September 9, 2025
sathvikanudi - ch tech giant

ತನ್ನ ಮಗಳನ್ನೇ ಲೈಂಗಿಕ ಕೃತ್ಯಕ್ಕೆ ಬಲಸಿ ಕೊಂಡ ಪಾಪಿ ತಂದೆ… ಮುನೀರ್..!?

Spread the love

ಮಂಡ್ಯ :

ಮಂಡ್ಯ ನಗರದ ಗುತ್ತಲು ಎಂಬಲ್ಲಿ ತನ್ನ ಅಪ್ರಾಪ್ತ ಮಗಳನ್ನೇ ಗರ್ಭಿಣಿ ಮಾಡಿದ ಮುನೀರ್ ಎಂಬಾತನ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಘಟನೆ ತಿಳಿದ ಸಾರ್ವಜನಿಕರು ಆತನನ್ನು ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ಮುನೀರ್ ತನ್ನ ಮಗಳನ್ನ ಗರ್ಭಿಣಿ ಮಾಡಿದ ಪಾಪಿ ಎಂದು ತಿಳಿದು ಬಂದಿದ್ದು, ಈ ಘಟನೆಯು ಜನರಲ್ಲಿ ಆಕ್ರೋಶವನ್ನು ಉಂಟುಮಾಡಿದೆ.

ಸುದ್ದಿಯ ತಿಳಿಯುತ್ತಿದ್ದಂತೆ, ಮಂಡ್ಯ ಈಸ್ಟ್ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ದೌಡಾಯಿಸಿದರು. ಸ್ಥಳ ಪರಿಶೀಲನೆ ನಡೆಸಿದ ನಂತರ, ಆರೋಪಿ ಮುನೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಈ ಪ್ರಕರಣದ ನಿಖರ ವಿವರಗಳನ್ನು ಸಂಗ್ರಹಿಸುತ್ತಿದ್ದು, ಸಂತ್ರಸ್ತೆ ಮತ್ತು ಆಕೆಯ ಕುಟುಂಬವನ್ನು ರಕ್ಷಣೆ ಮತ್ತು ಸಮರ್ಥನೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಈ ಘಟನೆ ಸಮಾಜದಲ್ಲಿ ತೀವ್ರ ಆಘಾತ ಮತ್ತು ಆಕ್ರೋಶವನ್ನುಂಟುಮಾಡಿದ್ದು, ಇಂತಹ ಘಟನೆಗಳು ನಡೆಯದಂತೆ ತಡೆಯಲು ಹೆಚ್ಚಿನ ಜಾಗ್ರತಿ ಮತ್ತು ಕಠಿಣ ಕಾನೂನು ಕ್ರಮಗಳು ಅಗತ್ಯವಿವೆ. ಮಗುವಿನ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಸಾಮಾಜಿಕ ಸಂಘಟನೆಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಮತ್ತು ಇಂತಹ ದುರಂತಗಳನ್ನು ತಡೆಯಲು ಸಮಾಜದಲ್ಲಿ ಅರಿವು ಮೂಡಿಸಲು ಮತ್ತು ಬಲವಾದ ಕಾನೂನು ಕ್ರಮಗಳನ್ನು ಜಾರಿಮಾಡಲು ಸರ್ಕಾರವು ಪ್ರಯತ್ನಿಸಬೇಕು.

WhatsApp Image 2025-06-21 at 19.57.59
Trending Now