September 10, 2025
sathvikanudi - ch tech giant

ಪತಿಯ ಅಪಘಾತ ವಿಮಾ ಹಣವನ್ನು ಕೊಡಿಸುವುದಾಗಿ ಹೇಳಿ ಮಹಿಳೆಯ ಮೇಲೆ ಅತ್ಯಾಚಾರ….!?

Spread the love

ತಿಪಟೂರು

ಪತಿಯ ಅಪಘಾತ ವಿಮಾ ಹಣವನ್ನು ಕೊಡಿಸುವುದಾಗಿ ಹೇಳಿ ತನ್ನ ಸ್ನೇಹಿತನ ಹೆಂಡತಿಯನ್ನ  ಅತ್ಯಾಚಾರ ಎಸಗಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ತಿಪಟೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಪ್ರಕಾರದ ಕುರಿತು ಪತಿಯ ಅಪಘಾತದ ವಿಮಾ ಪರಿಹಾರ ಮೊತ್ತವನ್ನು ಕೊಡಿಸುವುದಾಗಿ ನಂಬಿಸಿ, ಅವಳನ್ನು ನಗರದಲ್ಲಿ ಇರುವ ಪ್ರತಿಷ್ಠಿತ ಲಾಡ್ಜ್‌ಗೆ ಕರೆದುಕೊಂಡು ಹೋಗಿ, ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

ಹಣ ನೀಡುವುದಾಗಿ ಹೇಳಿ ವಿಧವೆಯನ್ನು ಮೋಸಮಾಡಿದ ಪತಿಯ ಸ್ನೇಹಿತನು, ಅವಳ ಬಳಿ ಇರುವ ಹಣ ಮತ್ತು ಒಡವೆಗಳನ್ನು ಕಳ್ಳತನ ಮಾಡಿದ್ದಾನೆ.

ಅತ್ಯಾಚಾರ ಮತ್ತು ಕಳ್ಳತನದ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ತಿಪಟೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಧಾಖಲಾಗಿದ್ದು ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಅಪರಾಧಿಯನ್ನು  ಬಂಧಿಸಲು ಸೂಕ್ತ ಕಾರ್ಯಾಚರಣೆ ನಡೆಸುತ್ತಿದ್ದಾರೆ.

WhatsApp Image 2025-06-21 at 19.57.59
Trending Now