September 9, 2025
sathvikanudi - ch tech giant

ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛವಾಗಿಡುವುದು ಸೂಕ್ತ D C ಶುಭಕಲ್ಯಾಣ್…

Spread the love

ತುಮಕೂರು

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಿರ್ದೇಶನದ ಮೇರೆಗೆ ಕೊರಟಗೆರೆ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಮೂಲಗಳವನ್ನು ಭಾನುವಾರ ಸ್ವಚ್ಛತೆ ಮಾಡಲಾಯಿತು. ಇತ್ತೀಚೆಗೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾಧಿಕಾರಿಯವರು ಆದೇಶಿಸಿದ್ದರು.


ಈ ಆದೇಶದಂತೆ, ತಾಲೂಕಿನ 24 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಕಾರ್ಯಾಚರಣೆಗಾಗಿ ಗ್ರಾಮ ಪಂಚಾಯಿತಿಯ ಸದಸ್ಯರು, ಸ್ಥಳೀಯರು ಹಾಗೂ ಸ್ವಚ್ಛತಾ ಕಾರ್ಯಕರ್ತರು ಒಟ್ಟಾಗಿ ನೀರಿನ ಟ್ಯಾಂಕುಗಳು, ಬಾವಿಗಳು ಮತ್ತು ಇತರ ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿದರು.



ನೀರಿನ ಮೂಲಗಳ ಸ್ವಚ್ಛತೆಗಾಗಿ ಎಲ್ಲಾ ಅಗತ್ಯ ತಾಂತ್ರಿಕ ನೆರವು ಮತ್ತು ಮಾರ್ಗದರ್ಶನ ನೀಡಲು ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಪಂಚಾಯತಿ ರಾಜ್ಯದಲ್ಲಿ ಕಟುಕ್ರಮ ಕೈಗೊಂಡಿವೆ.

ಈ ಕಾರ್ಯಾಚರಣೆ ಮೂಲಕ ಸಾಂಕ್ರಾಮಿಕ ರೋಗಗಳ ವ್ಯಾಪ್ತಿಯನ್ನು ತಡೆಗಟ್ಟಲು ಮತ್ತು ಸಮುದಾಯದ ಆರೋಗ್ಯವನ್ನು ಸುರಕ್ಷಿತವಾಗಿಡಲು ಸಹಾಯವಾಗುತ್ತದೆ.

ಈ ರೀತಿಯ ಕಾರ್ಯಕ್ರಮಗಳು ಮುಂದುವರಿಯುವುದರಿಂದ ಗ್ರಾಮೀಣ ಪ್ರದೇಶದ ಜನತೆ ಸ್ವಚ್ಛ ನೀರು ಬಳಸುವಂತೆ ಪ್ರೇರೇಪಿಸಲ್ಪಡುತ್ತಾರೆ, ಜೊತೆಗೆ ಆರೋಗ್ಯವಂತ ಜೀವನ ಶೈಲಿಯನ್ನು ಅರಿತು ಅನುಸರಿಸುತ್ತಾರೆ. ಯಾವುದೇ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದೆ ಸುಖಜೀವನ ನಡೆಸುವಲ್ಲಿ ಯಶಸ್ವಿಯಾಗಬವುದು…

WhatsApp Image 2025-06-21 at 19.57.59
Trending Now