September 9, 2025
sathvikanudi - ch tech giant

ಬಿಜಾಪುರ ಜಿಲ್ಲೆ ಹಾಗೂ ಸಿಂದಗಿ ತಾಲೂಕ ಅಧ್ಯಕ್ಷರಿಗೆ ಆದೇಶ ಪ್ರಮಾಣಪತ್ರ ವಿತರಣೆ..!

Spread the love




ಬೆಂಗಳೂರು, ಎಪ್ರಿಲ್ 9:
ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘದ ವತಿಯಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬಿಜಾಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಂಗಮೇಶ ಎಂ.ಕೆ. ಹಾಗೂ ಸಿಂದಗಿ ತಾಲೂಕ ಘಟಕದ ಅಧ್ಯಕ್ಷರಾಗಿ ಶ್ರೀಶೈಲಪ್ಪ ಗೊರಗುಂಡಗಿ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ.



ಈ ಸಂದರ್ಭ ಅವರನ್ನು ಸಂಘದ ಪರವಾಗಿ ಆದೇಶ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಶ್ರೀ ಶಶಿಕಾಂತ್ ಕಾಂಬಳೆ, ಸಲಹಾ ಸಮಿತಿ ಅಧ್ಯಕ್ಷ ಸಂಜಯ್ ಸಾವಂತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ್ ಎಚ್.ಸಿ., ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಯಶಸ್ವಿನಿ ಬಿ ಹಾಗೂ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.



ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮಾತುಕತೆಗಳಲ್ಲಿ ಸಂಘದ ಭವಿಷ್ಯ ಯೋಜನೆಗಳು, ಜಿಲ್ಲಾ ಮಟ್ಟದ ಚಟುವಟಿಕೆಗಳ ಸಂಘಟನೆಯ ಬಗ್ಗೆ ಚರ್ಚೆ ನಡೆಯಿತು. ಸಂಘದ ಉದ್ದೇಶಗಳು, ಪತ್ರಕರ್ತರ ಹಕ್ಕುಗಳು ಹಾಗೂ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಮೇಲೆ ಗಮನ ಹರಿಸುವ ಬಗ್ಗೆ ನಿರ್ಧಾರಗಳೂ ತೆಗೆದುಕೊಳ್ಳಲಾಯಿತು.

ಕಾರ್ಯಕ್ರಮವು ಉತ್ತಮವಾಗಿ ನೆರವೇರಿದ್ದು, ನೂತನವಾಗಿ ನೇಮಕಗೊಂಡ ಎಲ್ಲ ಪದಾಧಿಕಾರಿಗಳಿಗೆ ವಿಜಯ್ ಮುನಿಯಪ್ಪ ರವರು ಶುಭಾಶಯಗಳು ವ್ಯಕ್ತಪಡಿಸಲಾಯಿತು.

WhatsApp Image 2025-06-21 at 19.57.59
Trending Now