September 9, 2025
sathvikanudi - ch tech giant

ಮದುವೆಯಾಗಲು ಹುಡುಗಿ ಸಿಗದ ಕಾರಣ ಮನನೊಂದ ಯುವಕ ಆತ್ಮಹತ್ಯೆ….!?

Spread the love

ಬೆಂಗಳೂರು ಉತ್ತರ ತಾಲ್ಲೂಕಿನ ನಾರಾಯಣಪ್ಪನ ಪಾಳ್ಯದಲ್ಲಿ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಬೇಸರದಿಂದ ಆಟೋ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತನನ್ನು ವೆಂಕಟೇಶ್ (27) ಎಂದು ಗುರುತಿಸಲಾಗಿದೆ.

ವೆಂಕಟೇಶ್, ಗೋವಿಂದರಾಜು ಮತ್ತು ಮಂಗಳಮ್ಮ ದಂಪತಿಗಳ ಪುತ್ರನಾಗಿದ್ದು, ತನ್ನ ದಪ್ಪ ಗಾತ್ರದ ಕಾರಣ ಮದುವೆಯಾಗಲು ಹುಡುಗಿಯರು ಒಪ್ಪುತ್ತಿಲ್ಲ ಎಂಬ ಕಾರಣದಿಂದ ಮಾನಸಿಕ ತೊಂದರೆ ಅನುಭವಿಸುತ್ತಿದ್ದನು. ನಿರಾಶೆಯಲ್ಲಿದ್ದ ವೆಂಕಟೇಶ್ ಇಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

WhatsApp Image 2025-06-21 at 19.57.59
Trending Now