
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನಲ್ಲಿ ನಕಲಿ ಚಿನ್ನದ ನಾಣ್ಯ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಸಂಬಂಧ ಜಗಳೂರು ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದ ವಿವಿಧೆಡೆ ತಲೆಹೆತ್ತುತ್ತಿರುವ ನಕಲಿ ಚಿನ್ನದ ವಂಚನೆ ಪ್ರಕರಣಗಳಲ್ಲಿ ಇದು ಮತ್ತೊಂದು ಉದಾಹರಣೆಯಾಗಿದೆ.
ಬಂಧಿತ ಆರೋಪಿಗಳನ್ನು ವಿಜಯನಗರ ಜಿಲ್ಲೆಗೆ ಸೇರಿದ ಪ್ರಕಾಶ್ (28) ಮತ್ತು ಮಾರಪ್ಪ (58) ಎಂದು ಪೊಲೀಸರು ಗುರುತಿಸಿದ್ದಾರೆ. ಈ ಇಬ್ಬರೂ ಕಳೆದ ಕೆಲ ತಿಂಗಳಿಂದ ನಕಲಿ ಚಿನ್ನದ ನಾಣ್ಯ ಮಾರಾಟದ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ದೃಢವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಬಹುಪಾಲು ಜನರನ್ನು ಗುರಿಯಾಗಿಸಿಕೊಂಡಿರುವುದು ತಿಳಿದುಬಂದಿದೆ.
ವಂಚನೆಯ ವಿಧಾನ :
ಜಗಳೂರು ಪಟ್ಟಣದ ನಿವಾಸಿ ರಮಾವತ್ ಭಾಸ್ಕರ್ ಎಂಬುವರನ್ನು ನಂಬಿಸಿ, ತಮ್ಮ ಬಳಿ ಹಳೆಯ ಚಿನ್ನದ ನಾಣ್ಯಗಳಿವೆ, ಅವು ಮೌಲ್ಯಯುತವಾದವು ಎಂದು ಹೇಳಿ, 8 ಲಕ್ಷ ರೂಪಾಯಿ ನಗದು ಮತ್ತು 20 ಸಾವಿರದ ಮೊಬೈಲ್ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ಚಿನ್ನದ ನಾಣ್ಯಗಳು ಕೇವಲ ಲೋಹದ ತುಣುಕುಗಳು ಎಂಬುದು ನಂತರ ಗೊತ್ತಾಗಿತ್ತು.
ಪೋಲೀಸರ ತನಿಖೆ :
ಈ ಕುರಿತು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಸಿಐ ವೆಂಕಟೇಶಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಯಿತು. ನಿಖರವಾದ ಮಾಹಿತಿ ಹಾಗೂ ಟೆಕ್ನಾಲಜಿಯ ಸಹಾಯದಿಂದ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಲಾಯಿತು. ಅವರ ಬಳಿಯಿಂದ ಹಣ ಹಾಗೂ ನಕಲಿ ಚಿನ್ನದ ನಾಣ್ಯಗಳು ಸಹ ವಶಕ್ಕೆ ಪಡೆಯಲಾಗಿದೆ.
ಸಾಕ್ಷ್ಯ ಸಮೇತ ಬಂಧನ
ಬಂಧಿತರಿಂದ ವಶಪಡಿಸಿಕೊಂಡ ಲೋಹದ ನಾಣ್ಯಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳಲ್ಲಿ ಚಿನ್ನವಿಲ್ಲ ಎಂಬುದನ್ನು ಪರಿಣಿತರ ವಿಶ್ಲೇಷಣೆ ದೃಢಪಡಿಸಿದೆ. ಇದೇ ಮಾದರಿಯಲ್ಲಿ ಇತರರನ್ನು ಸಹ ವಂಚಿಸಿರುವ ಶಂಕೆಯಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಪೊಲೀಸರ ಎಚ್ಚರಿಕೆ
ಸಾಮಾನ್ಯ ಜನರು ಇಂತಹ ನಕಲಿ ಚಿನ್ನದ ವಂಚನೆಗಳಿಂದ ದೂರವಿರಬೇಕು. ಸುಲಭವಾಗಿಹಣ ಸಂಪಾದನೆ ಮಾಡಬಹುದು ಎಂಬ ಮಿಥ್ಯ ನಂಬಿಕೆಯ ಬಲಿಯಾಗಿ ಹಣ ಕಳೆದುಕೊಳ್ಳಬಾರದು ಎಂದು ಜಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.✍🏻✍🏻✍🏻
ಸತೀಶ್ ಮುಂಚೆಮನೆ ಸಾರಥ್ಯದಲ್ಲಿ… ಬಿಗ್ ಲೈವ್ ಸುದ್ದಿ ಕ್ಷಣ ಕ್ಷಣದ ಸುದ್ದಿ ಇನ್ನಷ್ಟು ಸುದ್ದಿ ಓದಲು ಸಾತ್ವಿಕ ನುಡಿ ಮಾಸಪತ್ರಿಕೆಯ web new spage ನೋಡಿ. ಸುದ್ದಿ ಜಾಹಿರಾತುಗಳಿಗಾಗಿ ಕರೆಮಾಡಿ.
9845905838.ವಿಜಯ್ ಮುನಿಯಪ್ಪ
ಕ್ರೈಂ ವರದಿಗಾರರು