September 9, 2025
sathvikanudi - ch tech giant

ಡಾಂಬರೀಕರಣದ 2 ತಿಂಗಳಲ್ಲಿ ರಸ್ತೆ ದುರಸ್ತಿ: ಗುಣಮಟ್ಟದ ಕೊರತೆಯ ಆರೋಪ!?

Spread the love





ಕೊಲ್ಲಹಳ್ಳಿ – ಆನೆಮಹಲ್, ಹಾಸನ ಜಿಲ್ಲೆ:
ಇತ್ತೀಚೆಗೆ ಹಳೆಯ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕೊಲ್ಲಹಳ್ಳಿಯಿಂದ ಆನೆಮಹಲ್ ವರೆಗೆ ಡಾಂಬರೀಕರಣ ಕಾರ್ಯವನ್ನು ಭರ್ಜರಿಯಾಗಿ ಆರಂಭಿಸಲಾಯಿತು. ಈ ಕಾಮಗಾರಿಗೆ ಸ್ಥಳೀಯ ಶಾಸಕರು ಮೊದಲ ಉದ್ಘಾಟನೆಯನ್ನು ನೆರವೇರಿಸಿದರೆ, ನಂತರ ಹಾಸನ ಜಿಲ್ಲಾ ಸಂಸದರು ಮತ್ತೊಮ್ಮೆ ಸಾರ್ವಜನಿಕವಾಗಿ ಉದ್ಘಾಟನೆ ಮಾಡಿ ಜನರಿಗೆ ಭರವಸೆ ನೀಡಿದ್ದರು.



“ರಸ್ತೆ ನನ್ನ ಕನಸು”, “ಈ ಮಾರ್ಗದ ಅಭಿವೃದ್ಧಿಗೆ ನಾನು ಕಾರಣ” ಎಂಬ ಘೋಷಣೆಗಳೊಂದಿಗೆ ಕೆಲವರು ರಾಜಕೀಯ ಕ್ರೆಡಿಟ್ ಪಡೆದುಕೊಂಡರು. ಆದರೆ ಕೇವಲ ಎರಡು ತಿಂಗಳೊಳಗೆ, ಇದೀಗ ಇದೇ ರಸ್ತೆಯಲ್ಲಿ ಮತ್ತೆ ದುರಸ್ತಿ ಕಾರ್ಯಗಳು ಆರಂಭವಾಗಿರುವುದು ಜನತೆಯಲ್ಲಿ ಅಸಮಾಧಾನ ಉಂಟುಮಾಡಿದೆ.

ಸಾರ್ವಜನಿಕ ಆಕ್ರೋಶ:
ರಸ್ತೆಯ ಮೇಲೆ ಈಗಾಗಲೇ ಹಲವೆಡೆ ಗುಂಡಿಗಳು ಉಂಟಾಗಿದ್ದು, ಡಾಂಬರಿನ ಪುಟಿದೇಳುವ ಘಟನೆಗಳು ನಡೆದಿವೆ. ಇದರಿಂದ ವಾಹನ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. “ಇಷ್ಟೊಂದು ಹೂಡಿಕೆಯಿಂದ ಮಾಡಿದ ರಸ್ತೆ ಎರಡೇ ತಿಂಗಳಲ್ಲಿ ಹಾಳಾಗುವುದು ಕಾಮಗಾರಿಯ ಗುಣಮಟ್ಟದ ಬಗ್ಗೆ ದೊಡ್ಡ ಪ್ರಶ್ನೆ ಎತ್ತುತ್ತದೆ,” ಎಂತೆಂದು ಸ್ಥಳೀಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಹೋರಾಟಗಾರರ ಪ್ರತಿಕ್ರಿಯೆ:
ಸಮಾಜ ಸೇವಕ ಹಾಗೂ ಹೋರಾಟಗಾರ ಜಾನ್ ಹೆನ್ರಿ ಕಾಕನಮನೆ ಅವರು ಈ ಕುರಿತು ಗಂಭೀರ ಆಕ್ಷೇಪ ಹೊರ ಹಾಕಿದ್ದಾರೆ. “ಇಂತಹ ಕಳಪೆ ಕಾಮಗಾರಿಗಳನ್ನು ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುವುದು ಕ್ಷಮಾರ್ಹವಲ್ಲ,” ಎಂದು ಅವರು ಹೇಳಿದ್ದಾರೆ.

ಭದ್ರತೆ ಇಲ್ಲದ ಕಾಮಗಾರಿಗೆ ಯಾರು ಹೊಣೆ?
ರಾಜಕೀಯ ನಾಯಕರು ಉದ್ಘಾಟನೆಗಾಗಿ ಅಣಿಯಾಗಿದ್ದಾರೆ. ಆದರೆ ಕಾಮಗಾರಿಯ ಗುಣಮಟ್ಟದ ಮೇಲ್ವಿಚಾರಣೆ ಯಾರು ಮಾಡಬೇಕು? ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ ಎಂಬ ಆರೋಪಗಳು ಈಗ ಗಂಭೀರ ಪ್ರಶ್ನೆಯನ್ನೆದ್ದಳಿಸುತ್ತಿವೆ.

ನಿರೀಕ್ಷೆ ಏನು?
ಸ್ಥಳೀಯರು ಕಾಮಗಾರಿಯ ಪರದರ್ಶಕ ತನಿಖೆಯನ್ನು ಆಗ್ರಹಿಸುತ್ತಿದ್ದಾರೆ. ಗುಣಮಟ್ಟದ ಕೊರತೆಗೆ ಹೊಣೆದಾರರಾದವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸುತ್ತಿದ್ದಾರೆ.

WhatsApp Image 2025-06-21 at 19.57.59
Trending Now