆಲಮಂಗಲದ ಸುನಿತಾ ಮತ್ತಿತರರು ಭಾಗವಹಿಸಿದ್ದರು.
ಈ ಹೊಸ ನೇಮಕಾತಿಯ ಮೂಲಕ ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಪೌರತ್ವ ಹಾಗೂ ಆರ್ಥಿಕ ನ್ಯಾಯಕ್ಕಾಗಿ ಹೋರಾಟ ನಡೆಸುವ ನಿಟ್ಟಿನಲ್ಲಿ ಹೊಸ ಪಥವನ್ನು ರೂಪಿಸಿಕೊಂಡಿದೆ. ಸಂಘಟನೆಯ ಈ ಕ್ರಮ ಪತ್ರಕರ್ತರ ಹಕ್ಕುಗಳ ಸಂರಕ್ಷಣೆಗೆ ಮತ್ತು ಪೋಷಣೆಗೆ ಸಹಕಾರಿಯಾಗಲಿದೆ.