September 10, 2025
sathvikanudi - ch tech giant

ದೋಸೆಯಬದಲಿಗೆ ಹಣದ ಬಂಡಲ್ ಅನ್ನ ಪಾರ್ಸಲ್ ಮಾಡಿದ ಹೋಟೆಲ್ ಮಾಲೀಕ…..!

Spread the love

ಕೊಪ್ಪಳ ಜಿಲ್ಲೆಯ

ಕುಷ್ಟಗಿಯಲ್ಲಿ ಆಶ್ಚರ್ಯಕರ ಘಟನೆ ಸಂಭವಿಸಿದೆ. ದೋಸೆಯನ್ನು ಪಾರ್ಸಲ್ ಕಟ್ಟಿಕೊಡಲು ಹೋಟೆಲ್‌ಗೆ ಆರ್ಡರ್ ನೀಡಿದ ಗ್ರಾಹಕನಿಗೆ, ದೋಸೆ ಬದಲು ಹಣದ ಬಂಡಲ್‌ ಅನ್ನು ಹೋಟೆಲ್ ಮಾಲೀಕ ತಪ್ಪಾಗಿ ಕೊಟ್ಟಿರುವ ಘಟನೆ ನಡೆದಿದೆ. ಪಾರ್ಸಲ್ ಕಟ್ಟುವ ಆತುರದಲ್ಲಿ, ದೋಸೆ ಬದಲು ಹೋಟೆಲ್ ಮಾಲೀಕನು ಬ್ಯಾಂಕಿಗೆ ಕಟ್ಟಲು ಕೂಡಿಸಿಟ್ಟಿದ್ದ 49,625 ರೂ.ದ ಚೀಲವನ್ನು ಕೊಟ್ಟಿದ್ದಾರೆ.



ಈ ತೊಂದರೆಯ ಬಗ್ಗೆ ತಿಳಿದುಬಂದಿದ್ದು, ಗ್ರಾಹಕ ಶ್ರೀನಿವಾಸ ಎನ್‌.ದೇಸಾಯಿ ಪಾರ್ಸಲ್ ತೆಗೆದುಕೊಂಡು ಮನೆಗೆ ಬಂದ ನಂತರ. ಚೀಲ ತೆರೆದು ನೋಡಿದಾಗ, ಹಣವಿರುವುದನ್ನು ಕಂಡ ಅವರು, ತಕ್ಷಣವೇ ಹಣವನ್ನು ಹೋಟೆಲ್ ಮಾಲೀಕನಿಗೆ ಮರಳಿಸುವ ಮೂಲಕ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.

ಹೋಟೆಲ್ ಮಾಲೀಕ ತನ್ನ ತಪ್ಪನ್ನು ಒಪ್ಪಿಕೊಂಡು, ಶ್ರೀನಿವಾಸ ದೇಸಾಯಿ ಅವರ ನಿಸ್ವಾರ್ಥ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಘಟನೆ, ಇಂದಿನ ಸಮಯದಲ್ಲಿ ಸಹ ಪ್ರಾಮಾಣಿಕತೆ ಮತ್ತು ಮಾನವೀಯತೆ ಇನ್ನೂ ಜೀವಂತವಿದ್ದುದು ಸಾಬೀತಾಗಿದೆ.

ಈ ಘಟನೆಯು ಸ್ಥಳೀಯರಲ್ಲಿ ಕೇವಲ ಆಶ್ಚರ್ಯವನ್ನೇ ಅಲ್ಲದೆ, ಒಳ್ಳೆಯ ಬಾಳಿನ ಪಾಠವನ್ನೂ ಕಲಿಸಿದೆ. ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆ ಎಂದಿಗೂ ಮೌಲ್ಯವಂತವಾಗಿರುತ್ತವೆ ಎಂಬುದನ್ನು ಈ ಘಟನೆ ಪುನಃ ದೃಢಪಡಿಸಿದೆ.

WhatsApp Image 2025-06-21 at 19.57.59
Trending Now