
ಉಡುಪಿ: ಜಿಲ್ಲೆಯ ಜನತೆಗೆ ಮೂಲಸೌಲಭ್ಯಗಳ ಕೊರತೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸಬೇಕಾದ ಉಡುಪಿ ಜಿಲ್ಲೆಯ ಶಾಸಕರಾದ ಸುವರ್ಣ ಮತ್ತು ಸುನಿಲ್ ಕುಮಾರ್ ಅವರು, ಪ್ರತಿಯಾಗಿ ಕೋಳಿ ಅಂಕ (ಕೋಳಿ ಜೂಜು)ಗೆ ಪರವಾನಿಗೆ ನೀಡುವ ಬಗ್ಗೆ ಪ್ರಶ್ನೆ ಕೇಳಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ರಸ್ತೆಗಳ ದುರಸ್ಥಿ, ಸರ್ಕಾರಿ ಶಾಲೆಗಳಲ್ಲಿ ಅಧ್ಯಾಪಕರ ಕೊರತೆ,ಆಸ್ಪತ್ರೆಗಳಲ್ಲಿ ತಂತ್ರಜ್ಞರು, ಮತ್ತು ಸಿಬ್ಬಂದಿಗಳ ಕೊರತೆ, ಬ್ರಹ್ಮವರ ಸಕ್ಕರೆ ಕಾರ್ಖಾನೆ ಹಗರಣ, ರೈತರ ಹೋರಾಟ,ಕಂದಾಯ ಹಾಗೂ ಜಿಲ್ಲಾ ಪಂಚಾಯತಿ ಗಳಲ್ಲಿ ನೌಕರರ ಕೊರತೆ ಹೀಗೆ ಇಂತಹ ಹಲವಾರು ಸಮಸ್ಯೆ ಗಳಿದ್ದು ಈ ಎಲ್ಲಾ ಜನಸಂಬಂಧಿತ ವಿಚಾರಗಳನ್ನು ಕಡೆಗಣಿಸಿ, ಶಾಸಕರು ಸದನದಲ್ಲಿ ಕೋಳಿ ಜೂಜಿಗೆ ಅನುಮತಿ ನೀಡಬೇಕೆ? ಎಂಬ ಪ್ರಶ್ನೆ ಎತ್ತಿದ್ದಾರೆ.
ಕೋಳಿ ಅಂಕ – ಕ್ರಿಕೆಟ್ ಅಲ್ಲ, ಜೂಜಿನ ಬೇಟೆ!
ಇದೀಗ ಜಿಲ್ಲೆಯಲ್ಲಿ ಹಬ್ಬ-ಹರಿದಿನದಂದು ಹಳೆಯ ಕಾಲದಂತಿಲ್ಲ, ಕೋಳಿ ಅಂಕದ ಹೆಸರಿನಲ್ಲಿ ಸಟ್ಕಾ-ಮಟ್ಕಾ ಮಾಫಿಯಾ, ಜೂಜುಗಾರಿಕೆ, ದುಶ್ಚಟಗಳ ಬೆಳವಣಿಗೆ ಹೆಚ್ಚುತ್ತಿದೆ ಎಂಬ ಗಂಭೀರ ಆರೋಪಗಳಿವೆ. ಪೊಲೀಸರು ಈ ಕಾನೂನುಬಾಹಿರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರೂ, ಶಾಸಕರು ಅದರ ಪರವಾಗಿ ಕೇಳುವುದು ಆಶ್ಚರ್ಯಕರ!
ಪ್ರಜ್ಞಾವಂತ ನಾಗರಿಕರ ಆಕ್ರೋಶ
ಈ ಜನಪರ ಹೋರಾಟದ ವಿರುದ್ಧ, ಶಾಸಕರು ಜೂಜು ವಿರೋಧಿ ಪೊಲೀಸ್ ಅಧಿಕಾರಿಗಳನ್ನೇ ಟೀಕಿಸುತ್ತಿರುವುದು ಜನಪ್ರತಿನಿಧಿಗಳ ಹೀನ ಕೃತ್ಯ ಎಂದು ನಾಗರಿಕರು ವಾಗ್ದಾಳಿ ನಡೆಸಿದ್ದಾರೆ. “ನಮ್ಮ ಜಿಲ್ಲೆಗೆ ಸೂಕ್ತ ಆಸ್ಪತ್ರೆಗಳು ಇಲ್ಲ, ನಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಶಿಕ್ಷಕರಿಲ್ಲ, ಕೃಷಿ ಹಾಳಾಗುತ್ತಿದೆ. ಆದರೆ, ನಮ್ಮ ಶಾಸಕರಿಗೆ ಇದರ ಬಗ್ಗೆ ಚರ್ಚಿಸೋ ಆಸಕ್ತಿ ಇಲ್ಲ, ಬದಲಿಗೆ ಜೂಜಿಗೆ ಪರವಾನಿಗೆ ಕೇಳಲು ಮಾತ್ರ ಸಾಧ್ಯ!” ಎಂದು ಆಕ್ರೋಶ ವ್ಯಕ್ತವಾಗಿದೆ.
ಇಂತಹ ನೀತಿಮಟ್ಟವಿಲ್ಲದ ರಾಜಕಾರಣಿಗಳು, ಜನವಿರೋಧಿ ನಡೆ ತಳೆದರೆ ಮುಂದಿನ ಚುನಾವಣೆಯಲ್ಲಿ ಗಟ್ಟಿಯಾಗಿ ಉತ್ತರ ಕೊಡಬೇಕು ಎಂಬ ಮನೋಭಾವ ಪ್ರಬಲವಾಗಿದೆ. “ನೋಡೋಣ, ಈ ಶಾಸಕರು ಕೋಳಿ ಅಂಕದ ಜೂಜಿಗಾರರಿಂದಲೇ ಮತ ಕೇಳಲು ಹೋಗುತ್ತಾರಾ?” ಎಂದು ಜನರು ಪ್ರಶ್ನಿಸುತ್ತಿದ್ದಾರೆ.
💐……………………………………………………… 💐
ವರದಿ : ಆರತಿ ಗಿಳಿಯಾರ್
ಅಧ್ಯಕ್ಷರು ಪ್ರಚಾರ ಸಮಿತಿ
[ಕರ್ನಾಟಕ. ಕಾ. ಪತ್ರಕರ್ತರ ಸಂಪಾದಕರ ಹಾಗೂ ವಾರದಿಗಾರರ ಸಂಘ (ರಿ) ]