September 10, 2025
sathvikanudi - ch tech giant

ಅರಸೀಕೆರೆಯಲ್ಲಿ ಉಪ್ಪಾರ್ ಸಮಾಜದ ವಿದ್ಯಾರ್ಥಿಗಳಿಗೆ ಭಗವದ್ಗೀತಾ ಮತ್ತು ಪ್ರತಿಭಾ ಪುರಸ್ಕಾರ ವಿತರಣೆ!?

Spread the love





ಅರಸೀಕೆರೆ:
ಪರಮಪೂಜ್ಯ ಶ್ರೀ ಭಾರ್ಗವ ನಂದಗಿರಿ ಸ್ವಾಮೀಜಿಗಳ ಆಶೀರ್ವಾದಗಳೊಂದಿಗೆ ಹಾಗೂ ಆತ್ಮೀಯ ಅಣ್ಣ ಜಿಕೆ ಗಿರೀಶ್ ಉಪ್ಪಾರ್ ರವರು (ಮಾಜಿ ಉಪ್ಪಾರ್ ಅಭಿವೃದ್ಧಿ ನಿಗಮ ಅಧ್ಯಕ್ಷರು) ಅವರ ಮಾರ್ಗದರ್ಶನದಲ್ಲಿ, ಅರಸೀಕೆರೆ ವಿಧಾನಸಭಾ ಕ್ಷೇತ್ರದ ಉಪ್ಪಾರ್ ಸಮಾಜದ ವತಿಯಿಂದ ಶೈಕ್ಷಣಿಕ ಸಾಧಕರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ, ಸಮಾಜದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 80% ಕ್ಕಿಂತ ಅಧಿಕ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಭಗವದ್ಗೀತಾ” ಗ್ರಂಥ ಮತ್ತು “ರಾಜಶ್ರೀ ಭಗೀರಥ ಮಹರ್ಷಿ” ಎಂಬ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಧನ್ಯವಾದ ಹೇಳಿ, ಮುಂದಿನ ಜೀವನಕ್ಕೂ ಪ್ರೇರಣೆ ನೀಡುವ ರೀತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಯಿತು.

ಈ ಮಹತ್ವದ ಕಾರ್ಯಕ್ರಮದ ನೇತೃತ್ವವನ್ನು ಸೂರ್ಯ ಜಿ ಕಾಳೇನಹಳ್ಳಿ ಅವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಹರಾದ ಕುಮಾರ್ ಅವರು ವಹಿಸಿಕೊಂಡಿದ್ದರು. ಈ ವೇಳೆ ಪ್ರಮುಖರಾದ ಚನ್ನ ಬಸಪ್ಪ, ರಂಗಸ್ವಾಮಿ, ಗಂಗಾಧರಪ್ಪ, ನಾಗಪ್ಪ, ಗೋವಿಂದಸ್ವಾಮಿ (ಜಿಲ್ಲಾಧ್ಯಕ್ಷರು, ಹಾಸನ), ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ್, ಬೆಟ್ಟದಪುರದ ಮುಖಂಡರಾದ ಮಂಜು, ಲೋಕೇಶ್ ಹಾಸನ, ಮಂಜು ಕೊಣನೂರು, ಮಧು, ಸಂತೋಷ್, ಶಿವು ಹಾಗೂ ಹಲವಾರು ಗ್ರಾಮದ ಮುಖಂಡರು, ಸಮಾಜ ಬಾಂಧವರು, ಸ್ನೇಹಿತರು ಉಪಸ್ಥಿತರಿದ್ದರು.

ವರದಿ:✍🏻 ಉಮೇಶ್ ಜಿಕೆ ಅರಸೀಕೆರೆ.

WhatsApp Image 2025-06-21 at 19.57.59
Trending Now