September 9, 2025
sathvikanudi - ch tech giant

ಮೈಕ್ರೋ ಫೈನಾನ್ಸ್ ಹಾವಳಿಗೆ  ಮತ್ತೊಂದು ಬಡ ಜೀವ ಬಲಿ: ಶಿರಾದಲ್ಲಿ ಜಗನ್ನಾಥ್ ಆತ್ಮಹತ್ಯೆ!?

Spread the love




ತುಮಕೂರು, ಆಗಸ್ಟ್ 1:

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ವಾಸಿ ಜಗನ್ನಾಥ್ ಎಂಬ ಬಡ ವ್ಯಕ್ತಿ, ಮೈಕ್ರೋ ಫೈನಾನ್ಸ್ ಕಂಪನಿಗಳ ಮಾನಸಿಕ ಹಿಂಸೆಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಜಗನ್ನಾಥ್ ಅವರು ಬಜಾಜ್ ಫೈನಾನ್ಸ್ ಹಾಗೂ ಶವಂತ ಫೈನಾನ್ಸ್ ಎಂಬ ಎರಡು ಖಾಸಗಿ ಸಾಲ ಸಂಸ್ಥೆಗಳಿಂದ ಒಟ್ಟು ₹5 ಲಕ್ಷ ಸಾಲ ಪಡೆದಿದ್ದರು. ಈ ಹಣವನ್ನು ಅವರು ತಮ್ಮ ಹೋಟೆಲ್ ವ್ಯವಹಾರದ ನಿರ್ವಹಣೆಗೆ ಬಳಸಿದ್ದರು. ಆದರೆ ವ್ಯವಹಾರ ನಿರೀಕ್ಷಿತ ರೀತಿಯಲ್ಲಿ ನಡೆಯದೆ, ನಷ್ಟ ಅನುಭವಿಸಿದ ಜಗನ್ನಾಥ್, ತಿಂಗಳಾದಂತೆ ಸಾಲ ಹಪ್ತಿಗಳನ್ನು ಕಟ್ಟಲು ಸಾಧ್ಯವಾಗಿಲ್ಲ.

ಜಗನ್ನಾಥ್ ಅವರು ತಮ್ಮ ಸಾಲದ ಹೊರೆ ಕಡಿಮೆ ಮಾಡಿಕೊಳ್ಳಲು ಸಮಯದ ಅವಶ್ಯಕತೆಯಿದೆ ಎಂದು ಕಂಪನಿಗಳಿಗೆ ಮನವಿ ಮಾಡಿದ್ದರೂ, ಅವರ ಮನವಿಯನ್ನು ಬಜಾಜ್  ಫೈನಾನ್ಸ್ ಪ್ರತಿನಿಧಿಗಳು ಸಮಯ ಕೊಡದೆ ನಿರಾಕರಿಸಿದ್ದಾರೆ,ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದೇನು ಸಾಕಾಗದೆ, ಫೈನಾನ್ಸ್ ಪ್ರತಿನಿಧಿಗಳು ಮನೆಯವರೆಗೂ ಬಂದು ಜಗನ್ನಾಥ್ ಅವರೊಡನೆ ಅಸಭ್ಯವಾಗಿ ವರ್ತಿಸಿ, ಅವನಿಮಾನವೀಯ ಪದಗಳನ್ನು ಉಪಯೋಗಿಸುತ್ತಿದ್ದರು ಎನ್ನಲಾಗಿದೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿತು. ಕುಟುಂಬಸ್ಥರ ಪ್ರಕಾರ, ಫೈನಾನ್ಸ್ ನವರ ಹೆಚ್ಚು ಒತ್ತಡ ಮತ್ತು ಹೀನ ನಿಂದನೆಗೆ ತಾಳಲಾಗದೆ, ಜಗನ್ನಾಥ್ ತಮ್ಮ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳೀಯರು ಅವರು ಹೊಲದಲ್ಲಿ ಕುಸಿದು ಬಿದ್ದಿರುವುದನ್ನು ಗಮನಿಸಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಜಗನ್ನಾಥ್ ಅವರ ನಿಧನದಿಂದ ಆ ಕುಟುಂಬ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಸಂಕಟಕ್ಕೆ ಸಿಲುಕಿದೆ ಅವರಿಗೆ 2 ಮಕ್ಕಳು ಇದ್ದಾರೆ.

ಈ ಘಟನೆ ಪ್ರತಿ ಗ್ರಾಮದಲ್ಲೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅನಿಯಂತ್ರಿತ ಚಟುವಟಿಕೆಗಳು ಎಷ್ಟೊಂದು ಜೀವ ಹಾನಿಗೆ ಕಾರಣವಾಗುತ್ತಿವೆ ಇನ್ನಾದರೂ ಸರ್ಕಾರದ ಈ ಮೈಕ್ರೋ ಫೈನಾನ್ಸ್ ನವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕೊನೆ ಕಾಣಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.

ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸ್ ದೂರು ದಾಖಲಿಸುವುದು, ಹಾಗೂ ಸಂಬಂಧಿತ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂಬ ಒತ್ತಾಹಿಸಿದ್ದಾರೆ.

ಜಗನ್ನಾಥ್ ಅವರ ಆತ್ಮಹತ್ಯೆ ಪ್ರಕರಣದ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.✍🏻✍🏻✍🏻



ಸತೀಶ್ ಮುಂಚೆಮನೆ ಸಾರಥ್ಯದಲ್ಲಿ… ಬಿಗ್ ಲೈವ್ ಸುದ್ದಿ ಕ್ಷಣ ಕ್ಷಣದ ಸುದ್ದಿ ಇನ್ನಷ್ಟು ಸುದ್ದಿ ಓದಲು ಸಾತ್ವಿಕ ನುಡಿ ಮಾಸಪತ್ರಿಕೆಯ web new spage ನೋಡಿ. ಸುದ್ದಿ ಜಾಹಿರಾತುಗಳಿಗಾಗಿ ಕರೆಮಾಡಿ.

9845905838.ವಿಜಯ್ ಮುನಿಯಪ್ಪ
ಕ್ರೈಂ ವರದಿಗಾರರು

WhatsApp Image 2025-06-21 at 19.57.59
Trending Now