September 10, 2025
sathvikanudi - ch tech giant

ಶ್ರೀ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಸಿದ್ದತೆ ಕುರಿತು ಪೂರ್ವಭಾವಿ ಸಭೆ-ಒಂದು ತಂಡವಾಗಿ ಅಚ್ಚುಕಟ್ಟಾಗಿ ಕರ್ತವ್ಯ  ನಿರ್ವಹಿಸಲು ಡಿಸಿ ಸೂಚನೆ!?

Spread the love



ಹಾಸನ : ಪ್ರಪಂಚಕ್ಕೆ ಹೆಸರುವಾಸಿಯಾದ ಶ್ರೀ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವವನ್ನು ಎಲ್ಲರೂ ಸೇರಿ ಒಗ್ಗಟ್ಟಿನಿಂದ ಒಂದು ತಂಡವಾಗಿ ಅಚ್ಚುಕಟ್ಟಾಗಿ ಕರ್ತವ್ಯ  ನಿರ್ವಹಿಸುವ ಮೂಲಕ ಬರುವ ಭಕ್ತಾದಿಗಳಿಗೆ ಸುಗಮ ದರ್ಶನಕ್ಕೆ  ಅವಕಾಶ ಕಲ್ಪಿಸಿ ಜಿಲ್ಲೆಗೆ ಕೀರ್ತಿ ತರೋಣ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಶ್ರೀ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ಸಿದ್ದತೆ ಕುರಿತು ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು  ಅರ್ಚಕರಿಂದ ಮಾಹಿತಿ ಪಡೆದ ಅವರು ಭಕ್ತಾಧಿಕಾಗಳಿಗೆ ದೇವಿಯ ದರ್ಶನಕ್ಕೆ ಹೆಚ್ಚಿನ ಸಮಯ ಒದಗಿಸಲು ಅವಕಾಶ ಮಾಡಿಕೊಡುವಂತೆ  ತಿಳಿಸಿದರು.


ಸುರಕ್ಷತೆ, ಕುಡಿಯುವ ನೀರು, ಸ್ವಚ್ಚತೆಗೆ ಆದ್ಯತೆ ನೀಡಬೇಕು ಈ ನಿಟ್ಟಿನಲ್ಲಿ ಸಾರ್ವಜನಿಕರ ಶೌಚಾಲಯ ನಿರ್ವಹಣೆ ಮತ್ತು ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು. ಸಮವಸ್ತ್ರ ಧರಿಸಿರಬೇಕು ಜೊತೆಗೆ ಸ್ವಚ್ಚತೆ ಸಂದರ್ಭದಲ್ಲಿ ಕಾರ್ಮಿಕರು ಸುರಕ್ಷತಾ ಪರಿಕರಗಳನ್ನು ಬಳಸುವಂತೆ ನೋಡಿಕೊಳ್ಳಲು ತಿಳಿಸಿದ ಅವರು ದಿನದಲ್ಲಿ ಸ್ವಚ್ಚತೆಗೆ ಮೂರು ಬ್ಯಾಚ್ ಮಾಡುವಂತೆ ಸೂಚಿಸಿದರಲ್ಲದೆ, ಮೇಲ್ವಿಚಾರಣೆೆ ಮಾಡುವಂತೆ ನಿರ್ದೇಶನ ನೀಡಿದರು.

ಹೂವಿನ ಅಲಂಕಾರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಅಲಂಕಾರ ಪುನರಾವರ್ತನೆ ಆಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಂತ್ರಿಕತೆಯನ್ನು ಬಳಸಿಕೊಂಡು ಕಡಿಮೆ ಸ್ಥಳ ಬಳಸಿಕೊಂಡು ಉತ್ತಮ ರೀತಿಯಲ್ಲಿ ಅಲಂಕಾರಕ್ಕೆ ಒತ್ತು ನೀಡುವಂತೆ ತಿಳಿಸಿದರು.

ಟೆಂಡರ್ ಡಾಕ್ಯುಮೆಂಟ್ ಅನ್ನು ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಪರಿಶೀಲನೆ ಮಾಡಿ ಸುರಕ್ಷೆತೆ ಬಹಳ ಮುಖ್ಯ ಆ ಕಾರಣಕ್ಕೆ ಯಾವುದೇ ನ್ಯೂನ್ಯತೆಗಳು ಆಗದಂತೆ ಎಚ್ಚರಿಕೆವಹಿಸಿ ಕ್ರಮವಹಿಸಬೇಕೆಂದರು.

ಅಂದಾಜು ಒಂದು ದಿನಕ್ಕೆ ಎಷ್ಟು ಜನ ಬರುತ್ತಾರೆ ಎಂಬುದನ್ನು ಪರಿಗಣಿಸಿ ಅಗತ್ಯ ಬ್ಯಾರಿಕೇಡಿಂಗ್ ಸಿದ್ಧತೆಗೆ ಕ್ರಮವಹಿಸುವಂತೆ ಸೂಚಿಸಿದರು. ದೇವಸ್ಥಾನದ ಆವರಣದಲ್ಲಿ ಹಾಗೂ ನಗರದ ವೃತ್ತಗಳಲ್ಲಿ ಎಲ್.ಇ.ಡಿ ಮೂಲಕ ನೇರ ಪ್ರಸಾರ ಮಾಡುವ ಸಂದರ್ಭದಲ್ಲಿ ಜನಸಂದಣಿ ಮತ್ತಿತರ ಮಾಹಿತಿಗಳನ್ನು ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.


ವಿಶೇಷ ಚೇತನರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಎಂದ ಅವರು ಸುಸ್ಸಜ್ಜಿತ ಅಂಬುಲೆನ್ಸ್,ಪ್ರಥಮ ಚಿಕಿತ್ಸೆಗೆ ಅಗತ್ಯ ಔಷಧಿಗಳು, ತುರ್ತು ಸಂದರ್ಭದಲ್ಲಿ ಅನುಕೂಲವಾ ಗುವಂತೆ ಬಗ್ಗಿ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು.

ಪ್ಲಾಸ್ಟಿಕ್ ಬಳಸದಂತೆ ನಿಗಾವಹಿಸಲು ಸೂಚನೆ ನೀಡಿದರು. ಬ್ಯಾರಿಕೇಡ್ ಒಳಗೆ ಸ್ವಚ್ಚತೆಗೆ ವಾಕ್ಯೂಂ ಕ್ಲೀನರ್ ಬಳಕೆಗೆ ತಿಳಿಸಿದರು. ಭಕ್ತಾದಿಗಳು ಅನುಕೂಲವಾಗುವಂತೆ ಡಸ್ಟ್ ಬಿನ್ ಇಡಲು ಸೂಚಿಸಿದರು.

ಮಜ್ಜಿಗೆ, ಪಾನಕ ಹಾಗೂ ಪ್ರಸಾದ ರೂಪದಲ್ಲಿ ನೀಡುವ ಮುನ್ನ ಗುಣಮಟ್ಟದ ಬಗ್ಗೆ ಪರೀಕ್ಷೆ ನಡೆಸಿದ ನಂತರ ಭಕ್ತರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ನಿಗಾವಹಿಸಲು ಸಿ.ಸಿ.ಟಿ.ವಿ.ಅಳವಡಿಸಬೇಕು ಎಂದು ಸೂಚಿಸಿದರು.

ಪ್ರತಿದಿನ ನಡೆಯುವ ಕಾರ್ಯಕ್ರಮದ ಬಗ್ಗೆ ವೆಬ್ ಸೈಟ್ ನಲ್ಲಿ ಹಾಕುವಂತೆ ಸೂಚಿಸಿದರು. ಕೆ.ಎಸ್.ಆರ್.ಟಿ.ಸಿ, ರೈಲ್ವೆ, ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿ ದಿನ ಆಗಮಿಸುವ ವಾಹನಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ವೆಂಕಟೇಶ್ ನಾಯ್ಡು, ಉಪ ವಿಭಾಗಾಧಿಕಾರಿ ಹಾಗೂ ದೇವಾಲಯ ಆಡಳಿತಾಧಿಕಾರಿ ಮಾರುತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

WhatsApp Image 2025-06-21 at 19.57.59
Trending Now