September 9, 2025
sathvikanudi - ch tech giant

8 ನೇ ತರಗತಿ ವಿದ್ಯಾರ್ಥಿ ಬಾವಿಯಲ್ಲಿ ಶವವಾಗಿ ಪತ್ತೆ…..!?

Spread the love

ಶಿವಮೊಗ್ಗ: ರಾಗಿಗುಡ್ಡದಲ್ಲಿ 8ನೇ ತರಗತಿ ವಿದ್ಯಾರ್ಥಿ ಬಾವಿಯಲ್ಲಿ ನೀರು ಪಾಲಾಗಿ ದುರ್ಮರಣವಾಗಿರುವ ಘಟನೆ ನಡೆದಿದೆ. ಬಾವಿಯಲ್ಲಿ ಈಜಲು ತೆರಳಿದ ಅಪ್ನಾನ್ ಎಂಬ ಬಾಲಕ ಶವವಾಗಿ ಪತ್ತೆಯಾದ ಘಟನೆ  ಸಂಭವಿಸಿದೆ.

ನಾಲ್ವರು ಸ್ನೇಹಿತರು ಬಾವಿಯಲ್ಲಿ ಈಜಲು ತೆರಳಿದ ವೇಳೆ, ಅಪ್ನಾನ್ ನೀರು ಪಾಲಾಗಿದ್ದನು. ಆತ ಶಿವಮೊಗ್ಗದ ಡಿವಿಎಸ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಬಾವಿ ಬಳಿ ಬಾಲಕನ ಚಪ್ಪಲಿ ಮತ್ತು ಬಟ್ಟೆ ಪತ್ತೆಯಾಗಿದ್ದು, ಇದು ಶೋಧಕಾರ್ಯಕ್ಕೆ ದಾರಿಯಾಗಿದೆ.

ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಹುಡುಕಾಟ ನಡೆಸಿ, ನೆನ್ನೆ ರಾತ್ರಿ 8:30ಕ್ಕೆ ಬಾಲಕನ ಶವವನ್ನು ಹೊರತೆಗೆದಿದ್ದಾರೆ. ಈ ಘಟನೆ ಸ್ಥಳೀಯರನ್ನು ನೋವಿಗೆ ದೂಡಿದ್ದು, ಬಾಲಕನ ಕುಟುಂಬಸ್ಥರು ದುಃಖದ ಮಡಿಲಿನಲ್ಲಿ ಮುಲುಗಿದ್ದಾರೆ.

ಪ್ರಕಾರಣವೂ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಬಾವಿಯ ಸುತ್ತಮುತ್ತ ಸುರಕ್ಷತಾ ಕ್ರಮಗಳ ಕೊರತೆ ಈ ಘಟನೆಗೆ ಕಾರಣವಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

WhatsApp Image 2025-06-21 at 19.57.59
Trending Now