
ತುಮಕೂರು:
ತುರುವೇಕೆರೆ: ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕಕ್ಕೆ ವಿಶೇಷ ಸ್ಥಾನವಿದೆ ಎಂದು ಮಾಜಿ ಜಿ.ಪಂ. ಸದಸ್ಯ ಹಾಗೂ ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರ ಸಂಘದ ಅಧ್ಯಕ್ಷರಾದ ಎನ್.ಆರ್. ಜಯರಾಮ್ ಹೇಳಿದರು.
ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿನ ಕನ್ನಡ ಭವನದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕದ ವತಿಯಿಂದ 2024- 25 ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಕನ್ನಡ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪಾಕ್ಷಿಕ “ದಾಸ ಸಾಹಿತ್ಯ” ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾಯಸಂದ್ರ ಹೋಬಳಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕನ್ನಡ ಸಾಹಿತ್ಯ ಪರಿಷತ್ ಘಟಕವು ವಿಶಿಷ್ಟವಾದ ಅರ್ಥಪೂರ್ಣ ಕಾರ್ಯಗಳನ್ನು ನೀಡುತ್ತಿದೆ
ಮುಂದೆಯು ಸಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ನಾಡು, ನುಡಿ, ಸಾಹಿತ್ಯ , ಕುರಿತಾಗಿ ಉತ್ತಮ ಕಾರ್ಯಕ್ರಮಗಳನ್ನು ಒಟ್ಟಾಗಿ ಆಚರಿಸೋಣ ಎಂದು ವಿದ್ಯಾರ್ಥಿಗಳಿಗೆ ಮತ್ತು ತಮ್ಮ ಪೋಷಕರಿಗೆ ಶುಭ ಹಾರೈಸಿದರು.
ಕ.ಸಾ.ಪ. ತಾಲೂಕು ಅಧ್ಯಕ್ಷರಾದ ಡಿ.ಪಿ. ರಾಜು ರವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ತಾಲೂಕು ಘಟಕವು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈಗಾಗಲೇ ಮಾಯಸಂದ್ರ ಹೋಬಳಿ ಘಟಕವು ಹಲವಾರು ವರ್ಷಗಳಿಂದ ಉತ್ತಮ ಕಾರ್ಯಗಳನ್ನು ಮಾಡುವ ಹೆಮ್ಮೆ ಪಡುವಂತಹ ಘಟಕವಾಗಿದೆ. ಮತ್ತು ತನ್ನದೇ ಆದ ವಿಶೇಷ ಸ್ಥಾನಮಾನವಿರುವ ಘಟಕವಾಗಿದೆ ಎಂದರು ಅಲ್ಲದೆ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿಗಳ ಶಿಕ್ಷಕರಿಗೆ, ವಿಶೇಷವಾಗಿ ಅಭಿನಂದಿಸಿದರು.
ನಿವೃತ್ತ ಶಿಕ್ಷಕರಾದ ಎಂ.ಕೆ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮುಂದಿನ ಜೀವನದಲ್ಲಿ ಕನ್ನಡ ಸಾಹಿತ್ಯಕ್ಕೂ ಸಹ ಒತ್ತು ನೀಡಬೇಕೆಂದು ಸಲಹೆ ನೀಡಿದರು ಮತ್ತು ದಾಸ ಸಾಹಿತ್ಯವನ್ನು ಕುರಿತು ಸುಧೀರ್ಘವಾಗಿ ಉಪನ್ಯಾಸವನ್ನು ನೀಡಿದರು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಅರಿವನ್ನು ಮೂಡಿಸಿದರು.
ಕ.ಸಾ.ಪ. ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷರಾದ ಮುನಿರಾಜು ಮಾತನಾಡಿ, ಕನ್ನಡ ನಾಡು, ನುಡಿ, ಭಾಷೆ ಹಾಗೂ ಹೋಬಳಿ ಘಟಕದ ಎಲ್ಲಾ ಸದಸ್ಯರು ಪದಾಧಿಕಾರಿಗಳು ನಿರಂತರವಾಗಿ ಕಾರ್ಯಗಳನ್ನು, ಸೇವೆಯನ್ನು ಸಲ್ಲಿಸುತ್ತಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಎಸ್ ಎಸ್ ಎಲ್ ಸಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅರ್ಥಪೂರ್ಣ ಗೌರವವನ್ನು ಸಲ್ಲಿಸಲಾಗಿದೆ, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯ ಉತ್ತಮವಾಗಿರಲಿ, ಕನ್ನಡದ ಪ್ರೇಮಾಭಿಮಾನ ಸದಾ ಹೀಗೆ ಇರಲಿ ಎಂದು ಹಾರೈಸಿದರು.
ಕ.ಸಾ.ಪ. ಮಾಯಸಂದ್ರ ಹೋಬಳಿ ಘಟಕ ವತಿಯಿಂದ, ಎಸ್ ಬಿಜಿ ಶಾಲೆಯ ವಿದ್ಯಾರ್ಥಿಗಳಾದ ಗುರು ಎ. ಹರ್ಷಿಣಿ ಸಿ. ಮಾನ್ಯ ಎನ್. ಬಾನವಿ ಕೆ. ವಿದ್ಯಾ ಎಜಿ. ಭಾನುಪ್ರಿಯ ಎ.ಎಸ್. ಸಾನಿಕ ಕೆ ಪಿ. ಯಶಸ್ವಿನಿ.ಕಾರ್ತಿಕ್ ಎಚ್ ಡಿ. ಅಮೂಲ್ಯ. ಹರ್ಷಿತಾ. ಘನಶ್ರೀ, ಪೋಷಕರಾದ ಶ್ರೀಮತಿ ಲತಾ, ಮುಗಳೂರು ಸರ್ಕಾರಿ ಪ್ರೌಢಶಾಲೆಯ ಗಜಾನನ ಪಿ. ಮತ್ತು ರಾಮಕೃಷ್ಣ ಮಠ ಬದರಿಕಾಶ್ರಮ ವಿದ್ಯಾ ಶಾಲೆಯ ದೀಕ್ಷಾ ಕೆ.ಎಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ವೇಳೆ ಕನ್ನಡದ ಹಿರಿಯ ನಟಿ ದಿ|| ಬಿ ಸರೋಜಾದೇವಿ ರವರು ನಿಧನಗೊಂಡ ಹಿನ್ನೆಲೆಯಲ್ಲಿ ಕ.ಸಾ.ಪ ಮಾಯಸಂದ್ರ ಹೋಬಳಿ ಘಟಕದ ವತಿಯಿಂದ ಮೌನಚರಣೆಯ ಮೂಲಕ ಸಂತಾನ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕ.ಸಾ.ಪ. ಗೌರವಾಧ್ಯಕ್ಷರಾದ ಬೋರೇಗೌಡ. ಕಾರ್ಯದರ್ಶಿ ದಿನೇಶ್.ಕ.ಸಾ.ಪ. ಮಾಯಸಂದ್ರ ಹೋಬಳಿ ನಿಕಟ ಪೂರ್ವ ಅಧ್ಯಕ್ಷರಾದ ಪಿಎನ್ ಜವರೇಗೌಡರು. ಪಿ ಹನುಮಂತಯ್ಯ. ಶ್ರೀಧರ ಮೂರ್ತಿ.ಕಾರ್ಯದರ್ಶಿ ಸಿಪಿ ಪ್ರಕಾಶ್. ಗೌರವಾಧ್ಯಕ್ಷ ಎಂಎಸ್ ಶಿವರಾಂ. ನಿಕಟ ಪೂರ್ವ ಗೌರವಾಧ್ಯಕ್ಷ ಸಿಎನ್ ನಂಜುಂಡಪ್ಪ. ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಆನಂದ ಮದನ್ ಕುಮಾರ್. ಉಪಾಧ್ಯಕ್ಷರಾದ ಲೀಲಾವತಿ ಗಿಡ್ಡಯ್ಯ. ಸದಸ್ಯರುಗಳು, ದೈಹಿಕ ಶಿಕ್ಷಣ ಶಿಕ್ಷಕರಾದ ಗಿರಿಧರ್. ಶಿಕ್ಷಕರಾದ ಸಿದ್ದಲಿಂಗಯ್ಯ. ಅರುಂಧತಿ. ಸುಮಾ. ಲಲಿತಾ ಭಟ್. ಸೇರಿದಂತೆ ರಾಧಾಕೃಷ್ಣ.ಕ.ಸಾ.ಪ. ಮುಂತಾದ ಸದಸ್ಯರುಗಳು, ಸೌರಭ ಕಾನ್ವೆಂಟ್ ವಿದ್ಯಾರ್ಥಿಗಳು ಮುಂತಾದವರಿದ್ದರು.
ವರದಿ :✍🏻 ಮಂಜುನಾಥ್ ತುರುವೇಕೆರೆ