September 9, 2025
sathvikanudi - ch tech giant

ಘೋರ ಕ್ರೂರತೆ: ಮಹಿಳೆಯನ್ನು ಹತ್ಯೆ ಮಾಡಿ ಗುದ ಭಾಗದಲ್ಲಿ ಕೈ ಹಾಕಿ ಕರುಳನ್ನು ಎಳೆದ ಆರೋಪಿ ಬಂಧನ!?

Spread the love




ಫತೇಪುರ (ಉತ್ತರ ಪ್ರದೇಶ):
ರಾಜ್ಯವನ್ನು ಬೆಚ್ಚಿ ಬೀಳಿಸುವಂತಹ ಅಮಾನವೀಯ ಘಟನೆ ಫತೇಪುರ ಜಿಲ್ಲೆಯಲ್ಲಿ ವರದಿಯಾಗಿದೆ. ವಿವಾಹಿತ ಮಹಿಳೆಯೊಬ್ಬಳನ್ನು ಪೂರ್ತಿಯಾಗಿ ಯೋಜನೆ ಹಾಕಿಕೊಂಡು ಹತ್ಯೆಗೈದ ಘಟನೆ ನಿನ್ನೆ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದಿದ್ದು ಫತೇಪುರ ಜಿಲ್ಲೆಯ ಒಂದು ಗ್ರಾಮದಲ್ಲಿ. ಆರೋಪಿ ಯುವಕನು ತನ್ನ ಸ್ಥಳೀಯ ಪರಿಚಿತ ಮಹಿಳೆಯನ್ನು ಪೊದೆಗಳಲ್ಲಿಗೆ ಕರೆದುಕೊಂಡು ಹೋಗಿ, ಮೊದಲು ಮದ್ಯ ಕುಡಿಸಿದ್ದಾನೆ. ಅತ್ಯಾಚಾರ ಮಾಡಿ ಕಲ್ಲಿನಿಂದ ಹೊಡೆದು ಕ್ರೂರವಾಗಿ ಕೊಂದುಹಾಕಿದ್ದಾನೆ.

ಇಷ್ಟರಲ್ಲಿಯೇ ಕೂಡ ಘಟನೆ ಅಂತ್ಯವಾಗಲಿಲ್ಲ. ಆರೋಪಿಯ ಕ್ರೂರತೆ ಈ ಹಂತದವರೆಗೆ ಮಾತ್ರ ಸೀಮಿತವಾಗದೇ, ಮೃತ ಮಹಿಳೆಯ ಖಾಸಗಿ ಅಂಗಗಳಲ್ಲಿ ಕೈ ಹಾಕಿ ಆಕೆಯ ಕರುಳನ್ನು ಹೊರತೆಗೆದಿದ್ದಾನೆ. ಶವವನ್ನು ನೋಡಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ಪತ್ತೆಯಾಗಿದೆ.

ಪೊಲೀಸರ ಶೀಘ್ರ ಕಾರ್ಯಚಟುವಟಿಕೆ:
ಮಾಹಿತಿ ತಿಳಿದಿದ್ದಲ್ಲದೆ, ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿ ತನ್ನ ನೀಚ ಕೃತ್ಯಕ್ಕೆ ತಾನೇ ಒಪ್ಪಿಕೊಂಡಿದ್ದಾನೆ. ಮಹಿಳೆ ತನ್ನ ತಂದೆಗೆ ವಿಷ ಹಾಕಿ ಕೊಂದಿದ್ದಾಳೆ ಎಂಬ ಆರೋಪವನ್ನು ಸಿಟ್ಟಿನಲ್ಲಿ ನೆನಪಿಸಿಕೊಂಡು, ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಈ ವರ್ತನೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲಾಗಿದೆ.

ಈ ಘಟನೆಗೆ ಗ್ರಾಮಸ್ಥರು ಶಾಕ್ ಆಗಿದ್ದು, ಮಹಿಳೆಯ ಕುಟುಂಬ ಶೋಕದಲ್ಲಿ ಮುಳುಗಿದೆ. ಹತ್ಯೆಗೀಡಾದ ಮಹಿಳೆಯ ಮೇಲೆ ನಡೆದ ಅಮಾನವೀಯ ಕ್ರೂರತೆ ಇಡೀ ಜಿಲ್ಲೆ ಹಾಗೂ ರಾಜ್ಯವನ್ನೇ ಕಂಗೊಳಿಸಿದ್ದು, ನ್ಯಾಯಕ್ಕಾಗಿ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸೂಕ್ತ ವಿಧಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪೋಕ್ಸೋ, ಕೊಲೆ ಹಾಗೂ ಶವದ ಅವಮಾನ ಕುರಿತಾಗಿ ವಿವಿಧ ಸೆಕ್ಷನ್‌ಗಳಡಿ FIR ದಾಖಲಾಗಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಕರಣವನ್ನು ವೇಗವಾಗಿ ವಿಚಾರಣೆಗೂ ಒಪ್ಪಿಸುವ ಪ್ರಯತ್ನ ಪ್ರಾರಂಭವಾಗಿದೆ.✍🏻

ಸತೀಶ್ ಮುಂಚೆಮನೆ ಸಾರಥ್ಯದಲ್ಲಿ… ಬಿಗ್ ಲೈವ್ ಸುದ್ದಿ ಕ್ಷಣ ಕ್ಷಣದ ಸುದ್ದಿ ಇನ್ನಷ್ಟು ಸುದ್ದಿ ಓದಲು ಸಾತ್ವಿಕ ನುಡಿ ಮಾಸಪತ್ರಿಕೆಯ web new spage ನೋಡಿ. ಸುದ್ದಿ ಜಾಹಿರಾತುಗಳಿಗಾಗಿ ಕರೆಮಾಡಿ.

9845905838.ವಿಜಯ್ ಮುನಿಯಪ್ಪ
ಕ್ರೈಂ ವರದಿಗಾರರು

WhatsApp Image 2025-06-21 at 19.57.59
Trending Now