September 9, 2025
sathvikanudi - ch tech giant

ಅಂಗವಿಕಲ ಮಹಿಳೆಗೆ ಪತ್ರಕರ್ತರ ಸಂಘದಿಂದ ಮಾನವೀಯ ಸಹಾಯಧನ ವಿತರಣೆ.!?

Spread the love




ಬೆಂಗಳೂರು:
ಅಂಗವಿಕಲ ಪನಿಬಂದ್ ರೇಷ್ಮಾ ಮಲ್ಲಿಕ್ (ರಬಕವಿ ಬನಹಟ್ಟಿ ತಾ) ಅವರಿಗೆ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ರಾಜ್ಯ ಸಂಘದ ವತಿಯಿಂದ ಸಣ್ಣ ಮಾನವೀಯ ಸಹಾಯಧನವನ್ನು ವಿತರಣೆ ಮಾಡಲಾಯಿತು.

ಅಂಗವಿಕಲತೆಯ ನಡುವೆಯೂ ಕಾರ್ಯಕ್ಷಮತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ರೇಷ್ಮಾ ಮಲ್ಲಿಕ್ ಅವರ ಸೇವಾಭಾವನೆಗೆ ಗೌರವ ಸೂಚನೆಗಾಗಿ ಈ ಸಹಾಯಧನ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರಾದ ಶಶಿಕಾಂತ್ ಕಾಂಬಳೆ, ಸಂಘಟನಾ ಸಂಚಾಲಕರಾದ ಶ್ರೀಮತಿ ಯಶಸ್ವಿನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮನುಕುಮಾರ್, ಸಲಹಾ ಸಮಿತಿ ಅಧ್ಯಕ್ಷರಾದ ಸಂಜಯ್ ಸಾವಂತ್, ಮತ್ತು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ವಿಜಯ್ ಮುನಿಯಪ್ಪ ಉಪಸ್ಥಿತರಿದ್ದರು. ಇವರುಗಳು ರೇಷ್ಮಾ ಮಲ್ಲಿಕ್ ಅವರ ಅಂಗವಿಕಲರಗಿದ್ದರು ಕೂಡ ಯಾರಿಗೂ ಕಡಿಮೆ ಇಲ್ಲಾ ಎನ್ನುವ ಹಾಗೆ ತನ್ನ ಕುಟುಂಬ ನಿಭವಿಸುತ್ತಿರುವ ಅವರ ಧೈರ್ಯವನ್ನು ಮೆಚ್ಚಿ ಮಾನವೀಯತೆ ಮೆರೆದಿದ್ದಾರೆ

ಈ ಸಂದರ್ಭ ಮಾತನಾಡಿದ ರಾಜ್ಯಾಧ್ಯಕ್ಷ ಶಶಿಕಾಂತ್ ಕಾಂಬಳೆ ಅವರು, “ನಮ್ಮ ಸಮಾಜದಲ್ಲಿ ಸೇವೆಮೆರೆಕೊಳ್ಳುತ್ತಿರುವ ಅಂಗವಿಕಲರು ಪ್ರೇರಣೆಯ ದೀಪಸ್ತಂಭಗಳಂತೆ. ಶ್ರೀ ಮತಿ ರೇಷ್ಮಾ  ಅವರ ಧೈರ್ಯ ನಮಗೆ ಹೆಮ್ಮೆ ತಂದಿದ್ದು, ಈ ಸಹಾಯಧನ ಅವರ ತೊಂದರೆಗೆ ಪರಿಹಾರವಲ್ಲದಿದ್ದರೂ ಸಹ, ಸಂಘಟನೆಯ ಮಾನವೀಯತೆ ಚಿಹ್ನೆ,” ಎಂದು ಅಭಿಪ್ರಾಯಪಟ್ಟರು.

ಸಂಘಟನಾ ಸಂಚಾಲಕಿ ಯಶಸ್ವಿನಿ ಮಾತನಾಡುತ್ತಾ, “ಪತ್ರಿಕೋದ್ಯಮ ಸಮುದಾಯದ ವತಿಯಿಂದ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಂಡು ನಾವು ನಿಂತಿದ್ದೇವೆ. ಇಂತಹ ಕಾರ್ಯಗಳು ನಮ್ಮ ಮೌಲ್ಯಗಳ ಪ್ರತಿಬಿಂಬವಾಗಿವೆ,” ಎಂದರು.

ರೇಷ್ಮಾ ಮಲ್ಲಿಕ್ ಅವರು ಸಹಾಯಧನ ಸ್ವೀಕರಿಸಿ ಮಾತನಾಡುತ್ತಾ, “ನನ್ನ ಸೇವೆಗೆ ಗೌರವ ತೋರಿರುವ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು. ಈ ಪ್ರೋತ್ಸಾಹದಿಂದ ನಾನು ಇನ್ನಷ್ಟು ನಿಷ್ಠೆಯಿಂದ ಕೆಲಸ ಮಾಡುವ ಶಕ್ತಿ ಪಡೆಯುತ್ತಿದ್ದೇನೆ,” ಎಂದು ಭಾವೋದ್ರೇಕದಿಂದ ಹೇಳಿದರು.

ಕಾರ್ಯಕ್ರಮದ ಕೊನೆಗೆ ರೇಷ್ಮಾ ಮಲ್ಲಿಕ್ ಅವರಿಗೆ ಸನ್ಮಾನ ಸಲ್ಲಿಸಿ, ಒಂದು ಪುಷ್ಪಗುಚ್ಛ ಮತ್ತು ಅಭಿನಂದನಾ ಪತ್ರ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಸಹೋದ್ಯೋಗಿಗಳೂ ಭಾಗವಹಿಸಿದ್ದರು.

ಪತ್ರಕರ್ತರ ಸಂಘದ ಈ ಒಂದು ಮಾನವೀಯ ಕೃತ್ಯ ಇತರರಿಗೆ ಸಹ ಅನುದಾನ ನೀಡುವ ಮತ್ತು ಸಹಾಯಹಸ್ತವನ್ನೆರೆದಿಡುವ ಪ್ರೇರಣೆಯಾಗಿದೆ.



WhatsApp Image 2025-06-21 at 19.57.59
Trending Now