September 10, 2025
sathvikanudi - ch tech giant

ಮೈಸೂರಿನಲ್ಲಿ ಮೋದಿ ಹೊಗಳಿ ಹಾಡು ಬರೆದಿದ್ದ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ಬಿಜೆಪಿ ಕಿಡಿ

Spread the love

ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನಿಂದ ಹಿಂದೂ ಯುವತಿಯ ಕೊಲೆ ಘಟನೆ ಬೆನ್ನಲ್ಲೆ ಮೈಸೂರಿನಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದಿದೆ. ಮೋದಿ ಹಾಡು ಬರೆದಿದ್ದ ರೋಹಿತ್‌ ಎಂಬುವವರನ್ನು ಅನ್ಯ ಕೋಮಿನ ಯುವಕರು ನಿಂದಿನಿ, ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಲು ಹೇಳಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಬಿವೈ ವಿಜಯೇಂದ್ರ ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

ಮೈಸೂರು: ಮೋದಿ ಬಗ್ಗೆ ಹೊಗಲಿ ಹಾಡು ಬರೆದಿದ್ದ ಮೈಸೂರು ನಗರದ ಯುವಕನೊಬ್ಬನನ್ನು ಸ್ಥಳೀಯ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟ್ವೀಟ್‌ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಹಿಂದೂ ಯುವತಿಯನ್ನು ಮುಸ್ಲಿಂ ಯುವಕ ಕೊಲೆ ಮಾಡಿದ ಘಟನೆ ಬೆನ್ನಲ್ಲೆ ಈ ಘಟನೆ ನಡೆದಿದೆ. ಮೋದಿ ಬಗ್ಗೆ ಹಾಡು ಬರೆದಾತನನ್ನು ಯುವಕರು ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಅವ್ಯಾಚ ಶಬ್ಧಗಳಿಂದ ಬೈದು, ಪಾಕಿಸ್ತಾನ ಜಿಂದಾಬಾದ್ ಅಂತ ಕೂಗು, ಅಲ್ಲಾಹ್ ಅಕ್ಬರ್ ಅಂತ ಕೂಗು ಎಂದು ಬೆದರಿಸಿದ್ದಾರೆ ಎನ್ನಲಾಗಿದೆ.

ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಘಟನೆ ನಡೆದಿದ್ದು, ಮೈಸೂರಿನ ರೋಹಿತ್ ಎಂಬಾತನ ಹಲ್ಲೆಗೊಳಗಾಗಿರುವ ವ್ಯಕ್ತಿ. ಈ ಸಂಬಂಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಬ್‌ಸ್ಕ್ರೈಬ್ ಮಾಡಿಸ್ತೀನಿ ಬಾ ಎಂದು ಕರೆದು ಹಲ್ಲೆ!

ಘಟನೆಯ ಬಗ್ಗೆ ಹಲ್ಲೆಗೊಳಗಾದ ಯುವಕ ರೋಹಿತ್‌ ವಿವರಿಸಿದ್ದು, ” ಮೈಸೂರಿಗೆ ಮೋದಿ ಆಗಮನ ಹಿನ್ನೆಲೆ ಕಳೆದ ವಾರ ನಾನೊಂದು ಮೋದಿ ಕುರಿತು ಹಾಡನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದೆ. ಮಾಡು ಮೈಸೂರಿನ ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ನನ್ನ ಚಾನೆಲ್‌ ಹಾಗೂ ಮೋದಿಯವರ ಹಾಡಿನ ಬಗ್ಗೆ ಪ್ರಚಾರ ಮಾಡುತ್ತಿದೆ. ಅದೇ ರೀತಿ ಸರ್ಕಾರಿ ಗೆಸ್ಟ್‌ಹೌಸ್ ಬಳಿ ಹಾಡು ತೋರಿಸಿ ಸಬ್‌ಸ್ಕ್ರೈಬ್ ಮಾಡಿಸುತ್ತಿದ್ದಾಗ ಅಲ್ಲಿಗೆ ಯುವಕನೊರ್ವ ಬಂದ. ಆತ ಅನ್ಯಕೋಮಿನ ಯುವಕ ಅಂತ ನನಗೆ ಗೊತ್ತಿರಲಿಲ್ಲ. ಅವನಿಗೂ ತೋರಿಸಿದ್ದು, ಆತ ಹಾಡು ತುಂಬಾ ಚೆನ್ನಾಗಿದೆ ಅಂತ ಹೇಳಿ ನನ್ನ ಫ್ರೆಂಡ್ಸ್ ಬಳಿಯೂ ಸಬ್‌ಸ್ಕ್ರೈಬ್ ಮಾಡಿಸ್ತೀನಿ ಬಾ ಅಂತ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ ” ಎಂದು ಅಳಲು ತೋಡಿಕೊಂಡಿದ್ದಾರೆ.

WhatsApp Image 2025-06-21 at 19.57.59
Trending Now