
ಹಾಸನ ಜಿಲ್ಲೆಯ ಕಿತ್ತಾನೆಗಡಿಯ ನಿವಾಸಿ ಶಾರದಮ್ಮ (ವಯಸ್ಸು: 75) ಅವರು ಅನಾರೋಗ್ಯದ ಕಾರಣ, ಇಂದು ಬೆಳಿಗ್ಗೆ ತಮ್ಮ ಮಗಳೊಂದಿಗೆ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದ್ದರು.ಸುಮಾರು ಬೆಳಿಗ್ಗೆ 10:30ರ ಹೊತ್ತಿಗೆ ಅವರು ಆಸ್ಪತ್ರೆಯ ಪ್ರವೇಶದ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಅವರು ಜೀವನದ ಕೊನೆಹಂತವನ್ನು ಎದುರಿಸಬೇಕಾಯಿತು.
ಅತ್ಯಂತ ಅಜಾಗ್ರತೆಯಿಂದ ತೀವ್ರವೇಗದಲ್ಲಿ ಬಂದ KSRTC ಬಸ್ ( ಖಾಸಗಿ ಮಾಲೀಕತ್ವದ ಬಸ್), ನಿಯಂತ್ರಣ ತಪ್ಪಿ ನೇರವಾಗಿ ಶಾರದಮ್ಮ ಅವರನ್ನು ಗುದ್ದಿದೆ. ಗುದ್ದಿದ ರಭಸದ ಪರಿಣಾಮ ಅವರು ನೆಲಕ್ಕೆ ಬಿದಿದ್ದರೆ ಆದರ್ಜ್ ಗಮನಿಸದ ಬಸ್ ಚಾಲಕ, ಬಸ್ಸಿನ ಇಂಭಾಗದ ಚಕ್ರಗಳು ಅವರ ದೇಹದ ಮೇಲೆಯೇ ಸಂಪೂರ್ಣವಾಗಿ ಹರಿದಿದೆ. ಕಾಲುಗಳು ಸಂಪೂರ್ಣವಾಗಿ,ಜಜ್ಜಿ ಹೋಗಿದೆ ಕಣ್ಣೆದುರಿಗೇ ಒಂದು ಜೀವ ಬಲಿಯಾದ ಭೀಕರ ದೃಶ್ಯ ಮೂಡಿಸಿತು. ಸ್ಥಳದಲ್ಲೇ ಶಾರದಮ್ಮ ಸಾವನ್ನಪ್ಪಿದರು.
ಈ ಭೀಕರ ದುರಂತಕ್ಕೆ ಬಸ್ ಚಾಲಕರ ಅಜಾಗ್ರತೆ, ನಿರ್ಲಕ್ಷ್ಯ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತಾ ಮೌಲ್ಯಗಳ ಕೊರತೆಯೇ ಮುಖ್ಯ ಕಾರಣ ಎನ್ನಬಹುದು. ಬಸ್ ಸ್ಟಾಂಡ್ ತಿರುವು ಪ್ರದೇಶದಲ್ಲೂ ವೇಗ ಹಾಗೂ ನಿಯಂತ್ರಣ ಇಲ್ಲದ ಚಾಲನೆ ನಡೆಯುತ್ತಿರೋದು ವಿಷಾದಕರ ಸಂಗತಿ.
ಘಟನೆ ಬಳಿಕ ಭೀತಿಗೊಳ್ಳದ ಬಸ್ ಚಾಲಕ ಕೂಡಲೇ ಹಾಸನದ ಟ್ರಾಫಿಕ್ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಆರಂಭಿಸಿದೆ. ಸ್ಥಳೀಯ ಜನತೆ ಹಾಗೂ ಮೃತ ಮಹಿಳೆಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟ ಬಸ್ ನಡವಳಿಕೆಗೆ ಹಾಗೂ ಚಾಲಕನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಶಾರದಮ್ಮನ ಸಾವಿನ ಬಗ್ಗೆ ವಿಚಾರಿಸಿದರೆ KSRTC ಸಿಬ್ಬಂದಿ ಗಳು ನಮಗೂ ಹಾ ಸಾವಿಗೂ ಏನು ಸಂಬಂಧವಿಲ್ಲ ನೀವು ಏನು ಬೇಕಾದರೂ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಉಡಾಪೆ ಉತ್ತರ ನೀಡಿತಿದ್ದಾರೆ ಸಾರ್ವಜನಿಕರ ಪ್ರಾಣಕ್ಕೆ ಬೆಳೆ ಇಲ್ಲದಾಗಿದೆ.

ನಮ್ಮ ಸಾರಿಗೆ ವ್ಯವಸ್ಥೆಯಲ್ಲಿ ಜವಾಬ್ದಾರಿಯ ಕೊರತೆ ಹಾಗೂ ಅಜಾಗ್ರತೆ ಹೇಗೆ ಸಾವು ತರುವ ಮಟ್ಟಿಗೆ ಮುಂದಾಗಬಹುದು ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ, ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ತೀವ್ರ ಕ್ರಮ ಕೈಗೊಳ್ಳಬೇಕಾಗಿದೆ.✍🏻