September 9, 2025
sathvikanudi - ch tech giant

ಮನೆ ಕಳವು ಮಾಡಿದ್ದ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿ ಯಾದ ಆಲೂರು ಪೊಲೀಸರು ಸುಮಾರು 8 ಲಕ್ಷ ಮೌಲ್ಯದ ಚಿನ್ನದ ಆಭರಣ ವಶಕ್ಕೆ!?

Spread the love



ಆಲೂರು. ತಾಲೂಕಿನಲ್ಲಿ ಕಳೆದ ಎರಡು ತಿಂಗಳುಗಳಿಂದ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದವು ಇದನ್ನು ಮನಗಂಡ ಆಲೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ ಕಳ್ಳತನ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ  ಒಂದು ತಂಡವನ್ನು ರಚಿಸಿ ಕಳ್ಳತನ ಮಾಡಿದ ಕಳ್ಳರನ್ನು   ಪತ್ತೆ ಮಾಡಿ,ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.



ಕೆ. ಹೊಸಕೋಟೆ ಹೋಬಳಿ ರಿಜ್ವನ್ ಎಂಬ ವ್ಯಕ್ತಿಯು ಜೂ.7ರಂದು ಕುಟುಂಬ ಸಮೇತ ಗದಗ ಜಿಲ್ಲೆ ಲಕ್ಷ್ಮೀಶ್ವರ ದರ್ಗಾಕ್ಕೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ದರ್ಗಾದ ದರ್ಶನ ಮುಗಿಸಿ ವಾಪಸ್ಸು ಮನೆಗೆ ಬಂದು ನೋಡಿದಾಗ ಮನೆಯ ಹಿಂಭಾಗದ ಬಾಗಿಲನ್ನು ಕಳ್ಳರು ಕಬ್ಬಿಣದ ಸಲಾಕೆಯಿಂದ ಮುರಿದಿರುವುದನ್ನು ನೋಡಿ ಗಾಬರಿಯಿಂದ ಮನೆಯ ಒಳಗಡೆ ಪರೀಕ್ಷಿಸಿದಾಗ ಸುಮಾರು 266 ಗ್ರಾಮ್ ಚಿನ್ನಾಭರಣಗಳು. ಹಾಗೂ 5000 ನಗದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತು. ನಂತರ ಮನೆಯ ಮಾಲೀಕರು ಈ ಸಂಬಂಧ ಅಲೂರು ಪೊಲೀಸ್ ಠಾಣೆಯಲ್ಲಿ ಕಳ್ಳರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಚಿನ್ನದ ಒಡವೆ ಹಾಗೂ ಹಣವನ್ನು ವಾಪಸ್ಸು ಕೊಡಿಸಬೇಕೆಂದು ದೂರು ದಾಖಲಿಸಿದ್ದರು.

ಮಾಹಿತಿ ಕಲೆ ಹಾಕಿದ ಪೊಲೀಸರು ಅನುಮಾನದಿಂದ ಪಟ್ಟಣದ ಕೊನೆಪೇಟೆಯ ನಿವಾಸಿ ಮಹಮ್ಮದ್ ಆಸೀಫ್ ಬಸ್ ಅಬ್ಬಾಸ್ ಎಂಬಾತನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದಲ್ಲಿ ಮನೆ ಕಳ್ಳತನ ಮಾಡಿದ್ದ -ಇತನು ಕಳವು ಮಾಡಿದ್ದ ಒಟ್ಟು ಕೊ8,000 ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ 5000 ಸಾವಿರ ಮೌಲ್ಯದ ರೋಲ್ಸ್-ಗೋಲ್ಡ್ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ಮೋಹನ ರೆಡ್ಡಿ ತಿಳಿಸಿದ್ದಾರೆ.

ವೃತ ನಿರೀಕ್ಷಕ ಮೋಹನ್ ರೆಡ್ಡಿ ಮಾತನಾಡಿ, ಮನೆ ಕಳ್ಳತನದ ಆರೋಪಿ ಮಹಮ್ಮದ್ ಆಸಿಫ್ ಬಿನ್ ಅಬ್ಬಾಸ್ mg ಒಪ್ಪಿಸಲಾಗಿದೆ. ಆತನಿಂದ ಕಳವಾಗಿದ್ದ ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಫಿರ್ಯಾದಿ ರಿಜ್ವಾನ್ ನ್ಯಾಯಾಲಯದಿಂದ ಅನುಮತಿ ತಂದ ನಂತರ ಅವರಿಗೆ ಹಸ್ತಾಂತರ ಮಾಡಲಾಗುವುದು ಎಂದರು.
ಈ ಕಾರ್ಯಾಚರಣೆಯಲ್ಲಿ ಆಲೂರು ಪೊಲೀಸ್ ಸಿಬ್ಬಂದಿಗಳಾದ ಅನಂತ್. ಕಾಂತರಾಜ್. ಪೂರ್ಣೇಂದ್ರ. ಹರೀಶ್. ನಾಗೇಶ್. ಹರೀಶ್. ಅಶೋಕ್. ಈ ಕಾರ್ಯಚರಣೆಯಲ್ಲಿ ಇದ್ದರು.

WhatsApp Image 2025-06-21 at 19.57.59
Trending Now