
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರೆನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಹೀಗಾಗಿ, ಹಾಸನದಿಂದ ಮಂಗಳೂರಿಗೆ ಹೊರಡುವ ವಾಹನಗಳು ಬೇಲೂರು ಮೂಲಕ ಚಾರ್ಮುಡಿ ಘಾಟ್ ಮೂಲಕ ಸಂಚರಿಸಬೇಕೆಂದು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಆದೇಶಿಸಿದ್ದಾರೆ.
ಅದೇ ರೀತಿ ಮಂಗಳೂರಿನಿಂದ ಬರುವ ವಾಹನಗಳೂ ಸಂಪಾಜೆ ಮತ್ತು ಚಾರ್ಮುಡಿ ಘಾಟ್ ಮಾರ್ಗವಾಗಿ ಸಾಗಬೇಕು ಎಂದು ಅವರು ತಿಳಿಸಿದ್ದಾರೆ. ಭದ್ರತೆ ಹಾಗೂ ಜನಸಾರಿಗೆ ಸುಗಮತೆ ದೃಷ್ಟಿಯಿಂದ ಈ ತಾತ್ಕಾಲಿಕ ಮಾರ್ಗಸೂಚಿ ಜಾರಿಗೆ ಬಂದಿದೆ.