
ಉಡುಪಿ : ಬ್ರಹ್ಮಾವರ ತಾಲ್ಲೂಕಿನ ಮಟಪಾಡಿ ಗ್ರಾಮದ ನಿವಾಸಿಯಾದ ನರಸಿಂಹ ಆಚಾರ್ಯ ಯಾನೆ ನರಸಿಂಹ ಸಾಮುಗ ಎಂಬ ವ್ಯಕ್ತಿ ಸರ್ಕಾರಿ ಜಮೀನನ್ನು ಆಕ್ರಮಿಸಿ ಒತ್ತುವರಿ ಮಾಡಿ ಸರ್ಕಾರಿ ಜಾಗ ತನ್ನ ಹಕ್ಕಿನ ಸೊತ್ತು ಎಂದು ನಾಮಫಲಕವನ್ನು ಹಾಕಿಕೊಂಡಿರುತ್ತಾರೆ. ಸರಿ ಸುಮಾರು 30 ವರ್ಷಗಳ ಹಿಂದಿನಿಂದಲೂ ಕೃಷಿ ಚಟುವಟಿಕೆ ಹಾಗೂ ಸಾರ್ವಜನಿಕರು ಓಡಾಡಲು ಉಪಯೋಗಿಸುತ್ತಿದ್ದ ದಾರಿಯ ಹಕ್ಕನ್ನು ಉಪಯೋಗಿಸಲು ತಡೆಯೋಡ್ಡಿ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅಡಚಣೆ ಮಾಡುತ್ತಿದ್ದಾರೆ ಎಂದು ಆ ಭಾಗದ ಸಾರ್ವಜನಿಕರು ದಾಖಲಾತಿ ಸಮೇತವಾಗಿ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಹೋರಾಟ ಮಾಡುತ್ತಿದ್ದು ಅಲ್ಲದೆ ಈ ವಿಚಾರವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿರುತ್ತಾರೆ.
ಸರಕಾರಿ ಜಮೀನಿನ ರಕ್ಷಣೆ ಮತ್ತು ಒತ್ತುವರಿ ತೆರವುಗೊಳಿಸುವುದು ತಹಶೀಲ್ದಾರ್ ಕರ್ತವ್ಯ ಆದರೆ ಸ್ಥಳೀಯ ಆಡಳಿತ ಅಧಿಕಾರಿಯವರಾದ ಭರತ್ ಶೆಟ್ಟಿ ಇವರು ಸಾರ್ವಜನಿಕರ ದೂರು ಇದ್ದರೂ ಕೂಡ ಯಾವುದೇ ರೀತಿಯ ದಾಖಲಾತಿಗಳನ್ನು ತಹಶೀಲ್ದಾರ್ ಗಮನಕ್ಕೆ ನೀಡಿಲ್ಲ ಹಾಗೂ ಸರ್ಕಾರಿ ಜಮೀನನ್ನು ರಕ್ಷಣೆ ಮಾಡುವ ಹೊಣೆಯನ್ನು ಹೊತ್ತಿಲ್ಲ ಎಂದು ಸಾರ್ವಜನಿಕರು ಆಪಾದನೆ ಮಾಡುತ್ತಿದ್ದಾರೆ.

ಮಟಪಾಡಿ ಗ್ರಾಮದ ಸರ್ವೆ ನಂಬರ್ 13/7A, 13/48, 13/54 ಸರಕಾರಿ ಜಮೀನನ್ನು ಒತ್ತುವರಿ ಮಾಡಿದ ನರಸಿಂಹ ಆಚಾರ್ಯ ಈತನಿಗೆ ರಕ್ಷಣೆ ನೀಡಿರುವ ಗ್ರಾಮ ಆಡಳಿತ ಅಧಿಕಾರಿ ಕರ್ತವ್ಯ ಲೋಪ ನಡೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಸರಕಾರಕ್ಕೆ ಸಂಬಂಧಪಟ್ಟ ಜಮೀನನ್ನು ಒತ್ತುವರಿ ಮಾಡಿಕೊಂಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸಾರ್ವಜನಿಕರಿಗೆ ಸಹಕರಿಸದೆ ಇರುವುದು ಬೇಸರದ ವಿಚಾರವಾಗಿದೆ ಎಂದು ಸಾರ್ವಜನಿಕರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಈ ನರಸಿಂಹ ಆಚಾರ್ಯ ಎಂಬುವವರು ಹತ್ತಿರದಲ್ಲಿ ಕೆಲವೊಂದು ದೈವ ದೇವರುಗಳ ಮನೆಗಳನ್ನು ಸ್ವತಃ ಕಟ್ಟಿಕೊಂಡು ಆ ಭಾಗದಲ್ಲಿ ಸರಕಾರಿ ಜಮೀನಿನಲ್ಲಿ ವಾಮಾಚಾರಗಳನ್ನು ಮಾಡಿ ಸಾರ್ವಜನಿಕರು ತಿರುಗಾಡುವ ರಸ್ತೆಯಲ್ಲಿ ಕುಂಬಳ ಕಾಯಿ, ಇತರ ವಸ್ತುಗಳನ್ನು ಹಾಕಿ ಸಾರ್ವಜನಿಕರನ್ನು ಹೆದರಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವ ಮಾಹಿತಿಗಳನ್ನು ಅಲ್ಲದೆ ಛಾಯಾ ಚಿತ್ರಣವನ್ನು ಮಾಧ್ಯಮಕ್ಕೆ ನೀಡಿರುತ್ತಾರೆ.

ಇವರ ಮನೆಯ ಪಕ್ಕದಲ್ಲಿ ಸರಕಾರಿ ಕೆರೆ ಇದ್ದು ಸರಕಾರಿ ಕೆರೆ ಇದ್ದು ಮಲ ಮೂತ್ರಗಳನ್ನು ಬಿಡುವುದು ಅಲ್ಲದೆ ವಾಮಾಚಾರ ಮಾಡಲು ಬಳಸಿರುವ ಕೆಲವೊಂದು ವಸ್ತುಗಳನ್ನು ಕೆರೆಗೆ ಎಸಿಯುವುದರ ಜೊತೆಗೆ ಈತನ ಮನೆಯ ಕೊಳಕು ನೀರನ್ನು ಕೆರೆಗೆ ಬಿಟ್ಟು ಕೆರೆಯನ್ನು ಕಲುಷಿತ ಗೊಳಿಸಿರುವುದರ ಜೊತೆಗೆ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ ಎನ್ನುವ ಮಾಹಿತಿಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬಂದಿದೆ.

ಅಲ್ಲದೆ ಈತ ಸರ್ಕಾರಕ್ಕೆ ಸಂಬಂಧಿಸಿದ ಜಾಗದಲ್ಲಿ ಕಬ್ಬಿಣದ ಗೇಟ್ ಗಳನ್ನು ಅಳವಡಿಸಿ ಸಾರ್ವಜನಿಕರು ಹೋಗದ ಹಾಗೆ ನಿರ್ಬಂಧ ಹೇರಲು ಖಾಸಗಿ ಜಾಗ ಎಂದು ನಾಮಪಲಕ ಹಾಕಿಕೊಂಡು ಸಾರ್ವಜನಿಕರು ಓಡಾಡಲು ಆಗದ ಹಾಗೆ ದುರ್ವರ್ತನೆ ತೋರಿರುತ್ತಾರೆ ಈತನ ಈ ದೌರ್ಜನ್ಯದಿಂದ ಸಾರ್ವಜನಿಕರು ತತ್ತರಿಸಿ ಹೋಗಿರುತ್ತಾರೆ ಇದೇ ವಿಚಾರವಾಗಿ ಮೊನ್ನೆ ದಿನ ಸರ್ವೇ ಇದ್ದು ಸರ್ವೇ ಮಾಡುತ್ತಿರುವಾಗ ಸಂಬಂಧಪಟ್ಟ ಇಲಾಖೆಗಳು ಬಿಟ್ಟು ಸಂಬಂಧ ಇಲ್ಲದ ವ್ಯಕ್ತಿಗಳಾದ ಸೋಮನಾಥ ನೈರಿ ಎಂಬುವವರು ಶಿವಮೊಗ್ಗ ಮೂಲದ ಮತ್ತು ಇತರೆ ಕಡೆಯಿಂದ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಸಾರ್ವಜನಿಕರು ಹಾಗೂ ಧನ ಕರುಗಳು ತಿರಗಾಡುವ ಕೃಷಿ ಭೂಮಿಗೆ ಅಡ್ಡಲಾಗಿ ಕಲ್ಲು ಕೊಂಬಗಳನ್ನು ಹಾಗೂ ಸರ್ಗಿಬೆಲಿಗಳನ್ನು ಹಾಕಲು ಏಕಏಕಿ ಪ್ರಯತ್ನಪಟ್ಟು ಅಲ್ಲಿ ಸಂಬಂಧಪಟ್ಟ ಸಾರ್ವಜನಿಕರಿಗೆ ಗೂಂಡಾಗಿರಿ ಮಾಡಿ ಪರಿಸರದಲ್ಲಿ ಶಾಂತಿ ಭಂಗ ಆಗುವ ಹಾಗೆ ತೊಂದರೆ ಮಾಡಿರುತ್ತಾರೆ ಇವನ ಈ ಉಪಟಳದಿಂದ ಕತ್ತರಿಸಿ ಹೋಗಿದ್ದು ಈತನ ಮೇಲೆ ಠಾಣೆಯಲ್ಲಿ ದೂರು ದಾಖಲೆಸಿರುತ್ತಾರೆ.
ಆದರೆ ಈತ ಈಗಾಗಲೇ ನನ್ನ ಮೇಲೆ ರೌಡಿಶೀಟರ್ ಇದೆ ನಾನೇನು ಹೆದರುವುದಿಲ್ಲ ಬಾಲ ಮಡಿದು ಕುಳಿತುಕೊಳ್ಳಬೇಕು ಎಂದು ತನಗೆ ಸಂಬಂಧವಿಲ್ಲದ ವಿಚಾರಕ್ಕೆ ತಲೆ ಹಾಕಿ ಅಲ್ಲಿನ ಸಾರ್ವಜನಿಕರಿಗೆ ಧಮ್ಕಿ ಹಾಕಿ ಬೆದರಿಕೆ ಇಟ್ಟಿರುತ್ತಾರೆ ಎಂದು ಅಲ್ಲಿನ ಸಾರ್ವಜನಿಕರು ಮಾಧ್ಯಮಗಳ ಜೊತೆ ಹಂಚಿಕೊಂಡಿರುತ್ತಾರೆ.ಆದುದರಿಂದ ಈ ವಿಚಾರದ ಬಗ್ಗೆ ಸ್ಥಳೀಯ ಆಡಳಿತ ಅಧಿಕಾರಿಗಳಾದ ಭರತ್ ಶೆಟ್ಟಿ ಇವರು ಸರಿಯಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ಸರ್ಕಾರಿ ಸಂಬಂಧ ಪಟ್ಟ ಕೆರೆ ಜಮೀನುಗಳು ಈತನಿಂದ ಒತ್ತುವರಿಯಾಗಿರುವ ಬಗ್ಗೆ ತಹಸಿಲ್ದಾರ್ ಗಮನಕ್ಕೆ ತಂದು ಸರ್ಕಾರಿ ಜಮೀನನ್ನು ರಕ್ಷಣೆ ಮಾಡದೆ ನಿರ್ಲಕ್ಷ ತೋರಿ ಸರ್ಕಾರದ ಕೆಲಸವನ್ನು ಮಾಡಬೇಕಾದ ಇವರು ನಿರ್ಲಕ್ಷ ತೋರಿರುತ್ತಾರೆ. ಅಲ್ಲದೆ ಈ ಭಾಗಕ್ಕೆ ಸಂಬಂಧವಿಲ್ಲದ ವ್ಯಕ್ತಿಯಾದ ಸೋಮನಾಥ್ ನೈರಿ ಈತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈತನ ಮೇಲೆ ಠಣಾಧಿಕಾರಿಯವರು ಕ್ರಮ ಕೈಗೊಂಡು ಸಾರ್ವಜನಿಕರನ್ನು ರಕ್ಷಣೆ ಮಾಡಬೇಕು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ನರಸಿಂಹ ಆಚಾರ್ಯ ಈ ದಾರಿಯ ವಿಚಾರದಲ್ಲಿ ತಿರುಗಾಡಲು ತೊಂದರೆ ಮಾಡ ಬಾರದು ಎಂದು ಘನ ನ್ಯಾಯಾಲಯ ತಡೆ ಆಜ್ಞೆ ನೀಡಿರುತ್ತಾರೆ.
ಈ ರೀತಿಯಾಗಿ ಸಾರ್ವಜನಿಕರ ಬಗ್ಗೆ ನಿರ್ಲಕ್ಷ ತೋರುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಮತ್ತು ಗ್ರಹ ಸಚಿವರಿಗೆ ಮನವಿ ಮಾಡುವುದರ ಜೊತೆಗೆ ಇವರ ವಿರುದ್ಧ ಜಿಲ್ಲಾಡಳಿತದ ಎದುರುಗಡೆ ಪ್ರತಿಭಟನೆ ಮಾಡಲಾಗುವುದು ಎಂದು ಸಾರ್ವಜನಿಕರು ಕಂದಾಯ ಆಡಳಿತ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ :ಆರತಿ ಗಿಳಿಯಾರ್ ಉಡುಪಿ ಜಿಲ್ಲೆ