September 9, 2025
sathvikanudi - ch tech giant

ಕಡವೆ ಬೇಟೆಗಾರರ ಎಡೆ ಮುರಿ ಕಟ್ಟಿದ ಅರಣ್ಯಧಿಕಾರಿಗಳು..!

Spread the love

ಶಿವಮೊಗ್ಗ :

ಭದ್ರಾವತಿ ಉಪ ವಲಯದ ಅರಣ್ಯ ಅಧಿಕಾರಿಗಳು ಕಡವೆ ಬೇಟೆಯಾದ ಪ್ರಕರಣವನ್ನು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಭದ್ರಾವತಿ ವಲಯದ ಅರಣ್ಯಾಧಿಕಾರಿ ದುಗ್ಗಪ್ಪ ಬಿ.ಹೆಚ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮಂಜುನಾಥ್ ಎಂಬ ಆರೋಪಿ ಸೆರೆಸಿಕ್ಕಿದ್ದಾನೆ.

ಈತನ ಜೊತೆ ಮತ್ತಷ್ಟು ಆರೋಪಿಗಳು ಜಗಳದ ಸ್ಥಳದಿಂದ ತಲೆಮರೆಸಿಕೊಂಡಿದ್ದಾರೆ, ಅವರನ್ನು ಪತ್ತೆಹಚ್ಚಲು ಅಧಿಕಾರಿಗಳು ಮುಂದಿನ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಪ್ರಕರಣವು ದಾನವಾಡಿ ಅರಣ್ಯದಲ್ಲಿ ನಡೆದಿದೆ ಎಂದು ತಿಳಿದುಬಂದಿದ್ದು, ಆರೋಪಿ ಮಂಜುನಾಥ್ ತನ್ನ ಸಂಗಡಿಗರೊಂದಿಗೆ ಅಲ್ಲಿ ಕಡವೆ ಬೇಟೆಯಲ್ಲಿ ನಿರತರಾಗಿದ್ದಾಗ ಅರಣ್ಯಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ . ಈ ದಾಳಿಯನ್ನು ಅಶಿಶ್ ರೆಡ್ಡಿ ಮತ್ತು ಶ್ರೀಮತಿ ರತ್ನಪ್ರಭ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿದೆ.

ಪ್ರಕರಣದ ತನಿಖೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಶೇಖರ್ ಎ.ಚೌಗುಲೆ, ಹನುಮಂತರಾಯ ಜಿ., ಚಂದ್ರಶೇಖರ್ ಸಿ., ಕಾಂತೇಶ್ ನಾಯ್ಕ, ಪ್ರತಾಪ್ ಕೆ.ವಿ. ಸೇರಿದಂತೆ ಗಸ್ತು ಅರಣ್ಯ ಪಾಲಕರು ಹಾಗೂ ದಿನಗೂಲಿ ನೌಕರರಾದ ಕೊಠಿ, ಅವಿನಾಶ ಮತ್ತು ಮಂಜು ಸಹಕರಿಸಿದ್ದಾರೆ.



WhatsApp Image 2025-06-21 at 19.57.59
Trending Now