
ತುಮಕೂರು ಜಿಲ್ಲೆ :
ಬೆಂಗಳೂರು 2024ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಪದಕಗಳನ್ನು ಈ ಬಾರಿ 197 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ನೀಡಲು ಸರ್ಕಾರವು ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಪದಕ ನಿಯಮಗಳೆಲ್ಲಾ ಪೂರೈಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಈ ಗೌರವ ಲಭಿಸಿದೆ.
ತುಮಕೂರು ಜಿಲ್ಲೆಯ ಬಿ.ಎಸ್. ಅಬ್ದುಲ್ ಖಾದರ್, ಶ್ರೀಮತಿ ದಾಕ್ಷಯಣಿ, ಮಲ್ಲೇಶಯ್ಯ, ಹನುಮಂತರಾಜು, ಮೋಹನ್ M.L, ಮತ್ತು ಮೊಹಮ್ಮದ್ ಕಲಂದರ್ ಅವರು ಈ ವರ್ಷದ ಮುಖ್ಯಮಂತ್ರಿ ಪದಕಕ್ಕಾಗಿ ಆಯ್ಕೆಯಾದಿದ್ದಾರೆ. ಪದಕ ವಿಜೇತರಿಗೆ ವಿಜಯ್ ಮುನಿಯಪ್ಪ, ಬೆಂಗಳೂರು ವಿಭಾಗೀಯ ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ, ಸಂಪಾದಕರು ಹಾಗೂ ವರದಿಗಾರರ ಸಂಘ, ಬೆಂಗಳೂರು ಇವರಿಂದ ವಿಶೇಷ ಅಭಿನಂದನೆಗಳು.
ಈ ಪುರಸ್ಕಾರವು ಪೊಲೀಸ್ ಇಲಾಖೆಯ ಪರಿಶ್ರಮ, ಸೇವಾ ಮನೋಭಾವ ಮತ್ತು ಸತ್ಯನಿಷ್ಠೆಯ ಪ್ರತೀಕವಾಗಿದೆ. ತಮ್ಮ ಶ್ರೇಷ್ಠ ಸೇವೆಗಾಗಿ ಈ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಈ ಗೌರವ ದೊರೆತಿದ್ದು, ಅವರು ಸಾಮಾಜಿಕ ಶ್ರೇಯಸ್ಸಿಗೆ ತಮ್ಮ ಸೇವೆಯನ್ನು ಮುಂದುವರಿಸಬೇಕೆಂಬ ಆಶಯವನ್ನು ಗಣ್ಯರು ವ್ಯಕ್ತಪಡಿಸಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಈ ರೀತಿಯ ಗೌರವವು ಸತ್ಯನಿಷ್ಠೆಯ ಸಂಕೇತವಾಗಿದ್ದು, ಇದು ಇತರರಿಗೆ ಪ್ರೇರಣೆಯಾಗುತ್ತದೆ.
ಪೊಲೀಸ್ ಇಲಾಖೆಯ ಸಮಗ್ರ ಶಿಸ್ತಿನ ಸೇವೆಯನ್ನು ಗುರುತಿಸಿ ನೀಡಲಾಗುವ ಈ ಪ್ರಶಸ್ತಿ, ಅಧಿಕಾರಿಗಳಿಗೆ ಮತ್ತಷ್ಟು ಉತ್ಸಾಹ ನೀಡುವಂತಾಗಿದೆ. ಎಲ್ಲಾ ಪುರಸ್ಕೃತರಿಗೆ ಕರ್ನಾಟಕ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಹಾರ್ದಿಕ ಶುಭಾಶಯಗಳು!