September 9, 2025
sathvikanudi - ch tech giant

ಪಿಡಿಓ ಹನುಮಂತರಾಜು ಜೂನ್ 21ರಂದು ಅಮಾನತು ….

Spread the love

ತುಮಕೂರು

ಪಾವಗಡ ತಾಲೂಕಿನ ರಾಪ್ಟೆ ಗ್ರಾಮ ಪಂಚಾಯತಿಯ ಪಿಡಿಓ ಹನುಮಂತರಾಜು ಅವರನ್ನು ಜಿಲ್ಲಾ ಪಂಚಾಯಿತಿ ಸಿ.ಇ.ಒ. ಜಿ.ಪ್ರಭು ರವರು ಜೂನ್ 21ರಂದು ಅಮಾನತು ಮಾಡಿ ಆದೇಶಿಸಿದ್ದಾರೆ. ಈ ಕ್ರಮಕ್ಕೆ ಹಲವಾರು ಕಾರಣಗಳು ಸೇರಿವೆ:

1. ಜಯಂತಿಗಳಿಗೆ ಗೈರುಹಾಜರಿ ಹನುಮಂತರಾಜು ಅವರು ಸರ್ಕಾರದ ವಿವಿಧ ಜಯಂತಿಗಳಲ್ಲಿ ಭಾಗವಹಿಸುವಲ್ಲಿ ವಿಫಲರಾಗಿದ್ದಾರೆ.


2. ಸಾರ್ವಜನಿಕರ ಫೋನ್‌ಗಳನ್ನು ಸ್ವೀಕರಿಸದಿರುವುದು. ಸಾರ್ವಜನಿಕರ ಕರೆಗಳಿಗೆ ಪ್ರತಿಕ್ರಿಯೆ ನೀಡದಿರುವುದು ಮತ್ತು ಅವರು ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸದಿರುವುದು.


3. ನರೇಗ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ವೇತನ ನೀಡದಿರುವುದು.ನರೇಗ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಅವರ ವೇತನವನ್ನು ಸಮಯಕ್ಕೆ ಸರಿಯಾಗಿ ನೀಡದಿರುವುದು.


4. ಹಣಕ್ಕಾಗಿ ಬೇಡಿಕೆ ಇಡುವುದು ಖಾತೆಗಳಿಗೆ ಹಣಕ್ಕಾಗಿ ಸಾರ್ವಜನಿಕರಿಂದ ಬೇಡಿಕೆ ಇಡುವುದು.


5. ಹೆಚ್ಚುವರಿ ಕ್ರಿಯಾಯೋಜನೆ ತಯಾರಿಸಿರುವುದು.ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರ ಅನುಮತಿ ಪಡೆಯದೆ ಹೆಚ್ಚುವರಿಯಾಗಿ ಕ್ರಿಯಾಯೋಜನೆ ತಯಾರಿಸಿರುವುದು.



ಇವು ಸೇರಿದಂತೆ ಇನ್ನೂ ಕೆಲವು ಪ್ರಮುಖ ಅಂಶಗಳ ಆಧಾರದ ಮೇಲೆ ಪಾವಗಡ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಜಾನಕಿ ರಾಮ ರವರ ಶಿಫಾರಸ್ಸಿನ ಮೇರೆಗೆ ಹನುಮಂತರಾಜು ಅವರನ್ನು  ಅಮಾನತ್ತು ಆದೇಶ ಹೊರಡಿಸಿದ್ದಾರೆ!?

WhatsApp Image 2025-06-21 at 19.57.59
Trending Now