September 9, 2025
sathvikanudi - ch tech giant

ಹೊನ್ನಾವರದ ಪಟ್ಟಣ ಪಂಚಾಯತಿ ಮುಖ್ಯ ಇಂಜನಿಯರ ಪ್ರವೀಣ್‌ ಕುಮಾರ್‌ ಲೋಕಾಯುಕ್ತ ಬಲೆಗೆ..!

Spread the love

ಶಿರಸಿ: ಕೆಲಸ ಮಾಡಿಕೊಡುವುದಾಗಿ ವ್ಯಕ್ತಿಯೋರ್ವನಿಂದ 60 ಸಾವಿರ ಲಂಚ ಪಡೆಯುತ್ತಿರುವಾಗ ಹಣದ ಸಮೇತ ಹೊನ್ನಾವರದ ಪಟ್ಟಣ ಪಂಚಾಯತಿ ಮುಖ್ಯ ಇಂಜನಿಯರ ಪ್ರವೀಣ್‌ ಕುಮಾರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಲೋಕಾಯುಕ್ತ ಎಸ್.ಪಿ. ಕುಮಾರ ಚಂದ್ ಮಾರ್ಗದರ್ಶನದಲ್ಲಿ ಕಾರವಾರದ ಲೋಕಾಯುಕ್ತ ಇಸ್ಪೆಕ್ಟರ್ ವಿನಾಯಕ್ ಬಿಲ್ಲವ ಅವರ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಹಣದ ಸಮೇತ ಇಂಜನಿಯರನ್ನು ಕಚೇರಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ನಂತರ ಹೊನ್ನಾವರ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಈ ಕುರಿತು ಕಾರವಾರ ಲೋಕಾಯುಕ್ತ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ಆಕ್ರೋಶವನ್ನು ಉಂಟುಮಾಡಿದ್ದು, ಸರ್ಕಾರದ ಅಧಿಕಾರಿಗಳಿಂದ ಹೊಣೆಗಾರಿಕೆಯ ಕುರಿತು ಮತ್ತೆ ಚರ್ಚೆ ಆರಂಭಗೊಂಡಿದೆ. ಲಂಚಕೋರರನ್ನು ಬಯಲು ಮಾಡುವ

WhatsApp Image 2025-06-21 at 19.57.59
Trending Now