September 9, 2025
sathvikanudi - ch tech giant

ಕಡೂರು ರೈಲ್ವೆ ನಿಲ್ದಾಣದಲ್ಲಿ ಮಾದಕ ವಸ್ತು ಜಪ್ತಿ: 2.16 ಲಕ್ಷ ರೂ. ಮೌಲ್ಯದ ಡ್ರಗ್‌ಗಳು ವಶ, ಎನ್‌ಡಿಪಿಎಸ್ ಅಡಿಯಲ್ಲಿ ಪ್ರಕರಣ..!?

Spread the love


ಕಡೂರು: ಇಂದು ಮಧ್ಯಾಹ್ನ 1:45ರ ಸುಮಾರಿಗೆ ಟಾಟಾನಗರದಿಂದ ಯಶವಂತಪುರದತ್ತ ತೆರಳುತ್ತಿದ್ದ 18111 ಸಂಖ್ಯೆಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಬಕಾರಿ ಮತ್ತು ರೈಲ್ವೆ ಸಂಚಾರಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.



ಕಡೂರು ವಲಯದ ಅಬಕಾರಿ ನಿರೀಕ್ಷಕರಾದ ಸಂದೀಪ್ ಎಲ್.ಸಿ ಮತ್ತು ಅಬಕಾರಿ ಉಪನಿರೀಕ್ಷಕರಾದ ನಾಗೇಂದ್ರ ಎಸ್, ಸಿಬ್ಬಂದಿ ಉಮೇಶ್, ಮುಖ್ಯಪೇದೆ ಎರೇಂದ್ರ, ವಾಹನ ಚಾಲಕ ಅಶೋಕ್‌ ರವರ ನೇತೃತ್ವದಲ್ಲಿ RPF ಅಧಿಕಾರಿಗಳ ಸಹಯೋಗದೊಂದಿಗೆ ಈ ಕಾರ್ಯಾಚರಣೆ ನಡೆದಿದೆ.

ಕಾರ್ಯಾಚರಣೆಯ ವೇಳೆಯಲ್ಲಿ ಹೋನಗಾಂಜಾ (1.522 ಕೆ.ಜಿ), MDMA (25 ಗ್ರಾಂ) ಮತ್ತು ಬಾಂಗ್ ಚಾಕೊಲೆಟ್ (37 GM) ಪತ್ತೆಯಾಗಿದ್ದು, ಈ ಮಾದಕ ವಸ್ತುಗಳ ಮೌಲ್ಯ ಈ ಕೆಳಗಿನಂತಿದೆ:

1. ಹೋನಗಾಂಜಾ – 1.522 ಕೆ.ಜಿ. → ₹90,000
2. MDMA – 25 ಗ್ರಾಂ → ₹1,25,000
3. ಬಾಂಗ್ ಚಾಕೊಲೆಟ್ – 37 ಗ್ರಾಂ → ₹1,850
ಒಟ್ಟು ಮೌಲ್ಯ: ₹2,16,850/-



ಈ ವಸ್ತುಗಳನ್ನು ಕಾನೂನುಬಾಹಿರವಾಗಿ ಸಾಗಿಸುತ್ತಿದ್ದ ಆರೋಪಿ ವ್ಯಕ್ತಿಯನ್ನು ಪೊಲೀಸರು ಸ್ಥಳದಲ್ಲಿಯೇ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಅವರ ವಿರುದ್ಧ NDPS Act 1985 (Narcotic Drugs and Psychotropic Substances Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಬಕಾರಿ ಇಲಾಖೆಯು ಹೀಗಾಗಿ ಅಕ್ರಮ ಮಾದಕ ವಸ್ತುಗಳ ಸಾಗಣೆ ವಿರುದ್ಧ ಗಂಭೀರ ಕ್ರಮ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ತಪಾಸಣಾ ಕಾರ್ಯಾಚರಣೆಗಳು ನಡೆಯಲಿವೆ. ಈ ಪ್ರಕರಣದಲ್ಲಿ ತೀವ್ರ ತನಿಖೆ ಕೈಗೆತ್ತಿಕೊಳ್ಳಲಾಗಿದ್ದು, ಮತ್ತಷ್ಟು ಆರೋಪಿಗಳ ಹಿನ್ನಲೆ ಹಾಗೂ ಸಂಪರ್ಕಗಳನ್ನು ಬೆಳೆಸುವ ಕಾರ್ಯ ಪ್ರಗತಿಯಲ್ಲಿದೆ.


ಅಬಕಾರಿ ಇಲಾಖೆ ಹಾಗೂ RPF ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಮಾದಕ ವಸ್ತುಗಳ ಅಕ್ರಮ ಸಾಗಣೆ, ಹಂಚಿಕೆ, ಅಥವಾ ಸೇವನೆ ಕಾನೂನುಬಾಹಿರವಾಗಿದೆ. ಶಂಕಿತ ಚಟುವಟಿಕೆಗಳ ಬಗ್ಗೆ ತಕ್ಷಣವೆ ಇಲಾಖೆಗಳಿಗೆ ಮಾಹಿತಿ ನೀಡಬೇಕು. ಇಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಗಂಭೀರ ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ.
ಇದೊಂದು ಮಾದಕ ದ್ರವ್ಯ ರವಾನೆಗೆ ತಡೆ ನೀಡುವ ದೃಷ್ಟಿಯಿಂದ ಪ್ರಮುಖ ಹಂತವಾಗಿದ್ದು, ಇಂತಹ ತಪಾಸಣೆಗಳು ಮುಂದೆಯೂ ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

WhatsApp Image 2025-06-21 at 19.57.59
Trending Now