September 10, 2025
sathvikanudi - ch tech giant

ಕನ್ನಡ ನಾಡು ಹಿತರಕ್ಷಣಾ ಸಮಿತಿ: ಬಂದ್‌ಗೆ ಬೆಂಬಲವಿಲ್ಲ, ಎಂಇಎಸ್ ನಿಷೇಧಿಸಿ..!?

Spread the love



ಪೀಣ್ಯ, ದಾಸರಹಳ್ಳಿ: ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಕನ್ನಡ ನಾಡು ಹಿತರಕ್ಷಣಾ ಸಮಿತಿ ಸಂಸ್ಥಾಪಕ ಕೃಷ್ಣಮೂರ್ತಿ ಸ್ಪಷ್ಟಪಡಿಸಿದರು. ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಘೋಷಿಸಿರುವ ಬಂದ್ ಅನ್ನು ನಾವು ಬೆಂಬಲಿಸುವುದಿಲ್ಲ ಎಂದು ಅವರು ತಿಳಿಸಿದರು.

ದಾಸರಹಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮರಾಠಿಗರ ಪುಂಡಾಟಿಕೆ, ಅವರ ಅಟ್ಟಹಾಸ ಮತ್ತು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ನಿಷೇಧ ಮಾಡಬೇಕು. ಕರ್ನಾಟಕದಲ್ಲಿ ವಾಸವಿರುವ ಮರಾಠಿಗರು ಕನ್ನಡಿಗರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಎಸಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಮನವಿ ಮಾಡಿದರು.

ಸರ್ಕಾರ ಕ್ರಮ ಕೈಗೊಳ್ಳಬೇಕು:

“ನಮ್ಮ ಕನ್ನಡ, ನೆಲ, ಜಲ ಮತ್ತು ಹಕ್ಕುಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕರ್ನಾಟಕದಲ್ಲಿ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಮನ್ನಣೆ ನೀಡಬೇಕು. ಸರ್ಕಾರವು ಕನ್ನಡ ಸಂಘಟನೆಗಳಿಗೆ ಸಹಕಾರ ನೀಡಬೇಕು,” ಎಂದು ಕೃಷ್ಣಮೂರ್ತಿ ತಿಳಿಸಿದರು.

ಬಂದ್ ಜನಸಾಮಾನ್ಯರಿಗೆ ತೊಂದರೆ:

“ಬಂದ್ ಮಾಡುವುದರಿಂದ ಆರ್ಥಿಕವಾಗಿ ರಾಜ್ಯಕ್ಕೆ ನಷ್ಟವಾಗುತ್ತದೆ. ಸಾರ್ವಜನಿಕರಿಗೆ ಅನಗತ್ಯ ತೊಂದರೆಯಾಗುತ್ತದೆ. ಬಂದ್‌ನಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅದಕ್ಕಾಗಿಯೇ ನಾವು ಬಂದ್‌ಗೆ ವಿರೋಧ ವ್ಯಕ್ತಪಡಿಸುತ್ತೇವೆ. ಆದರೆ ನಮ್ಮ ಪ್ರಾಥಮಿಕ ಆಗ್ರಹವೆಂದರೆ ಎಂಇಎಸ್ ಅನ್ನು ಕರ್ನಾಟಕದಿಂದ ಸಂಪೂರ್ಣವಾಗಿ ಬ್ಯಾನ್ ಮಾಡಬೇಕು,” ಎಂದು ಅವರು ಒತ್ತಿಹೇಳಿದರು.

ಮುಖ್ಯಮಂತ್ರಿ ಮತ್ತು ಡಿಸಿಎಂಗೆ ಮನವಿ:

ಕನ್ನಡ ನಾಡು ಹಿತರಕ್ಷಣಾ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಿದೆ. “ಕನ್ನಡಿಗರ ಹಿತವನ್ನು ಕಾಪಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಮರಾಠಾ ಸಂಘಟನೆಗಳ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಬೇಕು. ಕರ್ನಾಟಕದಲ್ಲಿ ಕನ್ನಡಿಗರ ಹಕ್ಕುಗಳನ್ನೂ ಸಂರಕ್ಷಿಸಬೇಕು,” ಎಂದು ಅವರು ಆಗ್ರಹಿಸಿದರು.

ಎಂಇಎಸ್ ನಿಷೇಧವೇ ನಮ್ಮ ಗುರಿ:

“ನಮ್ಮ ಹಿಂದಿನ ಹೋರಾಟಗಳಂತೆ, ಈ ಸಲವೂ ನಾವು ಕನ್ನಡಿಗರ ಹಿತವನ್ನು ಮೀರಿಸಿ ನೋಡುವುದಿಲ್ಲ. ಬಂದ್‌ನಂತಹ ತಾತ್ಕಾಲಿಕ ನಿರ್ಧಾರಗಳಿಗಿಂತಾ, ಎಂಇಎಸ್ ನಿಷೇಧವಾಗಬೇಕು ಎಂಬುದೇ ನಮ್ಮ ಮಹತ್ವದ ಬೇಡಿಕೆಯಾಗಿದೆ,” ಎಂದು ಕೃಷ್ಣಮೂರ್ತಿ ಕೊನೆಗೆ ಸ್ಪಷ್ಟಪಡಿಸಿದರು.

WhatsApp Image 2025-06-21 at 19.57.59
Trending Now