October 24, 2025
sathvikanudi - ch tech giant

ಸಂವಿದಾನ ಓದು ಅಧ್ಯಯನ ಶಿಬಿರದಲ್ಲಿ ಸಂವಿಧಾನದ ಮೌಲ್ಯಗಳ ಪ್ರಸ್ತಾವನೆ..

Spread the love



ಉಡುಪಿ: ವಿಮಾ ನೌಕರರ ಸಂಘ, ಉಡುಪಿ ವಿಭಾಗ ಹಾಗೂ ಸಮಾನ ಮನಸ್ಕ ಸಂಘಟನೆಗಳು, ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿದಾನ ಓದು ಅಧ್ಯಯನ ಶಿಬಿರದಲ್ಲಿ ಗಣ್ಯರು ಭಾಗವಹಿಸಿ, ಸಂವಿಧಾನದ ಮಹತ್ವವನ್ನು ಚರ್ಚಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವಕ್ತಾರರು, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಸಂವಿಧಾನದ ಮೂಲ ತತ್ವಗಳು ನಮ್ಮ ರಾಜಕೀಯ ಹಾಗೂ ಆಡಳಿತ ವ್ಯವಸ್ಥೆಯ ಮಾರ್ಗದರ್ಶಿ ಸಿದ್ಧಾಂತಗಳಾಗಬೇಕು ಎಂದು ಅಭಿಪ್ರಾಯಪಟ್ಟರು. ಇಂದಿನ ರಾಜಕೀಯ ಹಾಗೂ ಸಮಾಜದಲ್ಲಿ ಎದುರಾಗುವ ಎಲ್ಲ ಆಹಾನಿಗಳನ್ನು ಸಂವಿಧಾನದ ಅಸ್ತ್ರದ ಮೂಲಕ ಎದುರಿಸಬೇಕು ಎಂಬುದು ಅವರ ಆಶಯವಾಗಿತ್ತು.

ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನ ನಮ್ಮ ಸಮಾಜಕ್ಕೆ ನಿಜವಾದ ದಾರಿದೀಪ. ಇದರ ಮೂಲಕ ಸಮಾಜದಲ್ಲಿ ಸಮಾನತೆ, ನ್ಯಾಯ, ಮತ್ತು ಭಾವೈಕ್ಯತೆಯನ್ನು ಉತ್ತೇಜಿಸಬೇಕು ಎಂದು ವಕ್ತಾರರು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ಪ್ರಸ್ತಾವಣೆಯಲ್ಲಿರುವ “ಸಮಾಜವಾದ” ಮತ್ತು “ಜಾತ್ಯತೀತತೆ” ಎಂಬ ಆಶಯಗಳನ್ನು ಎತ್ತಿಹಿಡಿದಿರುವುದು ಅತ್ಯಂತ ಸಂತೋಷದ ವಿಚಾರ. ಈ ನಿರ್ಧಾರ ಭವಿಷ್ಯದಲ್ಲಿ ಸಮಗ್ರ ಪ್ರಜಾಪ್ರಭುತ್ವದ ಬಲವರ್ಧನೆಯನ್ನುಂಟುಮಾಡಲಿದೆ ಎಂಬ ವಿಶ್ವಾಸವನ್ನು ವಕ್ತಾರರು ವ್ಯಕ್ತಪಡಿಸಿದರು.

ಸಂವಿಧಾನ ಅಧ್ಯಯನ ಶಿಬಿರದಲ್ಲಿ ಹಲವಾರು ಗಣ್ಯರು, ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಆರತಿ ಗಿಳಿಯಾರು

WhatsApp Image 2025-06-21 at 19.57.59
Trending Now