September 9, 2025
sathvikanudi - ch tech giant

ಜಿ. ಪಂ ಸಿಇಓ ಪ್ರಭು ಕಡಿಮೆ    ಫಲಿತಾಂಶಕ್ಕೆ ಕಾರಣವಾದ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ ತರಾಟೆ…..

Spread the love

ತಾಲೂಕಿನ ಮಾವತ್ತೂರು ಗ್ರಾಮ ಪಂಚಾಯತಿ ಲಿಂಗಾಪುರ ಸರ್ಕಾರಿ ಪ್ರೌಢ ಶಾಲೆಗೆ ಗುರುವಾರ ಭೇಟಿ ನೀಡಿದ ಜಿ. ಪಂ ಸಿಇಓ ಪ್ರಭು ಕಡಿಮೆ ಫಲಿತಾಂಶಕ್ಕೆ ಕಾರಣವಾದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಶಾಲೆಯಲ್ಲಿ ನೇರವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಓದುವ ಸ್ಥಿತಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಶಿಕ್ಷಕರಿಗೆ, “ನೀವು ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡದಿದ್ದರೆ ಮಕ್ಕಳ ಭವಿಷ್ಯ ಹಾಳಾಗಬಹುದು” ಎಂದು ಎಚ್ಚರಿಸಿದರು.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಲು ಶಿಕ್ಷಕರು ಹೆಚ್ಚಿನ ಕಸರತ್ತು ಮಾಡಬೇಕೆಂದು ಆವಶ್ಯಕತೆಯಿದ್ದು, ಇದಕ್ಕೆ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸಬೇಕು ಎಂದು ತಿಳಿಸಿದರು. ಸಮರ್ಪಕವಾದ ಶಿಕ್ಷಣಕ್ಕಾಗಿ ತರಗತಿಗಳಲ್ಲಿ ಶಿಸ್ತು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶಿಕ್ಷಕರು ಕ್ರಮಕೈಗೊಳ್ಳಬೇಕಿದೆ.

ಇನ್ನೂ ಮುಂದೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಬೇಕು, ಇಲ್ಲದಿದ್ದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಇಓ ಪ್ರಭು ಎಚ್ಚರಿಸಿದರು. ಈ ಮೂಲಕ ಶಾಲೆಯ ಫಲಿತಾಂಶವನ್ನು ಏರಿಸಲು ಹಾಗೂ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

WhatsApp Image 2025-06-21 at 19.57.59
Trending Now