October 24, 2025
sathvikanudi - ch tech giant

ತುಮಕೂರು: ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ ಬಿದ್ದ ನೌಕರ.!?

Spread the love

ಗುಬ್ಬಿ (ತುಮಕೂರು): ಕಂದಾಯ ತನಿಖಾಧಿಕಾರಿಯೊಬ್ಬರು ಎರಡನೇ ಬಾರಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಜಮೀನಿನ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿ.ಎಸ್.ಪುರ ಹೋಬಳಿಯ ಕಂದಾಯ ತನಿಖಾಧಿಕಾರಿ ನರಸಿಂಹಮೂರ್ತಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.



ಸಿ.ಎಸ್.ಪುರ ಹೋಬಳಿ ಗದ್ದೆಹಳ್ಳಿ ಗ್ರಾಮದ ನಾಗರಾಜು ಅವರಿಗೆ ಖಾತೆ ಬದಲಾವಣೆ ಮಾಡಿಕೊಡಲು ₹10 ಸಾವಿರ ಲಂಚ ಕೇಳಿದ್ದರು. ಹಣ ನೀಡಲು ಒಪ್ಪದ ರೈತ ನಾಗರಾಜು ಲೋಕಾಯುಕ್ತರಿಗೆ ದೂರು ನೀಡಿದ್ದರು. ಬುಧವಾರ ಸಿ.ಎಸ್‌.ಪುರ ನಾಡ ಕಚೇರಿಯಲ್ಲಿ ಹಣ ನೀಡುವ ಸಂದರ್ಭದಲ್ಲಿ ಹಣದ ಸಮೇತ ಕಂದಾಯ ತನಿಖಾಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನರಸಿಂಹಮೂರ್ತಿ 2023ರ ಜುಲೈ 7ರಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುವಾಗ ನಿವೇಶನದ ಖಾತೆ ಮಾಡಿಕೊಡಲು ಫಯಾಜ್ ಎಂಬುವರಿಗೆ ₹15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.

WhatsApp Image 2025-06-21 at 19.57.59
Trending Now