
ಕೊಪ್ಪಳ :
ಧರ್ಮಭಾವನೆ, ಶ್ರದ್ಧೆ ಮತ್ತು ಭಕ್ತಿಯ ದೀವಟಿಗೆ ಎಲ್ಲ ಧರ್ಮಗಳಲ್ಲಿ ಒಂದೇ ರೀತಿಯ ಪ್ರಕಾಶ ಹರಿಸುತ್ತವೆ ಎಂಬುದಕ್ಕೆ ಕೊಪ್ಪಳದ ಪವಿತ್ರ ಗವಿಸಿದ್ದೇಶ್ವರ ಮಠದಲ್ಲಿ ನಡಿದಿರುವ ಅಪೂರ್ವ ಘಟನೆ ಜೀವಂತ ಸಾಕ್ಷಿಯಾಗಿದೆ. ಹಿಂದು ಧಾರ್ಮಿಕ ಪೀಠವಾಗಿರುವ ಈ ಗವಿಮಠದಲ್ಲಿ, ಯಲಬುರ್ಗಾ ತಾಲೂಕಿನ ಕುದರಿ ಮೋತಿ ಗ್ರಾಮದ ಮುಸ್ಲಿಂ ಮಹಿಳೆಯೊಬ್ಬರು ದಿನಂಪ್ರತಿ ಧ್ಯಾನ ಮಾಡುತ್ತಿರುವುದು ಜನರಲ್ಲಿ ಆಶ್ಚರ್ಯ ಹಾಗೂ ಧರ್ಮಸಾಮರಸ್ಯದ ಚರ್ಚೆಗೆ ಕಾರಣವಾಗಿದೆ.

ಹಸೀನಾ ಬೇಗಂ ಎಂಬ ಮಹಿಳೆ ಕಳೆದ ಎಂಟು ದಿನಗಳಿಂದ ಗವಿಮಠಕ್ಕೆ ಭೇಟಿ ನೀಡುತ್ತಾ, ನಾಗದೇವರ ಸನ್ನಿಧಾನದಲ್ಲಿ ಧ್ಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. “ನಾನು ಮುಸ್ಲಿಂ ಆಗಿದ್ದರೂ ಎಲ್ಲ ಧರ್ಮ ಒಂದೇ. ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡುತ್ತಿದ್ದೇನೆ,” ಎಂದು ಅವರು , ಧರ್ಮದ ಮೌಲ್ಯವನ್ನು ಮಾನವೀಯತೆಯ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತವೆ.
ಗವಿಮಠವು ವೀರಶೈವ ಪಂಥದ ಅತ್ಯಂತ ಪವಿತ್ರ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದ್ದು, ಭಕ್ತರ ನಂಬಿಕೆ, ಪವಾಡಗಳ ಕತೆಗಳು, ಧಾರ್ಮಿಕ ಆಚರಣೆಗಳಿಂದ ಮುಗಿದ ಮಠದಲ್ಲಿ ಇಂಥ ಒಂದು ಸೌಹಾರ್ದ ಪೂರ್ಣ ಚಿತ್ರಣ ಕಂಡುಬಂದಿರುವುದು ಭಕ್ತಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಧರ್ಮ ಮಾತ್ರ ವೇಷವಲ್ಲ, ಅದು ಮನಸ್ಸಿನ ಶುದ್ಧತೆಯೆಂಬ ತಾತ್ವಿಕ ನಿಲುವಿಗೆ ಹಸೀನಾ ಬೇಗಂ ನಡಿಗೆಯು ಮೌಲ್ಯಯುತ ಬೆಳಕು ಹರಡುತ್ತಿದೆ.
ಇಂಥ ಅಪರೂಪದ ದೃಶ್ಯಗಳು ಧರ್ಮೀಯ ಸಹಬಾಳ್ವೆ, ಭಾವೈಕ್ಯತೆ ಮತ್ತು ಮಾನವೀಯ ಮೌಲ್ಯಗಳ ಗಂಭೀರತೆಯನ್ನು ಪುನರುಚ್ಚಾರ ಮಾಡುತ್ತವೆ. ಇವತ್ತು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಭಿನ್ನತೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ಘಟನೆ ಧರ್ಮಾತೀತ ನಂಬಿಕೆಯ ಮಾದರಿಯಾಗಿದೆ. ✍🏻