September 9, 2025
sathvikanudi - ch tech giant

ಕರ್ತವ್ಯದ ಮೊದಲ ದಿನವೇ ಸಾವಿಗೀಡಾದ ಯುವ ಐಪಿಎಸ್ ಅಧಿಕಾರಿ..!?

Spread the love



ಹಾಸನ:

ತಮ್ಮ ಪರಿಶ್ರಮದಿಂದ ಐಪಿಎಸ್ ಹುದ್ದೆಯನ್ನು ಸಾಧಿಸಿದ್ದ 25 ವರ್ಷದ ಯುವ ಅಧಿಕಾರಿ ಹರ್ಷವರ್ಧನ್ ಅವರ ಜೀವನವು ವಿಧಿಯಾಟಕ್ಕೆ ಬಲಿಯಾಯಿತು. ಸೋಮವಾರ ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪ್ರೊಬೇಷನರಿ ಐಪಿಎಸ್ ಅಧಿಕಾರಿ, ಮೈಸೂರಿನಿಂದ ಹಾಸನಕ್ಕೆ ಜೀಪ್ ಮೂಲಕ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ, ಕಿತ್ತಾನೆ ಬಳಿ ಜೀಪ್‌ ಟೈರ್ ಸ್ಫೋಟಗೊಂಡು ಅಪಘಾತಕ್ಕೀಡಾಯಿತು.



ಅಪಘಾತದಲ್ಲಿ ಜೀಪ್‌ ಮೂರು ಸುತ್ತು ಉರುಳಿದ ಪರಿಣಾಮ ಹರ್ಷವರ್ಧನ್ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಪೆಟ್ಟುಬಿತ್ತು. ಜೀಪ್‌ ಚಾಲಕ ಮಂಜೇಗೌಡರಿಗೂ ಗಾಯಗಳಾಗಿದ್ದು, ಇಬ್ಬರನ್ನೂ ತಕ್ಷಣವೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಬೆಂಗಳೂರಿಗೆ ಕರೆದೊಯ್ಯುವ ಯೋಜನೆ ಮಾಡಿದರು. ಆದರೆ ವೈದ್ಯರ ನಿರಂತರ ಪ್ರಯತ್ನವೂ ಅವರಿಗೆ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ.

ಘಟನೆಯ ಬಳಿಕ ದಕ್ಷಿಣ ವಲಯ ಐಜಿ ಡಾ. ಬೋರಲಿಂಗಯ್ಯ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಕೃತಕ ಉಸಿರಾಟದ ನೆರವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷವರ್ಧನ್ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದರು. ಕರ್ತವ್ಯದ ಮೊದಲ ದಿನವೇ ಪ್ರಾಣ ತ್ಯಜಿಸಿದ ಈ ಘಟನೆ ಅಧಿಕಾರ ವಲಯದಲ್ಲಿ ಶೋಕನೀಡಿಸಿದೆ.

WhatsApp Image 2025-06-21 at 19.57.59
Trending Now