
ಮೈಸೂರು ನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ , ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿ ಶಿವಾನಂದ (90) ಅವರ ಬರ್ಬರ ಕೊಲೆ ನಡೆದಿದೆ. ಈ ಭೀಕರ ಕೃತ್ಯಕ್ಕೆ ಸ್ವಾಮೀಜಿಯವರ ಸಹಾಯಕನಾಗಿದ್ದ ಭದ್ರತಾ ಸಿಬ್ಬಂದಿ ರವಿ (60) ಹೊಣೆದಾರನೆಂದು ಶಂಕಿಸಲಾಗಿದೆ. ಮಠದ ಆವರಣದಲ್ಲಿಯೇ ನಿದ್ರಿಸುತ್ತಿದ್ದ ಸ್ವಾಮೀಜಿಯನ್ನು ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ.
ವಿಷಯ ತಿಳಿದ ನಜರ್‌ಬಾದ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಅಲ್ಲಿದ್ದ ಸಿಬ್ಬಂದಿ ಮತ್ತು ಮಠದ ಸದಸ್ಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಈ ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ಆದರೆ ಕೆಲವು ವೈಯಕ್ತಿಕ ವೈಷಮ್ಯಗಳೂ ಅಥವಾ ಆರ್ಥಿಕ ಕಾರಣಗಳೂ ಸಾಧ್ಯತೆ ಇವೆ ಎಂದು ಪೊಲೀಸರು ಶಂಕಿಸುತ್ತಿದ್ದಾರೆ.
ಶಿವಾನಂದ ಸ್ವಾಮೀಜಿಯವರು ಮಠದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಮತ್ತು ಸಮುದಾಯದಲ್ಲಿ ಅಪಾರ ಗೌರವವನ್ನೂ ಹೊಂದಿದ್ದರು.
ಈ ದಾರುಣ ಘಟನೆ ಆ ಪ್ರದೇಶದ ಸಾರ್ವಜನಿಕರಲ್ಲಿ ಶೋಕದ ವಾತಾವರಣವನ್ನುಂಟು ಮಾಡಿದೆ. ಹತ್ಯೆಯ ಕುರಿತು ಪ್ರಕಾರಣವನ್ನು ದಾಖಲಿಸಿಕೊಂಡು ಸಂಪೂರ್ಣ ಮಾಹಿತಿ ಕಲೆಹಾಕಿವಲ್ಲಿ ತನಿಖೆ ಮುಂದುವರೆಸಿದ್ದಾರೆ.