
ಶಿವಮೊಗ್ಗ, ಜೂನ್ 12 – ಶಿವಮೊಗ್ಗ ತಾಲ್ಲೂಕಿನ ಕೋನಗವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಲಕೇಶಪುರ ಗ್ರಾಮದಲ್ಲಿ ಜನತೆ ದಿನನಿತ್ಯ ಬೀದಿ ನಾಯಿಗಳ ಹಲ್ಲೆ, ಕುಡಿಯುವ ನೀರಿನ ಕೊರತೆ ಹಾಗೂ ಅಧಿಕಾರಿಗಳ ಅಮಾನ್ಯ ಜವಾಬ್ದಾರಿಯಿಲ್ಲದ ವರ್ತನೆಯಿಂದ ಹತಾಶರಾಗಿದ್ದಾರೆ. ಕಳೆದ ವಾರದಲ್ಲಿ ಈ ಗ್ರಾಮದಲ್ಲಿ ನಾನಾ ರೀತಿಯ ತೊಂದರೆಗಳನ್ನು ಜನ ಅನುಭವಿಸುತ್ತಿದ್ದು, ಬೀದಿ ನಾಯಿಯಾ ಕಡಿತಕ್ಕೆ ಮಕ್ಕಳು, ವೃದ್ಧರು ಹಾಗೂ ಬೈಕ್ ಸವಾರರು ಸೇರಿದ್ದಾರೆ. ಬೀದಿ ನಾಯಿಗಳಿಂದ ಜನರ ಜೀವಕ್ಕೂ ತೊಂದರೆಯಾಗಿದ್ದು, ಪ್ರತಿದಿನದ ಚಟುವಟಿಕೆಗಳಿಗೆ ಬಯಭೀತಿ ವಾತಾವರಣ ಉಂಟಾಗಿದೆ.
ಇದೇ ವೇಳೆ ಪಂಚಾಯತಿಗೆ ಅಡಳಿತ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದೆ, ಸಮಸ್ಯೆ ಹೇಳಿದ ಗ್ರಾಮಸ್ಥರಿಗೆ “ನಿಮ್ಮ ಊರಿನಲ್ಲಿ ನೀವು ಮಾತ್ರಾನಾ ಇದ್ದೀರಿ?”, “ಇನ್ನಾರೂ ದೂರು ನೀಡಿಲ್ಲವಲ್ಲ!” ನೀವು ಮಾತ್ರ ಪದೇ ಪದೇ ದೂರು ನೀಡುತ್ತೀರಿ ಎಂದು ಜವಾಬ್ದಾರಿಯಿಲ್ಲದ ಉತ್ತರ ನೀಡಿ ಕರೆ ಕಟ್ ಮಾಡುತ್ತಿದ್ದಾರೆ.ನಂತರ ದಿನದಂದು ಪುನಃ ಎಷ್ಟು ಬಾರಿ ಕರೆ ಮಾಡಿದರು ಸ್ಪಂದಿಸುವುದಿಲ್ಲ ಜನರ ಸುರಕ್ಷತೆ ಕುರಿತು ಬೆಲೆ ಇಲ್ಲದಂತೆ ಮಾತನಾಡುವ ಈ ನಡವಳಿಕೆ, ಅಧಿಕಾರಿಗಳ ನೀಚವಾದ ಮನೋಭಾವವನ್ನು ಬಿಂಬಿಸುತ್ತಿದೆ.
ಇದರೊಂದಿಗೆ, ಈ ಗ್ರಾಮ ಕುಡಿಯುವ ನೀರಿನ ಮತ್ತು ಬೀದಿ ದ್ವೀಪದ ತೀವ್ರ ಸಮಸ್ಯೆಗೂ ಒಳಗಾಗಿದ್ದು, ಪ್ರತಿದಿನ ನೀರಿಗಾಗಿ ನರಳಾಟ ನಡೆಯುತ್ತಿದೆ. ಗ್ರಾಮಸ್ಥರು ವಾಟರ್‌ಮ್ಯಾನ್‌ಗೆ ನೀರಿನ ಬಗ್ಗೆ ಕೇಳಿದಾಗ, ಅವರು “ನನಗೇನು ಕೇಳ್ಬೇಡಿ, ನನಗೆ ಸಂಬಳ ಕೊಡೋರು ನೀವಲ್ಲಾ ಅವರು, ಅವರು ಹೇಳಿದ ಹಾಗೇನೇ ಮಾಡೋದು, ದಿನಕ್ಕೆ ಒಂದೂ ಸರಿ ಮಾತ್ರ ನೀರು ಬಿಡ್ತೀನಿ” ನಾನು ಬಿಟ್ಟ ನೀರು ಏನಾಯಿತು, ಎಲ್ಲೋಯಿತು,ಎನ್ನುವ ಪ್ರಶ್ನೆಯ ಜೊತೆಗೆ ನನಗೇನು ಅದೇ ಕೆಲಸಾನ ಎಂಬ ಅಸಂಬದ್ಧ ಮಾತುಗಳಿಂದ ಉತ್ತರಿಸುತ್ತಿದ್ದಾರೆ.
ಈಗಿನ ವಾತಾವರಣದಲ್ಲಿ ಮಕ್ಕಳಿಂದ ಇಡಿದು ವೃದ್ಧರವರೆಗೂ ಡೆಂಗ್ಯೂ,ಮಲೇರಿಯಾ, ಇನ್ನಿತರೇ ಮರಣಾoತಿಕಾ ಖಾಹಿಲೆಗಳಿಂದ ಅಲವಾರು ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದರು ಕೂಡ ಕುಡಿಯುವ ನೀರಿನ ತೊಟ್ಟಿಗಳನ್ನ ಸ್ವಚ್ಛ ಗೊಳಿಸಲು ಸಂಬಂಧ ಪಟ್ಟವರಿಗೆ ತಿಳಿಸಿದರುಕೂಡ 6 ತಿಂಗಳು ಕಳೆದರುಕೂಡ ಸ್ವಚ್ಛ ಗೊಳಿಸುವುದು ಕಷ್ಟ,ಅದಲ್ಲದೆ ದೂರು ನೀಡಿದವರ ಬಗ್ಗೆ ಅಸಭ್ಯವಾಗಿ ಮಾತನಾಡುತ್ತ “ಯಾವನೋ ನನ್ನ ಬಗ್ಗೆ ದೂರು ನೀಡಿದ್ದಾನೆ ಅಂತವನು ಇಂತವನು ಎಂದು ಬೈದಾಡಿಕೊಂಡು ಓಡಾಡುತ್ತಿರುವರು” ಆಗಾದರೆ ಅವರ ಕೆಲಸವೇನು…? ಎನ್ನುವುದು ತಿಳಿದಿಲ್ಲ,
ಪ್ರಶ್ನೆಸುವ ಅಧಿಕಾರಿಗಳೇ ಮೌನ, ಪ್ರಬಲ ವ್ಯಕ್ತಿಗಳ ಕರೆಗಳಿಗೂ ಅಥವಾ ಇನ್ನಿತರೇ ಆಮಿಷಕ್ಕೋ ಒಳಗಾಗಿ ಕೈಕಟ್ಟಿ ಕುಳಿತಿದ್ದಾರೆ. ಒಟ್ಟಾರೆ ಈ ಗ್ರಾಮದ ವಿಷಯವಾಗಿ ಮಾತನಾಡುವ ಸದಸ್ಯರಂತೂ ಬಿಡಿ ಚುನಾವಣೆ ಸಮಯಕ್ಕೆ ಬಂದವರಷ್ಟೇ ನಂತರ ತಲೆ ಹಾಕಿನೂ ನೋಡಿರುವುದಿಲ್ಲ ಇನ್ನಾದರೂ ಬದಲಾವಣೆ ಹಾಗುವುದೋ……! ತಿಳಿಯದು.
ಒಟ್ಟಾರೆ, ವಾಲಕೇಶಪುರ ಗ್ರಾಮದಲ್ಲಿ ಸಾರ್ವಜನಿಕ ಸೇವೆಗಳ ಪೂರೈಕೆ ಸಂಪೂರ್ಣ ಕುಸಿದಂತಾಗಿದೆ. ಬೀದಿ ನಾಯಿಗಳ ನಿಯಂತ್ರಣ, ಶುದ್ಧ ಕುಡಿಯುವ ನೀರಿನ ಪೂರೈಕೆ, ಪಂಚಾಯತಿ ಸದಸ್ಯರ ಜವಾಬ್ದಾರಿ ನಿರ್ವಹಣೆ – ಎಲ್ಲವೂ ಕೇವಲ ದಾಖಲೆಗಳ ಮಟ್ಟದಲ್ಲೇ ಉಳಿದಿವೆ. ಅಧಿಕಾರಿಗಳ ಈ ನಿರ್ಲಕ್ಷ್ಯ ಮತ್ತು ಅಮಾನ್ಯತೆಯ ವಿರುದ್ಧ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಬೆಳವಣಿಗೆಯನ್ನೆಲ್ಲಾ ಗಮನಕ್ಕೆ ತೆಗೆದುಕೊಂಡು, ಜನರ ಕೊನೆ ನಂಬಿಕೆಯಾಗಿ ಉಳಿದಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಉನ್ನತ ಅಧಿಕಾರಿಗಳು ಕ್ರಮ ಕೈಗೊಂಡು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗ್ರಾಮೀಣ ಜನಜೀವನವನ್ನು ಕಾಪಾಡಬೇಕು ಎಂಬುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಗ್ರಾಮಸ್ತರಿಂದ ಕಾನೂನು ಹೋರಾಟವೂ ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ….✍🏻✍🏻✍🏻