September 10, 2025
sathvikanudi - ch tech giant

ಅಂಗಡಿಗೆ ಕನ್ನಾ ಹಾಕಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದ ಕಳ್ಳರನ್ನು ಮಾಲು ಸಮೇತ ಬಂಧಿಸಿದ

Spread the love





ಹೊನ್ನಾಳಿ :

ದಿನಾಂಕ: 03.08.2025 ರಂದು ರಾತ್ರಿ ಸಮಯದಲ್ಲಿ, ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಶಿವು ಎಂಟರ್ ಪ್ರೈಸಸ್ ಅಂಗಡಿಯ ಹಿಂದಿನ ಕಿಟಕಿಯ ಸರಳನ್ನು  ಕಳ್ಳರು ಬೆಂಡ್ ಮಾಡಿ ಒಳಗೆ ಪ್ರವೇಶಿಸಿ ರೂ 5.5 ಲಕ್ಷ ಮೌಲ್ಯದ ಮೊಬೈಲ್ ಗಳು, ಮಿಕ್ಸಿರ್ ಗಳು ಹೋಂ ಥಿಯೇಟರ್ ಗಳು ಇತರೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ,, ವಿರೇಶಪ್ಪ, ಸಿ ರವರು ನೀಡಿದ ದೂರಿನ ಪ್ರಕರಣ ದಾಖಲಾಗಿದ್ದು,

ಈ ಪ್ರಕರಣದಲಿ.. ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ಜಿಲೆಯ  ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ IPS ರವರು ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ  ಪರಮೇಶ್ವರ ಹೆಗಡೆ KSPS ಮತ್ತು ಚನ್ನಗಿರಿ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಸ್ವಾಮ್ ವರ್ಗೀಸ್ IPS ರವರುಗಳ ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರಾದ ಸುನಿಲ್ ಕುಮಾರ ಹೆಚ್ ರವರ ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿ,

ಸದರಿ ಕೃತ ಸ್ಥಳದಲಿ ದೊರೆತ ಬೆರಳು ಮುದ್ರೆ ಸಹಾಯದಿಂದ ಆರೋಪಿತರಾದ 1)ಸುನೀಲ್ ಕುಮಾರ(23), ಮುಕ್ತೆನಹಳ್ಳಿ ಗ್ರಾಮ ಮತ್ತು 2)ಗಿರೀಶ ಟಿ.ಎನ್(25), ನಿಟ್ಟೂರು ಗ್ರಾಮ, 3)ಆನಿಲ್ ಕುಮಾರ್ ಬಿ.ಸಿ(21), ಬೆಳ್ಕೊಡಿ ಗ್ರಾಮ, 4)ರಾಕೇಶ ಬಿ.ಎ(23), ಭಾನುವಳಿ, ಗ್ರಾಮ ರವರನ್ನು ದಸ್ತಗಿರಿ ಮಾಡಿ, ಆರೋಪಿತರು ಕಳುವು ಮಾಡಿದ್ದ ಒಟ್ಟು 6.78 ಲಕ್ಷ ಮೌಲ್ಯದ 33 ಮೊಬೈಲ್ ಗಳು, 06 ಮಿಕ್ಸರ್-ಗ್ಲೆಂಡರ್ ಗಳು, 4 ಹೋಂ ಥಿಯೇಟರ್ ಗಳು, 1 ಗೀಸರ್, 1 ಎಲೆಕ್ನಿಕ್ ಸೌ, 1 ಸೆಟ್ ಕುಕ್ ವೇರ್ ಗಳನ್ನು ಮತ್ತು ಆರೋಪಿತರು ಕಳ್ಳ ತನ ಕೃತ್ವಾಕ್ಕೆ ಉಪಯೋಗಿಸಿದ 3 ಲಕ್ಷ ಮೌಲ್ಯದ 1 ಓಮಿನಿ, 1 ಚೂರಿ, 1 ರಾಡ್, 1 ಹಗ, 2 ಜರ್ಕಿನ್, 1 ಟವಲ್, 1 ಮಾಸ್ಕ್ ಇವುಗಳನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

ಸದರಿ ಪ್ರಕರಣವನ್ನು ಪತ್ತೆ ಹಚ್ಚಿ ಮಾಲು ಮತ್ತು ಆರೋಪಿತರನ್ನು ಹಿಡಿಯುವರೆ ಯಶಸ್ವಿಯಾದ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರಾದ  ಸುನಿಲ್ ಕುಮಾರ ಹೆಚ್, ಪಿಎಸ್‌ಐ ಗಳಾದ ಕುಮಾರ,ಎನ್ ಮತ್ತು  ನಿರ್ಮಲ.ಎಲ್, ಎಎಸ್‌ಐ ಹರೀಶ ಹೆಚ್.ಪಿ, ಸಿಬ್ಬಂದಿಗಳಾದ ರಾಜಶೇಖರ, ರವಿ, ಬಸವರಾಜ ಕೋಟೆಪ್ಪನವರ, ಅಮ್ಮದ್ ಖಾನ್, ಹೇಮಾನಾಯ್ಕ, ಮಹೇಂದ್ರ, ಮನೋಹರ, ಕೃಷ್ಣನಾಯ್ಕ, ರಾಮಚಂದ್ರ, ಚೇತನ್, ಪ್ರವೀಣ್, ಚಾಲಕ ವೆಂಕಟೇಶ ಮತ್ತು ಬೆರಳು ಮುದ್ರೆ ವಿಭಾಗದ ಇಸ್ಮಾಯಿಲ್ ಪಿಎಸ್‌ಐ, , ನಾಗರಾಜ, ವಿರೇಶ, ತಾಂತ್ರಿಕ ವಿಭಾಗದ ರಾಮಚಂದ್ರ ಜಾಧವ್, ರಮೇಶ ಎಂ.ಪಿ, ಸಿದ್ದಾರ್ಥ ರವರಿಗೆ ಪೊಲೀಸ್ ಅಧೀಕ್ಷಕರು ದಾವಣಗೆರೆ ಇವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.


ವರದಿ :ಪ್ರಭಾಕರ್ ಡಿ ಎಂ  ಹೊನ್ನಾಳ್ಳಿ.

WhatsApp Image 2025-06-21 at 19.57.59
Trending Now