September 10, 2025
sathvikanudi - ch tech giant

ಗಾಳಿ ಮಳೆಗೆ ರಸ್ತೆಗೆ ಮುರಿದು ಬಿದ್ದ ಬೃಹತ್ ಗಾತ್ರದ ಮರ…..

Spread the love

ಶಿರಾ ತಾಲೂಕಿನ ಬುಕ್ಕಪಟ್ಟಣ ಗ್ರಾಮದಲ್ಲಿ  ಭಾರಿ ಗಾಳಿ ಮಳೆಯಿಂದಾಗಿ ಹೆಚ್ ಪಿ ಗ್ಯಾಸ್ ಕಚೇರಿಯ ಬಳಿ ಒಂದು ಮರ ಉರುಳಿ ಬಿದ್ದಿತ್ತು. ಸಾಧ್ಯ ಯಾವುದೇ ಪ್ರಾಣಪಾಯ ಕಂಡುಬದಿಲ್ಲ ಈ ಕಾರಣದಿಂದ ಬುಕ್ಕಪಟ್ಟಣ ಹಾಗಲವಾಡಿ ಮಾರ್ಗದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಸ್ಥಳೀಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಬಂದು, ಜೆಸಿಬಿ ಯಂತ್ರದ ಸಹಾಯದಿಂದ ಮರವನ್ನು ತೆರವುಗೊಳಿಸಿದರು. ಈ ಮೂಲಕ ರಸ್ತೆ ಸಂಚಾರವನ್ನು ಪುನಃ ಆರಂಭಿಸಲು ಸಾಧ್ಯವಾಯಿತು. ತಾತ್ಕಾಲಿಕವಾಗಿ, ವಾಹನಗಳ ಸಂಚಾರಕ್ಕೆ ಕ್ಯಾತೆದೇವನ ಹಟ್ಟಿಯ ಮೂಲಕ ಪರ್ಯಾಯ ಮಾರ್ಗವನ್ನು ವ್ಯವಸ್ಥೆ ಮಾಡಲಾಗಿದೆ.

ಈ ಘಟನೆ ಎಂತಹ ನಿರಂತರ ಮಳೆಯಿಂದಾಗಿ ಸಂಭವಿಸಿದ್ದು, ತಕ್ಷಣದ ಕ್ರಮದಿಂದ ಸಮಸ್ಯೆ ಪರಿಹಾರವಾಗಿದೆ. ಗ್ರಾಮಸ್ಥರು ಹಾಗೂ ರಸ್ತೆ ಬಳಸುವವರು ಪೊಲೀಸರಿಗೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸಹಕಾರ ನೀಡಿದರು. ಈ ಸಂದರ್ಭದಲ್ಲಿಯೂ, ಪ್ರಯಾಣಿಕರು ತಮ್ಮ ಸುರಕ್ಷತೆಗೆ ಹೆಚ್ಚು ಗಮನ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.ಅನಾಹುತ ನಡೆಯುವ ಮುನ್ನವೇ ಹೋನಾಗಿದ ಮರಗಳು ಕಂಡಲ್ಲಿ ಅಧಿಕಾರಿಗಳು ಮೊನ್ನೆಚ್ಚರಿಕೆ ಕ್ರಮ ವಹಿಸಿದರೆ ಆಗುವ ಅನಾಹುತಾ ತಪ್ಪಿಸಭಹುದು… ✍️✍️✍️✍️

WhatsApp Image 2025-06-21 at 19.57.59
Trending Now