September 9, 2025
sathvikanudi - ch tech giant

ಕೊಪ್ಪಳ ಜಿಲ್ಲೆಯಲ್ಲಿ SCP ಅನುದಾನ ಹೆಚ್ಚಿಸಿ 100 ವಿದ್ಯಾರ್ಥಿಗಳಿಗೆ ಪ್ರಶಿಷ್ಠ ಶಾಲೆಗಳಲ್ಲಿ ಅವಕಾಶ ನೀಡಿ – ಆಯುಕ್ತರಿಗೆ ವೀರೇಶ ವಕೀಲ ಹಾಗೂ ಮಾರ್ಕಂಡೆಪ್ಪ ಬೆಲ್ಲದ್ ಮನವಿ!?

Spread the love



ದಿನಾಂಕ 23/07/2025 ರಂದು ವೀರೇಶ ವಕೀಲರು (ಈಳಿಗನೂರು ತಾ. ಕಾರಟಗಿ) – ಸದಸ್ಯರು, ಕೊಪ್ಪಳ ಜಿಲ್ಲಾ ಉಪ ವಿಭಾಗ ಮಟ್ಟದ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ದೌರ್ಜನ್ಯ ನಿಯಂತ್ರಣ ಹಾಗೂ ಉಸ್ತುವಾರಿ ಸಮಿತಿ ಹಾಗೂ ಮಾರ್ಕಂಡೆಪ್ಪ ಬೆಲ್ಲದ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಂಬೇಡ್ಕರ್ ವಾದ – ಕೊಪ್ಪಳ ಜಿಲ್ಲೆ) ರವರು, ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಆಯುಕ್ತರನ್ನು ಭೇಟಿಯಾಗಿ, ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಬಗೆಗೆ ಮಹತ್ವದ ಮನವಿಯನ್ನು ಸಲ್ಲಿಸಿದರು.

ಪ್ರಸ್ತುತ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು SCP (Scheduled Caste Sub Plan) ಅನುದಾನದ ಅಡಿಯಲ್ಲಿ ಪ್ರತಿವರ್ಷ ಜಿಲ್ಲೆಯ 100 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಆ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಬಡ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆಯಾದ ಕೇವಲ 35 ರಿಂದ 40 ಸೀಟೆಗಳಷ್ಟೆ ಲಭಿಸುತ್ತಿರುವುದನ್ನು ಅವರು ಆಯುಕ್ತರ ಗಮನಕ್ಕೆ ತಂದರು. ಉಳಿದ ಸೀಟೆಗಳು ಇನ್ನಿತರೆ ವರ್ಗದ ವಿದ್ಯಾರ್ಥಿಗಳಿಗೆ ಹಂಚಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಯೋಜನೆಯ ಮೂಲ ಉದ್ದೇಶಕ್ಕೆ  ಬರುವಂತೆ ಜಾರಿಗೆ ಬಂದಿಲ್ಲ ಎಂಬುದು ಅವರ ಆಕ್ಷೇಪ.

ವೀರೇಶ ವಕೀಲ ಹಾಗೂ ಮಾರ್ಕಂಡೆಪ್ಪ ಬೆಲ್ಲದ್ ಅವರು SCP ಅನುದಾನವನ್ನು ಹೆಚ್ಚಿಸಿ, ಪರಿಶಿಷ್ಟ ಜಾತಿಗೆ ಕನಿಷ್ಠ 100 ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶದ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಶಿಕ್ಷಣವೇ ಸಮಾಜದ ಉನ್ನತಿಯ ಮೂಲ ಶಕ್ತಿಯಾಗಿರುವದರಿಂದ, ಸಮಾನ ಶಿಕ್ಷಣಾವಕಾಶ ಸೃಷ್ಟಿಸುವ ಈ ಹಂತದಲ್ಲಿ ಸರ್ಕಾರ ಹೆಚ್ಚು ಗಮನಹರಿಸಬೇಕೆಂದು ಅವರು ಮನವಿ ಮಾಡಿದರು.

ಅಲ್ಲದೆ, ಕೊಪ್ಪಳ ಜಿಲ್ಲೆಯ ಬಡ ಪರಿಶಿಷ್ಟ ಜಾತಿಯ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತು ಅವರು ರಾಜ್ಯದ ಪ್ರತಿಷ್ಠಿತ ಸ್ಪರ್ಧಾತ್ಮಕ ಹಂತಗಳಲ್ಲಿ ಮುನ್ನಡೆಯುವಂತಾಗಬೇಕು ಎಂಬ ದೃಷ್ಟಿಕೋನವನ್ನು ಆಯುಕ್ತರಿಗೆ ಸ್ಪಷ್ಟಪಡಿಸಿದರು. ಆಯುಕ್ತರು ಈ ಕುರಿತು ಸೂಕ್ತ ಅಧ್ಯಯನ ಮಾಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದು, ವಿದ್ಯಾರ್ಥಿಗಳ ಪಾಲಿಗೆ ಈ ಬೆಳವಣಿಗೆ ಆಶಾದಾಯಕವಾಗಿದೆ.✍🏻

ವರದಿ :ಶಶಿಧರ್ ಹೊಸಮನಿ ಕೊಪ್ಪಳ ಯಲಬುರ್ಗಾ.

WhatsApp Image 2025-06-21 at 19.57.59
Trending Now