September 9, 2025
sathvikanudi - ch tech giant

ಘೋರ ರಸ್ತೆ ಅಪಘಾತ: ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಉರುಳಿ ಬೈಕ್, ಇಬ್ಬರ ದುರ್ಮರಣ!?

Spread the love




ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದಲ್ಲಿ ಭಾನುವಾರ ಭಯಾನಕ ರಸ್ತೆ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಬೈಕ್‌ ವಿಸಿ ನಾಲೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೃತಪಟ್ಟವರು ರಾಮಣ್ಣ (70) ಮತ್ತು ಭರತ್ (19) ಎಂಬವರಾಗಿ ಗುರುತಿಸಲಾಗಿದ್ದು, ಇಬ್ಬರೂ ಸ್ಥಳೀಯ ನಿವಾಸಿಗಳು ಎನ್ನಲಾಗಿದೆ. ಅಪಘಾತದ ಹೊತ್ತಿಗೆ ಈ ಇಬ್ಬರು ಬೈಕ್‌ನಲ್ಲಿ ಹೋಗುತ್ತಿದ್ದರು. ಅತಿವೇಗದ ಕಾರಣದಿಂದಾಗಿ ಚಾಲಕನಿಗೆ ನಿಯಂತ್ರಣ ತಪ್ಪಿ, ಬೈಕ್‌ ವಿಸಿ ನಾಲೆಯ ತಡೆಗೋಡೆಗೆ ಡಿಕ್ಕಿ ಹೊಡೆದು ತೀವ್ರ ವೇಗದಲ್ಲಿ ಉರುಳಿ ನಾಲೆಗೆ ಬಿದ್ದಿದೆ.

ಘಟನೆಯ ನಂತರ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಲು ಯತ್ನಿಸಿದರು. ಆದರೆ ಇಬ್ಬರೂ ಘಟನಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದರು. ಘಟನೆ ನಡೆದ ತಕ್ಷಣವೇ ಮದ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ದುರಂತದಿಂದ ಗ್ರಾಮದವರೆಲ್ಲರೂ ಶೋಕಸಾಗರದಲ್ಲಿ ಮುಳುಗಿದ್ದಾರೆ. ಇಬ್ಬರೂ ಒಂದೇ ಕುಟುಂಬದವರು ಎಂಬುದು ತಿಳಿದು ಬಂದಿದೆ. ✍🏻✍🏻✍🏻

WhatsApp Image 2025-06-21 at 19.57.59
Trending Now