September 9, 2025
sathvikanudi - ch tech giant

ಕ್ಯಾಂಪಸ್ ಸೆಲೆಕ್ಷನ್ ಆಗದಿದ್ದಕ್ಕೆ ಮಾಲ್ ನಲ್ಲಿ ಯುವಕ ಆತ್ಮಹತ್ಯೆ!?

Spread the love

ಮೈಕೋ ಲೇಔಟ್‌ನಲ್ಲಿರುವ ವೆಗಾಸಿಟಿ ಮಾಲ್‌ನಲ್ಲಿ ಬಿಕಾಂ ಪದವೀಧರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಸುಹಾಸ್‌ ಅಡಿಗ (21) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೀಡಾದ ಯುವಕನು ಕ್ಯಾಂಪಸ್ ಸೆಲೆಕ್ಷನ್‌ ಆಗದ ಕಾರಣದಿಂದ ಬೇಸತ್ತುಕೊಂಡು ಈ ತೀರ್ಮಾನಕ್ಕೆ ಬಂದಿರಬಹುದೆಂದು ಶಂಕಿಸಲಾಗಿದೆ.

ಮಧ್ಯಾಹ್ನ 2.30ರ ಸಮಯದಲ್ಲಿ ವೆಗಾಸಿಟಿ ಮಾಲ್‌ಗೆ ಪ್ರವೇಶಿಸಿದ ಸುಹಾಸ್‌, 4ನೇ ಮಹಡಿಗೆ ಹೋಗಿ, ಜನರು ನೋಡುತ್ತಲೇ ಕೆಳಗೆ ಹಾರಿದ್ದಾರೆ. ತಲೆಗೆ ಗಂಭೀರ ಪೆಟ್ಟಾಗಿರುವುದರಿಂದ ಅವರು ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಮಾಲ್‌ನಲ್ಲಿ ನೆರೆದಿದೆ ಜನರಿಗೆ ಆಘಾತವನ್ನುಂಟುಮಾಡಿದೆ. ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯುವಕರು ಬಾಳಿನ ಸವಾಲುಗಳನ್ನು ಎದುರಿಸುತ್ತಾ ದುರ್ಬಲ ಕ್ಷಣಗಳಲ್ಲಿ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಮನವಿ ಮಾಡಲಾಗಿದೆ.

WhatsApp Image 2025-06-21 at 19.57.59
Trending Now