September 9, 2025
sathvikanudi - ch tech giant

ತುರುವೇಕೆರೆ ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಶಾಖೆ ಉದ್ಘಾಟನೆ, ತಾ.ಅಧ್ಯಕ್ಷರಾಗಿ ರಂಗರಾಜ್ ಆಯ್ಕೆ.!?

Spread the love



ತುರುವೇಕೆರೆ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಿಪಟೂರು ಅಂಬೇಡ್ಕರ್ ಸೇವಾ ಸಮಿತಿ ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ, ತಾಲೂಕು ವಿಭಾಗಿಯ ಅಧ್ಯಕ್ಷ ರಾಘವೇಂದ್ರ, ನಗರ ಅಧ್ಯಕ್ಷ ರಮೇಶ್ ಮಾರನಗೆರೆ ಮತ್ತು ನೂತನ ಪದಾಧಿಕಾರಿಗಳ  ಉಪಸ್ಥಿತಿಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ತಾಲೂಕಿನ ಶಾಖೆಯನ್ನು ಉದ್ಘಾಟಿಸಿದರು,
ಇದೆ ವೇಳೆ ತುರುವೇಕೆರೆ ತಾಲೂಕು ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷರನ್ನಾಗಿ ರಂಗರಾಜ್ ಅವರನ್ನು ಆಯ್ಕೆ ಮಾಡಲಾಯಿತು, ಬಳಿಕ ತಿಪಟೂರು ತಾಲೂಕು ಅಧ್ಯಕ್ಷರಾದ ಶಿವಕುಮಾರ್ ಮತಿಘಟ್ಟ ಮಾತನಾಡಿ, ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಇಂದಿನ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಹಗಲಿರುಳು ಇರಲು ಶ್ರಮಿಸಬೇಕು ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಸುಧಾರಣೆ ತರಲು ಸಾಧ್ಯ ಗ್ರಾಮೀಣ ಭಾಗಕ್ಕೆ ಸರಕಾರ ನೀಡುವ ಯೋಜನೆಗಳು ಸರಿಯಾಗಿ ದೊರಕುತ್ತಿದೆಯೇ ಎಂಬುದನ್ನ ತಿಳಿದುಕೊಂಡು ಅಂತಹ ಗ್ರಾಮಗಳಿಗೆ ಬೇಕಾದಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ದೊರಕಿಸುವಂತಹ ಕೆಲಸ ಮಾಡಬೇಕು ತಾಲೂಕಿನಾದ್ಯಂತ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಾಲೂಕಿನಲ್ಲಿರುವ ಕಟ್ಟ ಕಡೆಯ ಗ್ರಾಮಗಳಿಗೂ ಭೇಟಿಕೊಟ್ಟು ಪ್ರತಿಯೊಂದು ಗ್ರಾಮಗಳಲ್ಲಿ ಗ್ರಾಮ ಶಾಖೆ ಮತ್ತು ಹೋಬಳಿ ಮಟ್ಟದ ಶಾಖೆಗಳನ್ನು ತೆರೆದು ಸರ್ಕಾರದ ಯೋಜನೆಗಳು ಪ್ರತಿಯೊಂದು ಗ್ರಾಮಕ್ಕೆ ತಲುಪುವಂತೆ ಹೋರಾಟ ಮಾಡಬೇಕು ಎಂದರು.



ತಿಪಟೂರು ತಾಲೂಕು ವಿಭಾಗೀಯ ಅಧ್ಯಕ್ಷ ರಾಘವೇಂದ್ರ ಯಗಚಿಕಟ್ಟೆ ಮಾತನಾಡಿ, ನಮ್ಮ ಹೋರಾಟ ಪಾರದರ್ಶಕವಾಗಿರಬೇಕು ನಾವೆಲ್ಲ ಜಾತ್ಯಾತೀತವಾಗಿ ಇರಬೇಕು ಜೊತೆಗೆ ತಾಲೂಕಿನ ಅತ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಹಾಗಾಗಿ ನಮ್ಮ ಹಕ್ಕಿಗಾಗಿ ನಮ್ಮ ಹೋರಾಟವನ್ನು ಮಾಡಲೇಬೇಕು ಇದಲ್ಲದೆ ಯಾರು ಕೂಡ ಸಂಘಟನೆಯವರು ಕಾನೂನು ಉಲ್ಲಂಘನೆ ಮಾಡಬಾರದು ನೊಂದವರ ಧ್ವನಿಯಾಗಿ ನೊಂದವರ ಕಣ್ಣೀರು ಒರೆಸುವಂತಿರಬೇಕು ಯಾವುದೇ ಹೋರಾಟಕ್ಕೆ ಮುಂದಾದರೆ ವಿವರವಾಗಿ ಸಂಬಂಧಪಟ್ಟ ದಾಖಲಾತಿಯನ್ನು ಪಡೆದು ನೇರವಾಗಿ ಹೋರಾಟ ಮಾಡಿ ನಿಮ್ಮೊಂದಿಗೆ ನಾವಿರುತ್ತೇವೆ ತಾಲೂಕು ಸಂಘಟನೆ ತಾಲೂಕಿನಲ್ಲಿ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯದ  ವಿರುದ್ಧ ಉಗ್ರವಾದ ಹೋರಾಟಕ್ಕೆ ನಿಂತು ನ್ಯಾಯ ಸಿಗುವಲ್ಲಿ ಯಶಸ್ವಿಯಾಗಬೇಕು ಕೇವಲ ಕಾಟಾಚಾರಕ್ಕೆ ಅಥವಾ ಸಂಘಟನೆಯ ಐಡಿ ಕಾರ್ಡ್ ಗಳಿಗೆ ಆಸೆ ಬಿದ್ದು ಕ್ಷಣಕ್ಕೆ ಮಾತ್ರ ಸಂಘಟನೆಗೆ ಸೇರುವ ಯೋಚನೆ ಎಂದಿಗೂ ಮಾಡಬಾರದು ಈಗಾಗಲೇ ನಮ್ಮ ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಸಂದೇಶ್ ರವರ  ಹೋರಾಟಗಳು ಪಾರದರ್ಶಕವಾಗಿರುದರಿಂದ ಯಾವುದೇ ಗೊಂದಲ ಬೇಡ ಈ ಸಂಘಟನೆ ರಾಜ್ಯಾದ್ಯಂತ ಈಗಾಗಲೇ ತನ್ನದೇ ಆದ ಸ್ಥಾನ ಪಡೆದಿದೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬೇಡಿ  ಹೋರಾಟ ಮಾಡುವುದು ಬಹಳ ಮುಖ್ಯವಾಗಿದ್ದು ಹೋರಾಟದ ವಿಚಾರಗಳು ನಿಮ್ಮಗಳ ತಲೆಗೆ ಹೋಗಬೇಕು ಒಟ್ಟಾರೆ ನಮ್ಮ ಸಂಘಟನೆ ಜಾತ್ಯಾತೀತವಾಗಿ ಎಲ್ಲಾ ಸಮುದಾಯದವರೆಗೂ ನ್ಯಾಯ ದೊರಕಿಸಿ ಕೊಡುವಂತಹ ಹೋರಾಟವಾಗಿ ಹೊರಹೊಮ್ಮಬೇಕು ಎಂದರು.


ಇದೇ ಸಂದರ್ಭದಲ್ಲಿ ತಿಪಟೂರು ಶಾಖೆಯ ಅಶೋಕ್ ಬಳ್ಳೇಕೆರೆ, ಪ್ರಕಾಶ್ ಬಳ್ಳೇಕೆರೆ, ಮನು ಬಿ ಬೆಳಗೆರೆ,ತಾಲೂಕು, ಹೋಬಳಿ, ಗ್ರಾಮ ಶಾಖೆಗಳ, ಪದಾಧಿಕಾರಿಗಳಾದ, ತಾ. ಘಟಕದಲ್ಲಿ ಪದಾಧಿಕಾರಿಗಳಾದ ರವಿಕುಮಾರ್ ಉಪಾಧ್ಯಕ್ಷ, ಶ್ರೀನಿವಾಸ್ ಟಿ ಡಿ ಪ್ರಧಾನ ಕಾರ್ಯದರ್ಶಿ, ರವಿಕುಮಾರ್ ತಾಲೂಕು ಸಂಘಟನಾ ಅಧ್ಯಕ್ಷರುಗಳಾದ  ರವಿಕುಮಾರ್, ರಂಗನಾಥ್, ಲೋಕೇಶ್, ರಂಗನಾಥ್, ಲಕ್ಷ್ಮಯ್ಯ ಎಸ್ ಬಿ ಸೋಮೇನಹಳ್ಳಿ, ಹೋಬಳಿ ಮತ್ತು ಗ್ರಾಮದ ಮಹಿಳಾ ಘಟಕದ ಪದಾಧಿಕಾರಿಗಳಾದ ಹೇಮಲತಾ ಅಧ್ಯಕ್ಷರು, ವರಲಕ್ಷ್ಮಿ ಉಪಾಧ್ಯಕ್ಷರು, ಮಂಜುಳಾ ಕಾರ್ಯದರ್ಶಿ, ನಗರ ಘಟಕದ ಸಂಚಾಲಕ ಮತ್ತು ಕಾರ್ಯದರ್ಶಿಗಳಾದ, ಶ್ರೀನಿವಾಸ್ ಟಿ ಡಿ, ರವಿಕುಮಾರ್, ಸದಸ್ಯರುಗಳಾದ ರಂಗಸ್ವಾಮಿ, ಕುಮಾರಸ್ವಾಮಿ, ಕುಮಾರ್ ದೊಡ್ಡೆನಹಳ್ಳಿ, ಮಹೇಶ್ ಡಿ ಆರ್, ರವೀಶ್ ಡಿ ಆರ್, ಕೆಂಪರಾಜು, ಸಂಜು, ಪ್ರಸನ್ನ, ಲೋಕೇಶ್ ಹುಳಿಸಂದ್ರ ಇನ್ನು ಹಲವರು ಇದ್ದರು.

ವರದಿ: ✍🏻 ಮಂಜುನಾಥ್ ಕೆ ಎ ತುರುವೇಕೆರೆ.ತುಮಕೂರು ಜಿಲ್ಲೆ

WhatsApp Image 2025-06-21 at 19.57.59
Trending Now