September 10, 2025
sathvikanudi - ch tech giant

ಆಯನೂರಿನ SLV ಅಯ್ಯಂಗಾರ್ ಬೇಕರಿಗೆ ಭಾರಿ ಅಗ್ನಿ ಅವಘಡ ….

Spread the love

ಶಿವಮೊಗ್ಗ :

2024ರ ಆಗಸ್ಟ್ 21ರಂದು ಮಧ್ಯಾಹ್ನ 2 ಗಂಟೆಗೆ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಯನೂರು ಗ್ರಾಮದ ಹಣೆಗೆರೆಕಟ್ಟೆ ಕ್ರಾಸ್ ರಸ್ತೆಯಲ್ಲಿರುವ ಪ್ರೀತೀಕ್ ಬಿನ್ ಲೋಕೇಶ್ ಅವರು ಹೊಂದಿರುವ ಎಸ್ ಎಲ್ ವಿ ಅಯ್ಯಂಗಾರ್ ಬೇಕರಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿತು. ಫ್ರಿಡ್ಜ್ ಗ್ಯಾಸ್ ಲೀಕೇಜ್‌ನ ಕಾರಣದಿಂದಾಗಿ, ಪ್ಲೇವುಡ್ ಮತ್ತು ಪಿಒಪಿ ಗೆ ಬೆಂಕಿ ಹಬ್ಬಿತು.



ಈ ಅಗ್ನಿ ಅವಘಡವು ಬೇಕರಿಯ ಎರಡು ಗ್ಯಾಸ್ ಸಿಲಿಂಡರ್‌ಗಳು ಮತ್ತು ಮೂರು ಫ್ರಿಡ್ಜ್‌ಗಳನ್ನು ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋಗಿತು. ಇದರಿಂದ ಉಂಟಾದ ನಷ್ಟವು ಸುಮಾರು ಹತ್ತರಿಂದ ಹನ್ನೆರಡು ಲಕ್ಷ ರೂಪಾಯಿಯಷ್ಟು ಎಂದು ಅಂದಾಜಿಸಲಾಗಿದೆ.



ಪೊಲೀಸರ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯ ಜೊತೆಗೆ ಸ್ಥಳೀಯ ಸಾರ್ವಜನಿಕರು ಕೂಡ ಬೆಂಕಿಯನ್ನು ನಂದಿಸಲು ಸಹಕರಿಸಿದರು. ಎಲ್ಲರ ಸಹಾಯದ ಮೂಲಕ ಬೆಂಕಿಯನ್ನು  ನಂದಿಸಲು ಶ್ರಮಿಸಲಾಯಿತು.

ಈ ಅವಘಡದಿಂದಾಗಿ ವ್ಯಾಪಾರಿಕ ಸ್ಥಳ ಸಂಪೂರ್ಣವಾಗಿ ಹಾಳಾಗಿದ್ದು, ಮಾಲೀಕರಿಗೆ ಹಣಕಾಸು ನಷ್ಟ ಹಾಗೂ ಇತರ ಸಮಸ್ಯೆಗಳನ್ನೂ ಎದುರಿಸುವ ಪರಿಸ್ಥಿತಿ ಉಂಟಾಗಿದೆ. ಈ ಅವಘಡವು ಕುಂಸಿ ಪೊಲೀಸ್  ಠಾಣೆ ವ್ಯಾಪ್ತಿಯಲ್ಲಿ ಸಂಭಾವಿಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ .

WhatsApp Image 2025-06-21 at 19.57.59
Trending Now