September 9, 2025
sathvikanudi - ch tech giant

ಮೋಹರಂ ಹಬ್ಬದಲ್ಲಿ ಶಾಸಕರ ನೃತ್ಯ ಭಕ್ತರ ಮನಗೆದ್ದು ಸಮಾರಂಭ!?

Spread the love


ವರದಿ: ರಮೇಶ್, ಆನಂದಪುರ

ಶಿವಮೊಗ್ಗ ಜಿಲ್ಲೆ ಸಾಗರ ಹೊಸನಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಶನಿವಾರ ರಾತ್ರಿ ಆನಂದಪುರದ ಭೋವಿ ಕಾಲೋನಿಯಲ್ಲಿ ನಡೆಯುತ್ತಿದ್ದ ಮೊಹರಂ ಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿ ಹಬ್ಬಕ್ಕೆ ಚಾಲನೆ ನೀಡಿದರು.



ಈ ಸಂದರ್ಭದಲ್ಲಿ ಶಾಸಕರು ತಮ್ಮ ಇಷ್ಟದ ಹಾಡಾದ “ಚೋರರಿಗೆ ಒಂದು ಕಾಲ, ಶೂರರಿಗೆ ಒಂದು ಕಾಲ” ಎಂಬ ಗೀತೆಯನ್ನ ಹಾಡುತ್ತಾ ನೃತ್ಯ ಹಾಕಿ ಭಕ್ತರ ಮನಗೆದ್ದರು. ಶಾಸಕರ ನೃತ್ಯಕ್ಕೆ ಉತ್ಸಾಹಿತರಾದ ಸಾವಿರಾರು ಭಕ್ತರು ಕೂಡ ಹೆಜ್ಜೆ ಹಾಕುತ್ತಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ಈ ಹಿನ್ನೆಲೆಯಲ್ಲಿ ಭೋಜನ ವ್ಯವಸ್ಥೆ ಕೂಡ ಚೆನ್ನಾಗಿ ಆಯೋಜಿಸಲಾಗಿತ್ತು.



ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಉಮೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಪಿ.ಎಸ್. ಮುನ್ನ, ಪಕ್ಷದ ಘಟಕ ಅಧ್ಯಕ್ಷ ಗಜೇಂದ್ರ, ಲಾವಿಗೆರೆಯ ಸೋಮಶೇಖರ್ ಹಾಗೂ ಮಂಜುನಾಥ್ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಪೂರ್ಣವಾಗಿ ಮೊಹರಂ ಹಬ್ಬದ ಆಚರಣೆ ಮುಗಿದ ನಂತರ, ಶಾಸಕರು ಇಸ್ಲಾಂಪುರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿಯ ಭಕ್ತರೊಂದಿಗೆ ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, “ಇಸ್ಲಾಂಪುರದ ಮುಖ್ಯ ರಸ್ತೆಗೆ ಈಗಾಗಲೇ ₹40 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಆದರೆ ಮಳೆಗಾಲದ ಕಾರಣದಿಂದಾಗಿ ಕಾಮಗಾರಿ ತಡವಾಗಿದೆ. ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ,” ಎಂದು ಭರವಸೆ ನೀಡಿದರು.

ಅಲ್ಲದೆ, ತಮ್ಮ ವಿರುದ್ಧ ಕೆಲವರು ಹಾಸ್ಯವನ್ನಾಡುತ್ತಿರುವ ಕುರಿತು ಅವರು ಪ್ರತಿಕ್ರಿಯಿಸಿ, “ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುವವರು ಆತ್ಮವಿಶ್ವಾಸವಿಲ್ಲದ ವಿರೋಧ ಪಕ್ಷದ ಕೆಲವು ಅಲ್ಪ ಸಂಖ್ಯೆಯ ಜನರು. ಇಂತಹವರಿಗೆ ನಮ್ಮ ಅಭಿವೃದ್ಧಿ ಕಾರ್ಯಗಳ ಮೂಲಕ ತಕ್ಕ ಉತ್ತರ ಸಿಗಲಿದೆ,” ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಿದರು.

ಹೀಗೆ ಆನಂದಪುರ ಹಾಗೂ ಇಸ್ಲಾಂಪುರದಲ್ಲಿ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಹಾಗೂ ಸಾಂಸ್ಕೃತಿಕ ಜತೆಗೆ ಭಾವಪೂರ್ಣವಾಗಿ ಆಚರಿಸಲಾಗಿದ್ದು, ಶಾಸಕರ ಉಪಸ್ಥಿತಿಯಿಂದ ಸ್ಥಳೀಯರ ಮೊಗದಲ್ಲಿ ಸಂತೋಷ ಬೆಳಗಿತು.

WhatsApp Image 2025-06-21 at 19.57.59
Trending Now