March 3, 2026
Spread the love

ಬೆಂಗಳೂರು: ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ (Pen drive case) ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ರೆಡ್ ಕಾರ್ನರ್ ನೊಟೀಸ್ (Red Corner Notice) ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಭವಾನಿ ರೇವಣ್ಣ (Bhavani Revanna) ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್‌ ಮಾಡಿದೆ.ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೊಟೀಸ್ (Lookout notice) ಜಾರಿ ಮಾಡಲಾಗಿದೆ. ಆದರೆ ಇದು ದೇಶದೊಳಗೆ ಮಾತ್ರ ಅನ್ವಯವಾಗುತ್ತದೆ. ದೇಶದೊಳಗೆ ಯಾವುದೇ ಏರ್‌ಪೋರ್ಟ್‌, ಬಂದರು, ರೈಲ್ವೇ ನಿಲ್ದಾಣದಲ್ಲೂ ಇದರ ಮೂಲಕ ಪ್ರಜ್ವಲ್‌ ಅವರನ್ನು ಬಂಧಿಸಬಹುದು. ಆದರೆ ಇದು ಹೊರದೇಶಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದಿಲ್ಲವಾದ್ದರಿಂದ, ವಿದೇಶದಿಂದ ಕರೆತರಲು ಇದು ಸಾಕಾಗುವುದಿಲ್ಲ.ಒಂದು ವಾರ ಸಮಯ ಬೇಕು” ಎಂದು ಪ್ರಜ್ವಲ್‌ ರೇವಣ್ಣ ಮನವಿ ಮಾಡಿಕೊಂಡಿದ್ದರು. ಮೇ 15ರಂದು ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿದ್ದರು. ಇದೆಲ್ಲವೂ ಎಸ್‌ಐಟಿಯ ದಾರಿ ತಪ್ಪಿಸುವ ತಂತ್ರ ಎಂದು ಭಾವಿಸಲಾಗಿದೆ. ಬಂದರೆ ಬಂಧನ ಆಗುವುದು ಖಚಿತವಾಗಿರುವುರಿಂದ, ಪ್ರಜ್ವಲ್ ರೇವಣ್ಣ ಸದ್ಯ ವಾಪಸು ಬರೋದು ಅನುಮಾನವೆನಿಸಿದೆ. ಪ್ರಜ್ವಲ್ ಬಳಿ ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವುದರಿಂದ ಓಡಾಟಕ್ಕೆ ವೀಸಾ ಆಗತ್ಯ ಬೀಳುವುದಿಲ್ಲ. ಇದರ ಮೂಲಕ ದೇಶದಿಂದ ದೇಶಕ್ಕೆ ಓಡಾಡಿಕೊಂಡು ಇರಬಹುದು.ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮನವಿ ಮಾಡುವ ಸಾಧ್ಯತೆ ಇದೆ. ಸಿಐಡಿ ಮುಖಾಂತರ ಸಿಬಿಐಗೆ ಮನವಿ ಮಾಡಿ, ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮನವಿ ಮಾಡಬೇಕು. ಸಿಬಿಐ ಸಂಸ್ಥೆಯು ಇಂಟರ್‌ಪೋಲ್‌ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೊಟೀಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೊಟೀಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ.ಭವಾನಿಗೂ ಬುಲಾವ್‌ಅಪ್ಪ ಮಗನ ಬಳಿಕ ಭವಾನಿ ರೇವಣ್ಣಗೂ ಎಸ್ಐಟಿ‌ ನೊಟೀಸ್ ಕಳಿಸಿದೆ. ಕೆಆರ್ ನಗರ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಪ್ರಕರಣ ಸಂಬಂಧ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ಕಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

Leave a Reply

Your email address will not be published. Required fields are marked *